ಮಾರುತಿ ಸುಜುಕಿ ಸಿಯಾಝ್ ಈಗ ಹೆಚ್ಚು ಸುರಕ್ಷಿತ
ಈಗಷ್ಟೇ ಡೀಸೆಲ್ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ತಾಜಾತನ ಪಡೆದುಕೊಂಡಿರುವ ಮಧ್ಯಮ ವರ್ಗದ ಸೆಡಾನ್ ಕಾರು ಮಾರುತಿ ಸಿಯಾಝ್ ಮತ್ತಷ್ಟು ಸುರಕ್ಷಿತವೆನಿಸಿಕೊಳ್ಳಲಿದೆ.
ಹೌದು, ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ, ತನ್ನ ಶ್ರೇಣಿಯ ಸಿಯಾಝ್ ಮಾದರಿಯನ್ನು ವಿಸ್ತರಿಸಿದ್ದು, ಮತ್ತೆರಡು ವೆರಿಯಂಟ್ ಗಳನ್ನು ಸೇರ್ಪಡೆಗೊಳಿಸಿದೆ.

ಅದುವೇ ವಿಎಕ್ಸ್‌ಐ (ಐಚ್ಛಿಕ) ಮತ್ತು ವಿಡಿಐ (ಐಚ್ಛಿಕ). ಇವೆರಡು ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಹಾಗೂ ಗಳಂತಹ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಸಿಯಾಝ್ ವಿಎಕ್ಸ್‌ಐ (ಐಚ್ಛಿಕ): 7.48 ಲಕ್ಷ ರು.
- ಸಿಯಾಝ್ ವಿಡಿಐ (ಐಚ್ಛಿಕ): 8.37 ಲಕ್ಷ ರು.
ಪ್ರಮುಖವಾಗಿಯೂ ಸೆಗ್ಮೆಂಟ್ ಲೀಡರ್ ಹೋಂಡಾ ಸಿಟಿ ಪೈಪೋಟಿ ಒಡ್ಡುತ್ತಿರುವ ಸಿಯಾಝ್, ಇತ್ತೀಚೆಗಷ್ಟೇ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದು ಪ್ರತಿ ಲೀಟರ್ ಗೆ 28 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುತ್ತಿದ್ದು, ದೇಶದ ಅತ್ಯಂತ ಇಂಧನ ಕ್ಷಮತೆಯ ಕಾರೆನಿಸಿಕೊಂಡಿತ್ತು. ನೂತನ ಸಿಯಾಝ್ ಕಾರಿನಲ್ಲಿ ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಂ (SHVS) ತಂತ್ರಜ್ಞಾನ ಆಳವಡಿಸಲಾಗುತ್ತಿದ್ದು, 1.3 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.


Click it and Unblock the Notifications








