ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಗೊಂಡಿರುವ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿಗೆ ನಿರೀಕ್ಷಿದಷ್ಟು ಯಶ ದಕ್ಕಿರಲಿಲ್ಲ. ಮಾರುತಿ ಹೊಸದಾಗಿ ಆರಂಭಿಸಿರುವ ಪ್ರೀಮಿಯಂ 'ನೆಕ್ಸಾ' ಶೋ ರೂಂಗಳ ಮುಖಾಂತರ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ್ದರೂ ಕೆಲವೇ ಸಮಯಗಳಲ್ಲಿ ಹಿನ್ನಡೆ ಅನುಭವಿಸಿತ್ತು.

ಇದರಿಂದ ಎಚ್ಚೆತ್ತ ದೇಶದ ಅತಿ ದೊಡ್ಡ ಸಂಸ್ಥೆಯು ಹಬ್ಬದ ಆವೃತ್ತಿಯ ವೇಳೆ ಎಸ್-ಕ್ರಾಸ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಈ ಮೂಲಕ ಹೊಸ ಗ್ರಾಹಕರನ್ನು ಮನ ಸೆಳೆಯುವ ಪ್ರಯತ್ನ ಮಾಡಿತ್ತು. ಇವೆಲ್ಲದರ ನಡುವೆ ಡೀಲರ್ ಶಿಪ್ ಗಳಲ್ಲಿ ಒಂದು ಲಕ್ಷದ ವರೆಗೆ ಡಿಸ್ಕೌಂಟ್ ಒದಗಿಸಲಾಗಿತ್ತು.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ಇಷ್ಟೆಲ್ಲ ಆದರೂ ಮಾರುತಿ ಎಸ್-ಕ್ರಾಸ್ ಮಾರಾಟದಲ್ಲಿ ಏರುಗತಿಯಾಗಿಲ್ಲ ಎಂಬುದು ಆತಂಕಕಾರಿ ವಿಷಯವಾಗಿ ಪರಿಣಮಿಸಿದೆ. ಆದರೆ ಈಗ ಇದಕ್ಕಿಂತಲೂ ಬೆಚ್ಚಿ ಬೀಳಿಸುವ ವಾರ್ತೆಯೊಂದು ಹೊರಬಂದಿದೆ.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ದೆಹಲಿ ಡೀಲರ್ ಶಿಪ್ ವೊಂದರಲ್ಲಿ ಮಾರುತಿ ಎಸ್ ಕ್ರಾಸ್ ಖರೀದಿ ವೇಳೆ ಸರಿ ಸುಮಾರು ಮೂರು ಲಕ್ಷ ರು.ಗಳಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಮಾರುತಿ ಎಸ್-ಕ್ರಾಸ್ ಡಿಡಿಐಎಸ್ 320 ವೆರಿಯಂಟ್ ಖರೀದಿಯಲ್ಲಿ 2.90 ಲಕ್ಷ ರು.ಗಳಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ಇನ್ನೊಂದೆಡೆ ಎಸ್ ಕ್ರಾಸ್ ಝೆಟಾ ಹಾಗೂ ಆಲ್ಪಾ ವೆರಿಯಂಟ್ ಗಳಿಗೆ ಎರಡು ಲಕ್ಷ ರು.ಗಳ ರಿಯಾಯಿತಿ ದರ ನೀಡಲಾಗುತ್ತದೆ.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ಇವೆಲ್ಲದರ ಜೊತೆಗೆ ಡೆಲ್ಟಾ ವೆರಿಯಂಟ್ ನಲ್ಲಿ ಅಲಾಯ್ ವೀಲ್, ಗಾರ್ಮನ್ ನೇವಿಗೇಷನ್ ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂಬುದು ವರದಿಯಾಗಿದೆ.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ಮಾರುತಿ ಎಸ್‌ ಕ್ರಾಸ್ ಡಿಡಿಐಎಸ್ 320 ವೆರಿಯಂಟ್ 1.6 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 320 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮಾರುತಿ ಎಸ್-ಕ್ರಾಸ್ ಕಾರಿಗೆ 3 ಲಕ್ಷ ವರೆಗೆ ಡಿಸ್ಕೌಂಟ್

ನಿಮ್ಮ ಮಾಹಿತಿಗಾಗಿ 2015 ಆಗಸ್ಟ್ ತಿಂಗಳಲ್ಲಿ ಎಸ್ ಕ್ರಾಸ್ ಭಾರತ ಪ್ರವೇಶ ಪಡೆದಿತ್ತು. ಮಾರುತಿಯ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಮಾರಾಟವಾಗುತ್ತಿರುವ ಮೊದಲ ಮಾದರಿ ಇದಾಗಿದೆ. ಪ್ರಸ್ತುತ ಮಾರಾಟ ಉತ್ತೇಜನಕ್ಕಾಗಿ ಗರಿಷ್ಠ ಡಿಸ್ಕೌಂಟ್ ಗಳನ್ನು ನೀಡಲಾಗುತ್ತಿದೆ.

Article Published On: Friday, December 18, 2015, 17:20 [IST]
English summary
Maruti S-Cross Attracts Rs. 2-3 Lakh Discount Through NEXA
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+