ಮುಂದಿನ ತಿಂಗಳಲ್ಲಿ ಸೆಲೆರಿಯೊ ಡೀಸೆಲ್ ಕಾರು ಬಿಡುಗಡೆ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸೆಲೆರಿಯೊ ಮಾದರಿಯ ಡೀಸೆಲ್ ಆವೃತ್ತಿಯನ್ನು ಮುಂದಿನ ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
2014 ಆಟೋ ಎಕ್ಸ್ ಪೋ ಮುಖಾಂತರ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಸೆಲೆರಿಯೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಅತಿ ಹೆಚ್ಚಿನ ಬೇಡಿಕೆಗೆ ಕಾರಣವಾಗಿತ್ತು. ಈಗ ಡೀಸೆಲ್ ಮಾದರಿಯೊಂದಿಗೆ ಮಾರುತಿ ತನ್ನ ಮಾರಾಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಸಾಧ್ಯತೆಯಿದೆ.

ಎಂಜಿನ್ ತಾಂತ್ರಿಕತೆ
- ಎಂಜಿನ್: 800 ಸಿಸಿ ಡೀಸೆಲ್
- ಅಶ್ವಶಕ್ತಿ: 58
- ತಿರುಗುಬಲ: 150
- ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
- ಇಂಧನ ಕ್ಷಮತೆ: 30 kpl
ಬಲ್ಲ ಮೂಲಗಳ ಪ್ರಕಾರ ಸೆಲೆರಿಯೊ ಡೀಸೆಲ್ ಕಾರು ಪ್ರತಿ ಲೀಟರ್ ಗೆ 30 ಕೀ.ಮೀ. ಮೈಲೇಜ್ ನೀಡಲಿದೆ. ಇದು ಸೆಲೆರಿಯೊ ಮಾರಾಟಕ್ಕೆ ಅತಿ ದೊಡ್ಡ ಉತ್ತೇಜನವಾಗುವ ಸಾಧ್ಯತೆಯಿದೆ. ಈಗ ಹೊಸ ಸೆಲೆರಿಯೊ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








