2 ತಿಂಗಳೊಳಗೆ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್!

By Nagaraja

ಭಾರತದ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ಎಸ್-ಕ್ರಾಸ್ ಕ್ರಾಸೋವರ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದರ ಮಾರಾಟಕ್ಕಾಗಿ ಪ್ರೀಮಿಯಂ ನೆಕ್ಸಾ ಶೋ ರೂಂಗಳನ್ನು ಸಂಸ್ಥೆ ತೆರೆದುಕೊಂಡಿತ್ತು.

ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ ಮುಂದಕ್ಕೆ ಓದಿ

ಆದರೆ ಎಲ್ಲವೂ ಮಾರುತಿ ಅಂದುಕೊಂಡಂತೆ ನಡೆದಿಲ್ಲ. ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಮಾರುಕಟ್ಟೆ ತಲುಪಿದ್ದ ಎಸ್ ಕ್ರಾಸ್ ನಿರೀಕ್ಷಿತ ಪ್ರಮಾಣದ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈಗ ಮಾರಾಟಕ್ಕೆ ಉತ್ತೇಜನ ನೀಡುವ ತವಕದಲ್ಲಿರುವ ಮಾರುತಿ ಸಂಸ್ಥೆಯು ಈ ಹಬ್ಬದ ಆವೃತ್ತಿಯ ವೇಳೆಯಲ್ಲಿ ಆಕರ್ಷಕ ಆಫರ್ ಗಳನ್ನು ಮುಂದಿಟ್ಟಿದೆ.

2 ತಿಂಗಳೊಳಗೆ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್!

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಮಾರುತಿ ಎಸ್-ಕ್ರಾಸ್ ಕಾರು ಬಿಡುಗಡೆಯಾದ ಎರಡು ತಿಂಗಳೊಳಗೆ ಡೀಲರುಗಳ ಬಳಿ ಒಂದು ಲಕ್ಷ ರು.ಗಳ ವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ.

2 ತಿಂಗಳೊಳಗೆ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್!

ಮಾರುತಿ ಎಸ್ ಕ್ರಾಸ್ ಬಿಡುಗಡೆಯಾದ ಮೊದಲ ತಿಂಗಳಲ್ಲಿ 4,500 ಯುನಿಟ್ ಗಳ ಮಾರಾಟ ಗಿಟ್ಟಿಸಿಕೊಂಡಿತ್ತು. ಬಳಿಕ ಸೆಪ್ಟೆಂಬರ್ ಆಗುವಷ್ಟರಲ್ಲಿ ಈ ಪ್ರಮಾಣವು 3,500ಕ್ಕೆ ಇಳಿಕೆಯಾಗಿತ್ತು. ಇನ್ನೊಂದೆಡೆ ಎಸ್ ಕ್ರಾಸ್ ಪ್ರತಿಸ್ಪರ್ಧಿ ಹ್ಯುಂಡೈ ಕ್ರೆಟಾ ಕ್ರೀಡಾ ಬಳಕೆಯ ವಾಹನವು ಗರಿಷ್ಠ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ.

2 ತಿಂಗಳೊಳಗೆ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್!

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಒಂದು ಲಕ್ಷ ರು.ಗಳಷ್ಟು ಡಿಸ್ಕೌಂಟ್ ನಲ್ಲಿ 30,000 ರು.ಗಳಷ್ಟು ಲಾಯಲ್ಟಿ (ನಿಷ್ಠಾವಂತ ಗ್ರಾಹಕ) ಹಾಗೂ ಉಳಿದ ಮೊತ್ತವನ್ನು ಕಾರಿಗೆ ಸಾಲ ಪಡೆಯುವವರಿಗಾಗಿ ನೀಡಲಾಗುತ್ತಿದೆ.

2 ತಿಂಗಳೊಳಗೆ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್!

ಎಸ್ ಕ್ರಾಸ್ 1300 ಸಿಸಿ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆ 8.34 ಲಕ್ಷ ರು.ಗಳಿಂದ 10.75 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅದೇ ಹೊತ್ತಿಗೆ 1600 ಸಿಸಿ ಎಂಜಿನ್ ವೆರಿಯಂಟ್ 11.99 ಲಕ್ಷ ರು.ಗಳಿಂದ 13.74 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

ಇವನ್ನೂ ಓದಿ

ನೀವೇಕೆ ಎಸ್-ಕ್ರಾಸ್ ಇಷ್ಟಪಡಬೇಕು? ಇಲ್ಲಿದೆ 10 ಕಾರಣಗಳು

Article Published On: Saturday, October 10, 2015, 16:06 [IST]
English summary
Within 2 months launch Rs 1 lakh discount on Maruti S-Cross
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+