ಮಹೀಂದ್ರ ಎಲೆಕ್ಟ್ರಿಕ್ ಕಾರಿಗೆ 1 ಲಕ್ಷ ರು.ಗಳಷ್ಟು ಬೆಲೆ ಕಡಿತ

By Nagaraja

ನೀವು ಪರಿಸರ ಸ್ನೇಹಿ ವಿದ್ಯುತ್ ಕಾರನ್ನು ಖರೀದಿಸುವ ಯೋಚನೆ ಹೊಂದಿರುವೀರಾ? ಹಾಗಿದ್ದರೆ ಇದೇ ಸೂಕ್ತ ಕಾಲ. ಯಾಕೆಂದರೆ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಇ2ಒ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಒಂದು ಲಕ್ಷ ರು.ಗಳಷ್ಟು ಕಡಿತಗೊಳಿಸಿದೆ.

ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಿಗೆ ಕೇಂದ್ರ ಸರಕಾರ ಉತ್ತೇಜನ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂತಹದೊಂದು ಪೂರಕವಾದ ಬೆಳವಣಿಗೆ ಕಂಡುಬಂದಿದೆ. ಮಹೀಂದ್ರ ಇ2ಒ ಎಲೆಕ್ಟ್ರಿಕ್ ಕಾರಿನ ಬೆಲೆಯೀಗ 92,000 ರು.ಗಳಷ್ಟು ಕಡಿತವಾಗಲಿದೆ.

mahindra reva e20

ಮಹೀಂದ್ರ ಸಂಸ್ಥೆಯ ಉಪವಿಭಾಗವಾಗಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ವಿದ್ಯುತ್ ಚಾಲಿತ ವಾಹನಗಳನ್ನು ನಿರ್ಮಿಸುತ್ತದೆ. ಈಗ ಬೆಲೆಯಲ್ಲಿ ಶೇಕಡಾ 16 ಇಳಿಕೆಯುಂಟಾಗಿದೆ. ಇದಕ್ಕೂ ಮೊದಲು ದೆಹಲಿ ಎಕ್ಸ್ ಶೋ ರೂಂ ಬೆಲೆ 5.71 ಲಕ್ಷ ರು.ಗಳಷ್ಟಿತ್ತು. ಪ್ರಸ್ತುತ ಕಾರೀಗ ದೆಹಲಿ ಆನ್ ರೋಡ್ ಬೆಲೆ 4.79 ಲಕ್ಷ ರು.ಗಳಿಗ ಲಭ್ಯವಾಗಲಿದೆ. ಹಾಗಿದ್ದರೂ ಗ್ರಾಹಕರ ಖರೀದಿ ಅನುಕೂಲಕ್ಕಾಗಿ ಮಾಡಿರುವ ಮಾಸಿಕ ಎನರ್ಜಿ ಶುಲ್ಕದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಮಹೀಂದ್ರ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಕಿಕ್ಕಿರಿದು ತುಂಬಿದ ವಾಹನ ದಟ್ಟಣೆಯಿಂದ ಬಚಾವಾಗಲು, ಸುಲಭ ಚಾಲನೆ ಹಾಗೂ ಎರಡನೇ ಕಾರು ಹುಡುಕುವವರು ಮಹೀಂದ್ರ ವಿದ್ಯುತ್ ಕಾರುಗಳನ್ನು ಆಯ್ಕೆ ಮಾಡುತ್ತಾರೆ.

ಫೇಮ್ ಯೋಜನೆ
ಕೇಂದ್ರ ಸರಕಾರ ನೂತನ ಫೇಮ್ ಯೋಜನೆಯ (Faster Adoption and Manufacturing of Hybrid and Electric Vehicles) ಭಾಗವಾಗಿ ವಿದ್ಯುತ್ ಕಾರಿನ ಬೆಲೆಗಳಲ್ಲಿ ಭಾರಿ ಕಡಿತವುಂಟಾಗಿದೆ. ನೂತನ ಸ್ಕೀಮ್ ಅನುಸಾರವಾಗಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಬೈಕ್ ಗಳಿಗೆ 29,000 ರು. ಹಾಗೂ ವಿದ್ಯುತ್ ಹಾಗೂ ಹೈಬ್ರಿಡ್ ಕಾರುಗಳಿಗೆ 1.38 ಲಕ್ಷ ರು.ಗಳ ವರೆಗೆ ಉತ್ತೇಜನ ಸಿಗಲಿದೆ. ಅಂದ ಹಾಗೆ ರಾಷ್ಟ್ರೀಯ ಎಲೆಕ್ಟ್ರಿಕ್ ವಾಹಕ ಯೋಜನೆಯ ಗುರಿಯಾಗಿ ಇದನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲದೆ ಇದೇ ವರ್ಷದಿಂದಲೇ ಆರಂಭವಾಗಿರುವ ಯೋಜನೆಯ ಮೊದಲೆರಡು ವರ್ಷಗಳಲ್ಲೇ 795 ಕೋಟಿ ರು.ಗಳ ಸಹಾಯ ಮಾಡಲಿದೆ.

More from DriveSpark

Article Published On: Saturday, May 2, 2015, 10:07 [IST]
English summary
Mahindra & Mahindra slashes the price of its electric small car 'e2o' by Rs 92,000 following the launch of a central government scheme offering incentives on electric and hybrid vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+