ಮಾರುತಿ ನೆಕ್ಸಾ ಡೀಲರ್‌ಶಿಪ್‌ಗೆ ಹಸಿರು ನಿಶಾನೆ; ಏನಿದರ ವಿಶೇಷ?
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಈ ಹಿಂದೆಯೇ ಪ್ರೀಮಿಯಂ ವಿಭಾಗದ ತನ್ನ ಕಾರುಗಳನ್ನು ಮಾರಾಟ ಮಾಡುವುದಕ್ಕಾಗಿ ದೇಶದೆಲ್ಲೆಡೆ ಪ್ರೀಮಿಯಂ ನೆಕ್ಸಾ ಶೋ ರೂಂಗಳನ್ನು ತೆರೆದುಕೊಳ್ಳುವುದಾಗಿ ಘೋಷಿಸಿತ್ತು.
ಇದರಂತೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ, ನೆಕ್ಸಾ ಡೀಲರ್‌ಶಿಪ್ ಗಳಿಗೆ ಇಂದು ಗುರುವಾರದಂದು (2015 ಜುಲೈ 23ರಂದು) ಭರ್ಜರಿ ಚಾಲನೆ ನೀಡಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇತ್ತೀಚೆಗಷ್ಟೇ ಭರ್ಜರಿ ಅನಾವರಣಗೊಂಡಿದ್ದ ಮಾರುತಿ ಎಸ್ ಕ್ರಾಸ್ ಬಹುನಿರೀಕ್ಷಿತ ಮಾದರಿಯು 2015 ಆಗಸ್ಟ್ 05ರಂದು ಭರ್ಜರಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಂತೆ ನೂತನ ಎಸ್-ಕ್ರಾಸ್ ನೆಕ್ಸಾ ಡೀಲರ್ ಶಿಪ್ ಮುಖಾಂತರ ದೇಶದೆಲ್ಲೆಡೆ ಮಾರಾಟವಾಗಲಿದೆ.
ದೇಶದ್ಯಾಂತ ಈಗಾಗಲೇ 35ರಷ್ಟು ಶೋ ರೂಂಗಳಿಗೆ ಚಾಲನೆ ನೀಡಿರುವ ಮಾರುತಿ, ಮುಂದಿನ ಆರು ತಿಂಗಳೊಳಗೆ 100ರಷ್ಟು ನೆಕ್ಸಾ ಡೀಲರ್ ಶಿಪ್ ಗಳನ್ನು ತೆರೆದುಕೊಳ್ಳುವ ಬೃಹತ್ ಯೋಜನೆ ಹೊಂದಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು ಈಗಿರುವ ಮಾರುತಿ ಡೀಲರುಗಳಿಂದಲೇ ಹೊಸತಾದ ನೆಕ್ಸಾ ಡೀಲರುಗಳನ್ನು ಆಯ್ಕೆ ಮಾಡಲಾಗುವುದು. ಇದರಿಂದಾಗಿ ಈಗಿರುವ ಹಾಗೂ ಹೊಸದಾಗಿ ಆರಂಭವಾಗುವ ನೆಕ್ಸಾ ಡೀಲರುಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡುವುದಿಲ್ಲ ಎಂದಿದೆ.

ಪ್ರೀಮಿಯಂ ಕಾರು ಖರೀದಿಸಲು ಆಗಮಿಸುವ ಗ್ರಾಹಕರಿಗೆ ವಿಭಿನ್ನ ಅನುಭವದೊಂದಿಗೆ ಹೊಸ ಆಕರ್ಷಣೆ ನೀಡುವುದು ಸಂಸ್ಥೆಯ ಇರಾದೆಯಾಗಿದೆ. ಇದಕ್ಕೆ ಹೊಸದಾಗಿ ಎಂಟ್ರಿ ಕೊಡಲಿರುವ ಎಸ್-ಕ್ರಾಸ್ ವೇದಿಕೆಯೊದಗಿಸಲಿದೆ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೆಕ್ಸಾ ಔಟ್ಲೆಟ್ ಮುಖಾಂತರ ಮಾರಾಟವಾಗುವ ಕಾರುಗಳು ಮಾರುತಿ ಸುಜುಕಿಯ ಬದಲು ಸುಜುಕಿ ಲಾಂಛನವನ್ನು ಪಡೆಯಲಿದೆ. ಆದರೆ ದೇಶದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲೇ ಉತ್ತರ ಲಭ್ಯವಾಗಲಿದೆ.


Click it and Unblock the Notifications








