ಸಿಯಾಝ್ ಆಯ್ತು; ಅತಿ ಶೀಘ್ರದಲ್ಲೇ ಎರ್ಟಿಗಾ ಹೈಬ್ರಿಡ್ ಬಿಡುಗಡೆ
ಈಗಷ್ಟೇ ಮಧ್ಯಮ ಗಾತ್ರದ ಸಿಯಾಝ್ ಹೈಬ್ರಿಡ್ ಸೆಡಾನ್ ಕಾರನ್ನು ಬಿಡುಗಡೆ ಮಾಡಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ, ಮಾರುತಿ ಸುಜುಕಿ ಮಗದೊಂದು ದೊಡ್ಡ ಲಾಂಚ್‌ಗೆ ಸಿದ್ಧವಾಗುತ್ತಿದೆ. ಅದುವೇ ಎರ್ಟಿಗಾ ಹೈಬ್ರಿಡ್ ವರ್ಷನ್.
ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ಎರ್ಟಿಗಾ ಬಹು ಬಳಕೆಯ ವಾಹನದ ಹೈಬ್ರಿಡ್ ಮಾದರಿಯು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಹಬ್ಬದ ಆವೃತ್ತಿಯಲ್ಲಿ ಹೊಸ ಕಾರನ್ನು ಕೊಂಡುಕೊಳ್ಳಲು ಬಯಸುವ ಗ್ರಾಹಕರಿಗೆ ಶ್ರೇಷ್ಠ ಆಯ್ಕೆಯಾಗಿರಲಿದೆ.

ಇದರ ಪೂರಕ ಬೆಳವಣಿಗೆಯಂತೆಯೇ 2015 ಎರ್ಟಿಗಾ ಕಾರಿನ ಪರೀಕ್ಷಾರ್ಥ ಪಯಣವನ್ನು ಭಾರತೀಯ ರಸ್ತೆಯಲ್ಲಿ ನಡೆಯುತ್ತಿದೆ. ಇದರಲ್ಲೂ ಸಿಯಾಝ್ ಗೆ ಸಮಾನವಾದ ಡೀಸೆಲ್ ಹೈಬ್ರಿಡ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಂ (ಎಸ್‌ಎಚ್‌ವಿಎಸ್) ತಂತ್ರಜ್ಞಾನವನ್ನು ಎರ್ಟಿಗಾ ಹೈಬ್ರಿಡ್ ನಲ್ಲೂ ಕಾಣಬಹುದಾಗಿದೆ. ಇನ್ನು ಕಾಸ್ಮೆಟಿಕ್ ಬದಲಾವಣೆ ಜೊತೆಗೆ ಸ್ಟ್ಯಾರ್ಟ್/ಸ್ಟಾಪ್ ಬಟನ್, ಹೊಸ ಹೋದಿಕೆ, ವಿದ್ಯುನ್ಮಾನವಾಗಿ ಮಡಚಬಹುದಾದ ಮಿರರ್, ಕೀಲೆಸ್ ಎಂಟ್ರಿ ಮತ್ತು ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ ವ್ಯವಸ್ಥೆಯೂ ಇರಲಿದೆ.


Click it and Unblock the Notifications








