ಮಾರುತಿ ಸಿಯಾಝ್ ಶ್ರೇಣಿಗೆ ಹೊಸತಾದ ಝಡ್ ಪ್ಲಸ್ ಸೇರ್ಪಡೆ
ಕೆಲವು ಸಮಯಗಳ ಹಿಂದೆಯಷ್ಟೇ ಆಕರ್ಷಕ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ದೇಶದ ಅತ್ಯಂತ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾದ ಮಾರುತಿ ಸುಜುಕಿ ಬಿಡುಗಡೆಗೊಳಿಸಿತ್ತು.
ಈಗ ಹೊಸ ವರ್ಷದಲ್ಲಿ ಹೊಸತನದೊಂದಿಗೆ ಮುಂದೆ ಬಂದಿರುವ ಮಾರುತಿ, ಸಿಯಾಝ್ ಶ್ರೇಣಿಯಲ್ಲಿ ನೂತನ ಟಾಪ್ ಎಂಡ್ ಝಡ್ ಪ್ಲಸ್ ವೆರಿಯಂಟ್ ಸೇರ್ಪಡೆಗೊಳಿಸಿದೆ.

ಬೆಲೆ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)
- ಮಾರುತಿ ಸುಜುಕಿ ಸಿಯಾಝ್ ಝಡ್‌ಎಕ್ಸ್‌ಐ (ಪೆಟ್ರೋಲ್ ಮಾದರಿ): 9,08,197 ರು.
- ಮಾರುತಿ ಸುಜುಕಿ ಸಿಯಾಝ್ ಝಡ್‌ಡಿಐ (ಡೀಸೆಲ್ ಮಾದರಿ): 10,37,423 ರು.
ಹಳೆಯ ಎಸ್‌ಎಕ್ಸ್4 ಬದಲಿ ಮಾದರಿಯಾಗಿರುವ ಸಿಯಾಝ್ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಹಾಗೂ ಹ್ಯುಂಡೈ ವೆರ್ನಾ ಸವಾಲನ್ನು ಎದುರಿಸುತ್ತಿದೆ. ಈಗ ಬಿಡುಗಡೆಯಾಗಿರುವ ಸಿಯಾಝ್ ಝಡ್ ಪ್ಲಸ್ ವೆರಿಯಂಟ್ ಅತಿ ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಈಗಿರುವ ಝಡ್ ಐಚ್ಛಿಕ ಮಾದರಿಯ ಸ್ಥಾನ ತುಂಬಲಿದೆ.
ಎಂಜಿನ್ ಮಾಹಿತಿ:
- 1373 ಪೆಟ್ರೋಲ್ ಎಂಜಿನ್ - 91.15 ಅಶ್ವಶಕ್ತಿ, 130 ಎನ್‌ಎಂ ಟಾರ್ಕ್, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಜೊತೆಗೆ 4 ಸ್ಪೀಡ್ ಆಟೋಮ್ಯಾಟಿಕ್.
- 1248 ಸಿಸಿ ಡೀಸೆಲ್ - 88.47 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
ಹೆಚ್ಚುವರಿ ಸೌಲಭ್ಯಗಳು:
- ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್,
- ಲೆಥರ್ ಹೋದಿಕೆಯ ಸೀಟು,
- ಹೊಸ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ,
- ಬೆಲ್ಟ್ ಲೈನ್ ಓರ್ನಮೆಂಟ್,
- ಟ್ರಂಕ್ ಲಿಡ್ ಗಾರ್ನಿಶ್,
- 16 ಇಂಚಿನ ಅಲಾಯ್ ವೀಲ್,
- ವಾಯ್ಸ್ ಕಮಾಂಡ್,
- ನೇವಿಗೇಷನ್


Click it and Unblock the Notifications








