ಇಂದಿನಿಂದ ನಿಮ್ಮ ನೆಚ್ಚಿನ ಮಹೀಂದ್ರ ಟಿಯುವಿ300 ಬುಕ್ ಮಾಡಿಕೊಳ್ಳಿರಿ
ಮಹೀಂದ್ರ ಟಿಯುವಿ300, ಮಹೀಂದ್ರ ಆಂಡ್ ಮಹೀಂದ್ರ, ಎಸ್‌ಯುವಿ, mahindra tuv300, mahindra and mahindra, suv
ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಬಹುನಿರೀಕ್ಷಿತ ಟಿಯುವಿ300 ಕ್ರೀಡಾ ಬಳಕೆಯ ವಾಹನವನ್ನು ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡಲಿದೆ. ಇದರಂಗವಾಗಿ ಇಂದಿನಿಂದ (ಸೆಪ್ಟೆಂಬರ್ 01) ಈ ಮಿನಿ ಎಸ್ ಯುವಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಡೀಲರುಗಳ ಬಳಿ ತೆರಳಿ ಮುಗಂಡ ಬುಕ್ಕಿಂಗ್ ಗಿಟ್ಟಿಸಿಕೊಳ್ಳಬಹುದಾಗಿದೆ. ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದು ತಯಾರಾಗಿರುವ ಮಹೀಂದ್ರ ಟಿಯುವಿ300 ಸ್ಪರ್ಧಾತ್ಮಕ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ನಡುವೆ ಮಹೀಂದ್ರ ಸಂಸ್ಥೆಯು ವಾಹನ ಪ್ರೇಮಿಗಳಿಗಾಗಿ ವಿನೂತನ ಸ್ಪರ್ಧೆಯನ್ನು ಏರ್ಪಡಿಸಿದೆ. ಇದರಂತೆ ಅದೃಷ್ಟಶಾಲಿಗಳಿಗೆ ಮಹೀಂದ್ರ ಟಿಯುವಿ300 ಗೆಲ್ಲುವ ಅವಕಾಶವೂ ಇರುತ್ತದೆ. (ಸ್ಪರ್ಧೆಯ ಪೂರ್ಣ ವಿವರಗಳನ್ನು ಇಲ್ಲಿ ಓದಿರಿ)
ಟಿಯುವಿ300 ಪೂರ್ಣರೂಪ
ಪ್ರೊಜೆಕ್ಟ್ ಕೋಡ್: ಯು301 (U301)
ಇಲ್ಲಿ 'ಟಿಯುವಿ300' ಎಂಬ ಪದವು ಟಿಯುವಿ, 3 ಡಬಲ್ ಒ (oh) ಎಂದು ಉಚ್ಛಾರಿಸಲ್ಪಡಲಿದೆ. ಅಂತೆಯೇ 'ಟಿ' ಎಂಬುದು ಕಠಿಣ ಹಾಗೂ ಸ್ಟೈಲಿಷ್ ಎಸ್ ಯುವಿ ವಿನ್ಯಾಸವನ್ನು ಪ್ರತಿನಿಧಿಸಲಿದೆ. ಹಾಗೆಯೇ '300' ಅಂಕಿಗಳು ಶ್ರೇಣಿಯ ಹೆಸರನ್ನು ಸೂಚಿಸುತ್ತದೆ.
ನಾಲ್ಕು ಮೀಟರ್ ಪರಿಧಿಯೊಳಗೆ ನಿರ್ಮಾಣವಾಗಲಿರುವುದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಂಸ್ಥೆಗೆ ನೆರವಾಗಲಿದೆ. ಇದರಲ್ಲಿ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು, 100 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.


Click it and Unblock the Notifications








