ಮಹೀಂದ್ರ 'ಎಸ್101' ನಾಮಕರಣಕ್ಕೆ ದಿನಾಂಕ ನಿಗದಿ
'ಎಸ್101' ಎಂಬ ಕೋಡ್ ಪಡೆದುಕೊಂಡಿರುವ ಮಹೀಂದ್ರ ಸಂಸ್ಥೆಯ ಅತಿ ನೂತನ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯಿವಿ) ಬಹು ಬೇಗನೇ ನಾಮಕರಣವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿಗೆ ಡಿಸೆಂಬರ್ 18ರಂದು ನಾಮಕರಣವಾಗಲಿದೆ.
Also Read: ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್ ಮುಂದಕ್ಕೆ ಓದಿ
ವಾಹನ ವಲಯಗಳಲ್ಲಿ ಎಕ್ಸ್‌ಯುವಿ100 ಎಂದು ಗುರುತಿಸಿಕೊಂಡಿರುವ ಈ ನೂತನ ಕಾರಿಗೆ ಸಂಸ್ಥೆಯು ಇದೇ ಹೆಸರನ್ನು ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನೊಂದೆಡೆ ಹೊಸ ಮಾದರಿಗೆ 'ಕೆಯುವಿ100' ನಾಮಕರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ ಮುಂದಿನ ವರ್ಷಾರಂಭದಲ್ಲಿ ಭರ್ಜರಿ ಬಿಡುಗಡೆಯನ್ನು ಕಾಣಲಿದೆ.

ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿರುವ ಮಹೀಂದ್ರ ಎಸ್101 ಕಾಂಪಾಕ್ಟ್ ಎಸ್‌ಯುವಿ ಭಾರತೀಯರ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು ಮಾರುಕಟ್ಟೆಯಲ್ಲಿ ಕೈಗೆಟುಕುವ ದರಗಳಲ್ಲಿ ಸಣ್ಣ ಎಸ್‌ಯುವಿ ಕೊರತೆಯನ್ನು ನೀಗಿಸಲಿದೆ.

ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ ಆರಂಭಿಕ ಬೆಲೆ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಲ್ಲದೆ ಮುಂದಿನ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

ಕಾರಿನಡಿಯಲ್ಲಿ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಇರುವ ನಿರೀಕ್ಷೆಯಿದ್ದು, 5 ಸ್ಪೀಡ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ಕಂಡುಬರಲಿದೆ.

ಎಲ್ಲ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನೂತನ ಮಹೀಂದ್ರ ಎಸ್ ಯುವಿ ನಿರ್ಮಾಣವಾಗುತ್ತಿದ್ದು, ಮೊನೊಕಾಕ್ ಸಂರಚನೆಯನ್ನು ಪಡೆಯಲಿದೆ. ಇದಕ್ಕೂ ಮೊದಲು ಎಕ್ಸ್‌ಯುವಿ500 ನಿರ್ಮಾಣದಲ್ಲೂ ಇದೇ ನೀತಿ ಅನುಸರಿಸಲಾಗಿತ್ತು.

ಇದೀಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದ ಟಿಯುವಿ300 ಬಳಿಕವೀಗ ಮಹೀಂದ್ರ ಎಸ್101, ನಾಲ್ಕು ಮೀಟರ್ ಪರಿಧಿಯೊಳಗೆ ಮಗದೊಂದು ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದೆ.

ಬಂದೇ ಬಿಡ್ತು ಮಹೀಂದ್ರ ಟಿಯುವಿ300


Click it and Unblock the Notifications








