ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

By Nagaraja

ಆನಂದ್ ಮಹೀಂದ್ರ ತನ್ನ ಸಂಸ್ಥೆಯ ಮೇಲೆ ಇಟ್ಟುಕೊಂಡಿರುವ ಪ್ರೀತಿ, ವಿಶ್ವಾಸ, ನಂಬಿಕೆ ಅಷ್ಟಿಷ್ಟಲ್ಲ. ವಂಶ ಪರಂಪರೆದಿಂದ ದೊರಕಿರುವ ಸ್ಥಾನಕ್ಕಿಂತಲೂ ಮಿಗಿಲಾಗಿ ತನ್ನದೇ ಆದ ಕೌಶಲ್ಯದಿಂದ ಮೇಲೆ ಬಂದಿರುವ ಆನಂದ್ ಮಹೀಂದ್ರ, ದೇಶದ ನಂ.1 ಕ್ರೀಡಾ ಬಳಕೆಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

Also Read: ಮಹೀಂದ್ರಗೆ ಹೊಸ ಜೀವ ತುಂಬಿದ ಆನಂದ್ ಮಹೀಂದ್ರ

ಖ್ಯಾತ ವ್ಯಕ್ತಿಗಳು ತಮ್ಮದೇ ಸಂಸ್ಥೆಗಿಂತಲೂ ಮಿಗಿಲಾಗಿ ವಿಲಾಸಿ ಪಯಣಕ್ಕಾಗಿ ಇತರೆ ಐಷಾರಾಮಿ ಸಂಸ್ಥೆಗಳ ಕಾರುಗಳತ್ತ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ಆದರೆ ಇವೆಲ್ಲದಕ್ಕಿಂತಲೂ ವ್ಯತಿರಿಕ್ತವಾಗಿ ಗುರುತಿಸಿಕೊಂಡಿರುವ ಆನಂದ್ ಮಹೀಂದ್ರ, ವಿಶೇಷ ಮಾರ್ಪಾಡುಗೊಳಿಸಿರುವ ಮಹೀಂದ್ರ ಟಿಯುವಿ300 ಪಡೆಯುವ ಮೂಲಕ ಮಗದೊಮ್ಮೆ ಉದ್ಯಮಿಗಳ ಪಾಲಿಗೆ ಮಾದರಿಯಾಗಿದ್ದಾರೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆನಂದ್ ಮಹೀಂದ್ರ, ತಮ್ಮದೇ ಗರಡಿಯಲ್ಲಿ ವಿಶೇಷವಾಗಿ ಪಳಗಿಸಿರುವ ಟಿಯುವಿ300 ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದ ಟಿಯುವಿ200 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ಇತ್ತೇಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದು, ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಮಹೀಂದ್ರ ಟಿಯುವಿ300 ಅತಿ ವಿಶಿಷ್ಟತೆಯ '1555' ನಂಬರ್ ಪ್ಲೇಟ್ ಸಹ ಪಡೆದುಕೊಂಡಿದೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಒಲೈವ್ ಗ್ರೀನ್ ಬಣ್ಣವನ್ನು ಇದಕ್ಕೆ ಹಚ್ಚಲಾಗಿದ್ದು, ಮಹೀಂದ್ರ ನೈಜ ಆಕ್ಸೆಸರಿಯಿಂದಲೇ ಮಾರ್ಪಾಡುಗೊಳಿಸಲಾಗಿದೆ. ಅಲ್ಲದೆ ಆರ್ಮರ್ಡ್ ಬಾಡಿ ಕಿಟ್ ಆಳವಡಿಸಲಾಗಿದೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಟೋನ್ ಗಾರ್ಡ್, ಕ್ರೋಮ್ ಸ್ಪರ್ಶತೆ, ಸೈಡ್ ಕ್ಲಾಡಿಂಗ್, ವರ್ಧಿತ ಫ್ರಂಟ್ ಬಂಪರ್, ವಿಶೇಷ ವೀಲ್ ಆರ್ಚ್, ಮಾರ್ಕರ್ ಲ್ಯಾಂಪ್, ಬೊನೆಟ್ ಹಲ್ ಹಾಗೂ ವಿಶಿಷ್ಟ ರೂಫ್ ಕಾಣಬಹುದಾಗಿದೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಇನ್ನುಳಿದಂತೆ ಕಾರಿನೊಳಗೆ ವಿನ್ಯಾಸಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಲ್ಲಿ ಮಾಹಿತಿ ಮನರಂಜನಾ ವ್ಯವಸ್ಥೆ, ಡ್ಯಾಶ್ ಬೋರ್ಡ್ ಎಲ್ಲವೂ ಮನಮೋಹಕವಾಗಿರಲಿದೆ.

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಸಬ್ ಫೋರ್ ಮೀಟರ್ ಎಸ್ ಯುವಿ ಆಗಿರುವ ಟಿಯುವಿ300, 1.5 ಲೀಟರ್ 3 ಸಿಲಿಂಡರ್ ಡೀಸೆಲ್ ನಿಂದ ನಿಯಂತ್ರಿಸಲ್ಪಡಲಿದ್ದು, 230 ಎನ್‌ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಹಾಗೂ ಎಎಂಟಿ ಆಯ್ಕೆಯೂ ಇದರಲ್ಲಿರಲಿದೆ.

ಇವನ್ನೂ ಓದಿ

ಮಹೀಂದ್ರ ಟಿಯುವಿ300 ನೀವು ತಿಳಿದುಕೊಳ್ಳಬೇಕಾದ 8 ಅಂಶಗಳು

More from DriveSpark

Article Published On: Friday, November 27, 2015, 16:34 [IST]
English summary
Anand Mahindra's customized Mahindra TUV300
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+