ಮಹೀಂದ್ರದಿಂದ 9 ಹೊಸ ಕಾರುಗಳು
ದೇಶದ ಎಸ್ ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು 2015-16ನೇ ಸಾಲಿನಲ್ಲಿ ದೇಶಕ್ಕೆ ಒಂಬತ್ತು ಹೊಸ ಮಾದರಿಗಳನ್ನು ಪರಿಚಯಸುವ ಯೋಜನೆ ಹೊಂದಿದೆ.
ಈಗಷ್ಟೇ ನ್ಯೂ ಏಜ್ ಎಕ್ಸ್ ಯುವಿ 500 ಮಾದರಿ ಪರಿಚಯಿಸಿರುವ ಮಹೀಂದ್ರ ಸಂಸ್ಥೆಯು ನಿರಂತರ ಅವಧಿಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಇರಾದೆ ಹೊಂದಿದೆ.

ಮಹೀಂದ್ರ ಒಂಬತ್ತು ಮಾದರಿಗಳ ಪೈಕಿ ನ್ಯೂ ಏಜ್ ಎಕ್ಸ್ ಯುವಿ 500 ಕೂಡಾ ಒಂದಾಗಿದೆ. ಅಂದರೆ ನಿಕಟ ಭವಿಷ್ಯದಲ್ಲೇ ಹೊಸ ಮಾದರಿಗಳನ್ನು ನಿರೀಕ್ಷಿಸಬಹುದಾಗಿದೆ.
ಈಗಿರುವ ಮಾದರಿಗಳ ಪರಿಷ್ಕೃತ ಮಾಡೆಲ್ ಗಳೊಂದಿಗೆ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಯೋಜನೆಯಾಗಿದೆ. ನಿಮಗೆಲ್ಲಿರಿಗೂ ತಿಳಿದಿರುವಂತೆಯೇ ಕೆಲವು ಸಮಯಗಳ ಹಿಂದೆಯಷ್ಟೇ ಪರಿಷ್ಕೃತ ಸ್ಕಾರ್ಪಿಯೊ ಬಿಡುಗಡೆಗೊಳಿಸಲಾಗಿತ್ತು.
ಉಪಯುಕ್ತ ವಾಹನ ವಿಭಾಗದಲ್ಲಿ ಮಹೀಂದ್ರ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಅಲ್ಲದೆ ಹೊಸ ಕಾಂಪಾಕ್ಟ್ ಎಸ್ ಯುವಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.


Click it and Unblock the Notifications








