ಮತ್ತಷ್ಟು ಶಕ್ತಿಶಾಲಿ ಡೀಸೆಲ್ ಎಂಜಿನ್‌ನೊಂದಿಗೆ ಬರಲಿರುವ ಬಲೆನೊ
ಮಾರುತಿ ಸುಜುಕಿ ಬಲೆನೊ 2015ನೇ ಸಾಲಿನ ಅತ್ಯುತ್ತಮ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದೆನಿಸಿಕೊಂಡಿದೆ. ಎಸ್-ಕ್ರಾಸ್ ಮಾದರಿಯಲ್ಲಾದ ಹಿನ್ನಡೆಯ ಬಳಿಕ ಬಲೆನೊ ಮುಖಾಂತರ ಮಾರುತಿ ಭರ್ಜರಿ ಪುನರಾಗಮನ ಮಾಡಿಕೊಂಡಿತ್ತು.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯೂ ಆಗಿರುವ ಮಾರುತಿ ಸುಜುಕಿ, ಈ ಎರಡು ಮಾದರಿಗಳ ಮಾರಾಟಕ್ಕಾಗಿ ಪ್ರೀಮಿಯಂ ನೆಕ್ಸಾ ಶೋ ರೂಂಗಳನ್ನು ತೆರೆದುಕೊಂಡಿದೆ. ಈ ಮೂಲಕ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡಲು ಮುಂದಾಗಿದೆ.

ಈಗಾಗಲೇ 40,000ಕ್ಕು ಹೆಚ್ಚು ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿರುವ ಮಾರುತಿ ಬಲೆನೊ ಬಿಡುಗಡೆ ವೇಳೆ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಿತ್ತು. ಇದಕ್ಕೀಗ ಮಗದೊಂದು ಡೀಸೆಲ್ ಎಂಜಿನ್ ಸೇರ್ಪಡೆಯಾಗಲಿದೆ.

ಸದ್ಯ ಬಲೆನೊ ಮಾದರಿಯು 1.2 ಲೀಟರ್ ಕೆ12 ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಎಂಜಿನ್ (ಪೆಟ್ರೋಲ್ ನಲ್ಲಿ ಮಾತ್ರ) ಆಯ್ಕೆಯೂ ಇರುತ್ತದೆ.

ಈಗಿರುವ ಬಲೆನೊ ಡೀಸೆಲ್ ಎಂಜಿನ್ 73.9 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದನ್ನು ಫಿಯೆಟ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಪ್ರಸ್ತುತ ಮತ್ತಷ್ಟು ಶಕ್ತಿಶಾಲಿ 89 ಅಶ್ವಶಕ್ತಿ ಉತ್ಪಾದಿಸಬಲ್ಲ ಎಂಜಿನ್ ಪರಿಚಯುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ ಇದೇ 1.3 ಲೀಟರ್ ಮಲ್ಟಿಜೆಟ್ ಎಂಜಿನ್‌ನ 89 ಅಶ್ವಶಕ್ತಿ ಉತ್ಪಾದಿಸಬಲ್ಲ ಅಥವಾ 200 ಡಿಡಿಐಎಸ್ ವರ್ಷನ್ ಗಳನ್ನು ಆಳವಡಿಸುವ ಸಾಧ್ಯತೆಯಿದೆ.

ಪ್ರಮುಖವಾಗಿಯೂ ಹ್ಯುಂಡೈ ಎಲೈಟ್ ಐ20 ಹಾಗೂ ಹೋಂಡಾ ಜಾಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಮಾರುತಿ ಬಲೆನೊ ಈಗಾಗಲೇ ಜನಮನ್ನಣೆಗೆ ಪಾತ್ರವಾಗಿದೆ.


Click it and Unblock the Notifications