ಮಹೀಂದ್ರ ಟಿಯುವಿ300; ನೀವು ತಿಳಿದುಕೊಳ್ಳಬೇಕಾದ 8 ಅಂಶಗಳು

ಸಣ್ಣ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ಅತಿ ನೂತನ ಮಹೀಂದ್ರ ಟಿಯುವಿ300 ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುವ ನಿರೀಕ್ಷೆಯಲ್ಲಿದೆ. ಇದು 6.90 ಲಕ್ಷ ರು. (ಪುಣೆ ಎಕ್ಸ್ ಶೋ ರೂಂ) ಬೆಲೆ ನಿಗದಿಗೊಳಿಸಲಾಗಿದೆ.

Also Read : ಮಹೀಂದ್ರ ಟಿಯುವಿ300 ಭರ್ಜರಿ ಬಿಡುಗಡೆ

ಪ್ರಸ್ತುತ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಹೊಸತನಕ್ಕೆ ಕಾರಣವಾಗಿರುವ ಮಹೀಂದ್ರ ಟಿಯುವಿ300 ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಂಟು ಅಂಶಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ.

01. ವಿನ್ಯಾಸ

01. ವಿನ್ಯಾಸ

ಸಂಸ್ಥೆಯು ತಿಳಿಸುವ ಪ್ರಕಾರ ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದ ಐಕಾನಿಕ್ ನೈಜ ನೀಲಿ ಎಸ್‌ಯುವಿ ವಿನ್ಯಾಸ ರಚಿಸಲಾಗಿದೆ.

02. ಎಂಜಿನ್

02. ಎಂಜಿನ್

1.5 ಲೀಟರ್ ತ್ರಿ ಸಿಲಿಂಡರ್ ಎಂಹಾಕ್80 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಟಿಯುವಿ300 230 ತಿರುಗುಬಲದಲ್ಲಿ 84 ಅಶ್ವಶಕ್ತಿ ಉತ್ಪಾದಿಸಲಿದೆ.

03. ಗೇರ್ ಬಾಕ್ಸ್

03. ಗೇರ್ ಬಾಕ್ಸ್

ಐದು ಸ್ಪೀಡ್ ಮ್ಯಾನುವಲ್ ಹಾಗೂ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಆಟೋ ಶಿಫ್ಟ್ ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಪರಿಚಯಿಸಲಾಗುತ್ತಿದೆ.

04. ಆಸನ

04. ಆಸನ

5+2 ಆಸನ ವ್ಯವಸ್ಥೆಯನ್ನು ಮಹೀಂದ್ರ ಟಿಯುವಿ300 ಹೊಂದಿರಲಿದೆ. ಅಂದರೆ ಏಳು ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದಾಗಿದೆ. ಈ ಪೈಕಿ ಹಿಂಭಾಗದಲ್ಲಿ ಇಬ್ಬರಿಗೆ ಮುಖಾಮುಖಿ ಸಿಟ್ಟಿಂಗ್ ವ್ಯವಸ್ಥೆಯನ್ನು ಕೊಡಲಾಗಿದೆ. ಇದು ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ.

05. ಸುರಕ್ಷತೆ

05. ಸುರಕ್ಷತೆ

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಗಳ ಭದ್ರತೆಯು ನೆರವಾಗಲಿದೆ.

06. ಮನರಂಜನೆ

06. ಮನರಂಜನೆ

ಮನರಂಜನೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ದೊಡ್ಡದಾದ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ (ಬ್ಲೂಟೂತ್, ಯುಎಸ್‌ಬಿ, ಆಕ್ಸ್) ಇದರಲ್ಲಿರಲಿದೆ.

07. ಗ್ರೌಂಡ್ ಕ್ಲಿಯರನ್ಸ್

07. ಗ್ರೌಂಡ್ ಕ್ಲಿಯರನ್ಸ್

ಎಸ್‌ಯುವಿ ಎಂದಾಕ್ಷಣ ಗ್ರೌಂಡ್ ಕ್ಲಿಯರನ್ಸ್ ಅತಿ ಹೆಚ್ಚಿ ಪ್ರಾಮುಖ್ಯತೆ ವಹಿಸುತ್ತದೆ. ಮಹೀಂದ್ರ ಟಿಯುವಿ300ನಲ್ಲಿರುವ 184 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೆಚ್ಚು ಪರಿಣಾಮಕಾರಿಯೆನಿಸಿಕೊಳ್ಳಲಿದೆ.

08. ಬಣ್ಣಗಳು

08. ಬಣ್ಣಗಳು

ಅಂತಿಮವಾಗಿ ಆರು ಬಣ್ಣಗಳ ಆಯ್ಕೆಯು ಇದರಲ್ಲಿರಲಿದೆ.

  • ವೆರ್ವ್ ಬ್ಲೂ,
  • ಗ್ಲೇಸಿಯರ್ ವೈಟ್,
  • ಡೈನಮೊ ರೆಡ್,
  • ಮೆಜೆಸ್ಟಿಕ್ ಸಿಲ್ವರ್,
  • ಬೋಲ್ಡ್ ಬ್ಲ್ಯಾಕ್,
  • ಮೋಲ್ಟನ್ ಓರೆಂಜ್
  • ವಿಶಿಷ್ಟ ಬಣ್ಣ: ಕೊಂಬಾಟ್ ಬ್ಯಾಟಲ್ ಗ್ರೀನ್

    ಇವನ್ನೂ ಓದಿ

    ಮಹೀಂದ್ರ ಟಿಯುವಿ300 ಸಮಗ್ರ ವಿವರಗಳು


More from DriveSpark

Article Published On: Friday, September 11, 2015, 10:14 [IST]
English summary
So what makes the TUV 300 stand out from the other compact SUVs? Here are eight stand out features of the Mahindra TUV 300:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+