ಫೇಸ್‌ಲಿಫ್ಟ್ ಆವೃತಿಯ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಈ ವರ್ಷ ಬಿಡುಗಡೆ
ಭಾರತದಲ್ಲಿ ಉತ್ತಮ ಮಾರಾಟವಾದ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ನವೀಕರಣ ಹೊಂದಲಿದೆ.
2014ರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಅಮೋಘವಾಗಿ ಭಾರತದಲ್ಲಿ ಬಿಡುಗಡೆ ಮಾಡಿದ ಈ ಸೆಲೆರಿಯೊ ಕಾರು, ಭಾರತದ ರಸ್ತೆಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಸುಳ್ಳಲ್ಲ. ಸತತ ನಾಲ್ಕು ವರ್ಷಗಳಿಂದ ಜನರ ವಿಶ್ವಾಸ ಗಳಿಸಿರುವ ಕಾರು ಫೇಸ್‌ಲಿಫ್ಟ್ ಅಂಶಗಳನ್ನು ಪಡೆದು ಮತ್ತೆ ರಸ್ತೆಗಿಳಿಯಲಿದೆ.

ಕಳೆದ 4 ವರ್ಷಗಳಿಂದ ವಾಹನ ಉದ್ಯಮ ಹೆಚ್ಚು ಬೆಳವಣಿಗೆ ಕಂಡಿದ್ದು, ಪ್ರಸ್ತುತ ಹೆಚ್ಚು ನವ ಪೀಳಿಗೆಯ ಮಾದರಿಗಳೊಂದಿಗೆ ಸ್ಪರ್ಧಿಸಲು ಸೆಲೆರಿಯೊ ಕಾರಿಗೆ ಖಂಡಿತವಾಗಿಯೂ ಒಂದು ಬದಲಾವಣೆ ಬೇಕು ಎನ್ನುವ ನಿಟ್ಟಿನಲ್ಲಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಬಲ್ಲ ಮೂಲಗಳ ಪ್ರಕಾರ ಸೆಲೆರಿಯೊ ಫೇಸ್ ಲಿಫ್ಟ್ ಆವೃತಿಯೂ ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಈ ವರ್ಷದ ಹಬ್ಬದ ಋತುವಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಎಲ್ಲಾ ವಿಶೇಷತೆಗಳನ್ನು ಉನ್ನತೀಕರಿಸಲು ಕಂಪನಿ ನಿರ್ಧರಿಸಿದ್ದು, ಈ ಅಂಶ ಕಾರು ಮಾರಾಟ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.

ಎಲ್-ಆಕಾರ ಇರುವ ಡಿಆರ್‌ಎಲ್s, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಕ್ರೋಮ್ ಒಳಗೊಂಡಿರುವ ಫಾಗ್‌ಲ್ಯಾಂಪ್ ಹೊಂದಿರುವ ಹೊಸ ಸೆಲೆರಿಯೊ ಕಾರು ಈ ವರ್ಷ ಬಿಡುಗಡೆಗೊಳ್ಳಲಿದೆ.

2013ರಲ್ಲಿ ಪ್ರದರ್ಶಿಸಲಾಗಿದ್ದ ಎ-ವಿಂಡ್ ಪರಿಕಲ್ಪನೆಯನ್ನು ಆಧರಿಸಿ ಈ ಕಾರನ್ನು ಆಧುನಿಕಗೊಳಿಸುಲು ಉದ್ದೇಶಿಸಿದ್ದು, ಕಾರಿನ ಮುಂಭಾಗದ ಹೆಚ್ಚು ಬದಲಾವಣೆ ಹೊಂದಲಿದೆ.

ಸುಧಾರಿತ ಸೆಲೆರಿಯೊ ಕಾರಿನ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆದುಕೊಳ್ಳಲಿದ್ದು, ರೆನಾಲ್ಟ್ ಕ್ವಿಡ್ ಕಾರಿಗೆ ಸ್ಪರ್ಧಿಸಲಿದೆ.

1-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸೆಲೆರಿಯೊ 90 ಎನ್ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿ ಉತ್ಪಾದಿಸಲಿದೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಸೆಲೆರಿಯೊ ಕಾರು ರೆನಾಲ್ಟ್ ಕ್ವಿಡ್, ಟಾಟಾ ಟಿಯೊಗೊ, ನಿಸ್ಸಾನ್ ಮೈಕ್ರಾ, ಹೊಂಡಾ ಬ್ರಿಯೊ ಕಾರುಗಳೊಂದಿಗೆ ಸ್ಪರ್ದಿಸಲಿದೆ.


Click it and Unblock the Notifications








