ಸೆಲೆರಿಯೊ ಡೀಸೆಲ್ ಕಾರಿನ ಮೈಲೇಜ್ 30 ಕೀ.ಮೀ. ?

By Nagaraja

ನಿಕಟ ಭವಿಷ್ಯದಲ್ಲೇ ನೂತನ ಸುಜುಕಿ ಸೆಲೆರಿಯೊ ಡೀಸೆಲ್ ಕಾರು ಭಾರತ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ವಾಹನ ಪ್ರೇಮಿಗಳಿಗೆ ಬಂದಿರುವ ಶುಭ ಸುದ್ದಿಯೆಂದರೆ ಸೆಲೆರಿಯೊ ಡೀಸೆಲ್ ಕಾರು ಪ್ರತಿ ಲೀಟರ್ ಗೆ 30 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಡೀಸೆಲ್ ಆವೃತ್ತಿ.
ಪೆಟ್ರೋಲ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ವೆರಿಯಂಟ್ ಮೂಲಕ ಗ್ರಾಹಕರಲ್ಲಿ ಅತಿ ಹೆಚ್ಚು ಬೇಡಿಕೆಯನ್ನುಂಟು ಮಾಡಿರುವ ಸೆಲಿರಿಯೊ ಈಗ ಡೀಸೆಲ್ ಆವೃತ್ತಿಯಲ್ಲೂ ಇದಕ್ಕೆ ಸಮಾನವಾದ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಸುಜುಕಿ ಸೆಲೆರಿಯೊ ಡೀಸೆಲ್

ಬಿಡುಗಡೆ ಯಾವಾಗ?
ಸಂಸ್ಥೆಯ ನಿಕಟವರ್ತಿಗಳ ಪ್ರಕಾರ ಸೆಲೆರಿಯೊ ಡೀಸೆಲ್ ಮಾದರಿಯು 2015 ಜೂನ್ 03ರಂದು ಬಿಡುಗಡೆಯಾಗಲಿದೆ. ಪ್ರಸ್ತುತ ಕಾರಿನಡಿಯಲ್ಲಿ 800 ಸಿಸಿ ಡೀಸೆಲ್ ಎಂಜಿನ್ ಜೋಡಣೆಯಾಗಲಿದೆ.

ಮೈಲೇಜ್
ಈ ಮೂಲಕ ಪರಿಷ್ಕೃತ ಡಿಜೆರ್ ಹಾಗೂ ಸಿಯಾಝ್ ಮೈಲೇಜ್ ಸಾಧನೆಗಳನ್ನು ಸೆಲೆರಿಯೊ ಡೀಸೆಲ್ ಹಿಮ್ಮೆಟ್ಟಿಸಲಿದೆ. ಇವೆರಡು ಅನುಕ್ರಮವಾಗಿ 26.59 ಹಾಗೂ 26.21 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬೆಲೆ ಮಾಹಿತಿ
ಅಂದ ಹಾಗೆ ಈಗ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಸೆಲೆರಿಯೊ ಪೆಟ್ರೋಲ್ ಹಾಗೂ ಸಿಎನ್ ಜಿ ಆವೃತ್ತಿಗಳು ಅನುಕ್ರಮವಾಗಿ 3.90 ಹಾಗೂ 4.92 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಅಂತೆಯೇ ನೂತನ ಡೀಸೆಲ್ ವೆರಿಯಂಟ್ 4.5ರಿಂದ 5.5 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ವೈಶಿಷ್ಟ್ಯ
ಇನ್ನು ಸೆಲೆರಿಯೊ ಡೀಸೆಲ್ ವೆರಿಯಂಟ್ ನಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, 2 ಡಿನ್ ಮ್ಯೂಸಿಕ್ ಸಿಸ್ಟಂ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ನಂತಹ ಸೌಲಭ್ಯವು ಲಭ್ಯವಾಗಲಿದೆ.

Most Read Articles

Kannada
English summary
Maruti Suzuki Celerio Diesel Mileage 30 km per litre
Story first published: Monday, May 25, 2015, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X