ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

Written By:

ಹಗಲು ರಾತ್ರಿ ಎನ್ನದೆ ಉದ್ಯಾನಗರಿ ಬೆಂಗಳೂರಿನ ಭದ್ರತೆಯನ್ನು ಕಾಯುತ್ತಿರುವ ಹೊತ್ಸಳ ಪೊಲೀಸ್ ಪಡೆಗೆ ಹೊಸ ಹೈಟೆಕ್ ಕಾರುಗಳ ಸೇರ್ಪೆಡಯಾಗಿದೆ. ಇದರೊಂದಿಗೆ ಪೊಲೀಸ್ ಗಸ್ತು ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿದೆ.

ಹಳೆಯ ಬೊಲೆರೊ ಕಾರುಗಳ ಬದಲಾಗಿ ಹೊಯ್ಸಳ ಪೊಲೀಸ್ ಗೆ 222 ರಷ್ಟು ಮಾರುತಿ ಎರ್ಟಿಗಾ ವಾಹನಗಳನ್ನು ಖರೀದಿಸಲಾಗಿದೆ. ಇದು ಶೀಘ್ರದಲ್ಲೇ ಸಿಲಿಕಾನ್ ಸಿಟಿಯಲ್ಲಿ ಗಸ್ತು ತಿರುಗುವುದನ್ನು ಆರಂಭಿಸಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಆಧುನಿಕರಿಸುವುದರತ್ತ ಗಮನ ಹರಿಸಲಾಗಿದ್ದು, ಇದರ ಭಾಗವಾಗಿ ಎಲ್ಲ 222 ಎರ್ಟಿಗಾ ಕಾರುಗಳಲ್ಲೂ ಏಳು ಇಂಚುಗಳ ಟ್ಯಾಬ್ಲೆಟ್ ಲಗತ್ತಿಸಲಾಗಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಎಲ್ಲ ವಾತಾವರಣದಲ್ಲೂ ನಿರ್ವಹಿಸಬಲ್ಲ ಪ್ಯಾನಸೋನಿಕ್ ಟಚ್ ಪ್ಯಾಡ್ ಎಫ್ ಝಡ್-ಬಿ2 ಟ್ಯಾಬ್ ಗಳು ವಾಟರ್ ಪ್ರೂಫ್ ಆಗಿದ್ದು, ಧೂಳಿನ ಕಣಗಳಿಂದಲೂ ರಕ್ಷಣೆ ಪಡೆಯಲಿದೆ. ಅಲ್ಲದೆ ಸಿಡಿಲು ಬಡಿತದಿಂದಲೂ ಸುರಕ್ಷಿತವಾಗಿರಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಇದು ನೇರವಾಗಿ ಹೊಯ್ಸಳ ಕಮಿಷನರ್ ಕಚೇರಿ ರೂಂನಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕ ಕಲ್ಪಿಸಿಕೊಂಡು ಕಾರ್ಯ ನಿರ್ವಹಿಸಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಆದರೆ ಹಿಂದಿನ ವಾಹನಗಿಂತಲೂ ವಿರುದ್ಧ ನೂತನ ಎರ್ಟಿಗಾ ಕಾರುಗಳು ಪೊಲೀಸ್ ನಿಗದಿಪಡಿಸಿರುವ 1600ದಷ್ಟು ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. ಅಲ್ಲಿಂದ ತ್ವರಿತ ಕಾರ್ಯಾಚರಣೆಗೆ ಮುಂದಾಗಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಮಾರುತಿ ಎರ್ಟಿಗಾ ವಾಹನದಲ್ಲಿ ಜಿಪಿಎಸ್ ಮತ್ತು ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಜೊತೆಗೆ ಸಿಸಿ ಕ್ಯಾಮೆರಾ ಸಹ ಇರಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಸಾರ್ವಜನಿಕರ ದೂರುಗಳನ್ನು ಆಲಿಸಲು ಕಂಟ್ರೋಲ್ ರೂಂನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಹೊಯ್ಸಳ ಪೊಲೀಸರಿಗೆ ಸಂದೇಶ ರವಾನಿಸಲಾಗುತ್ತದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಟ್ಯಾಕ್ಸಿ ಸರ್ವೀಸ್ ನಿರ್ವಹಿಸುವ ತರಹನೇ ಕಂಟ್ರೋಲ್ ರೂಂನಿಂದ ಟ್ಯಾಬ್ಲೆಟ್ ಗೆ ಸಂದೇಶ ರವಾನಿಸಲಾಗುವುದು. ಅಲ್ಲಿಂದ ಕರ್ತವ್ಯ ನಿರತರಾಗಿರುವ ಅಧಿಕಾರಿಗಳು ಕರೆ ಸ್ವೀಕರಿಸಲಿದ್ದಾರೆ. ತನ್ಮೂಲಕ ತ್ವರಿತ ಗತಿಯಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿದೆ.

ಹೊಯ್ಸಳ ಪೊಲೀಸ್‌ಗೆ ಬಂತು ಹೈಟೆಕ್ ಎರ್ಟಿಗಾ ಗಾಡಿಗಳು

ಚಿತ್ರ ಸೇರಿದಂತೆ ದೂರಿನ ಬಗ್ಗೆ ಸಮಗ್ರ ವಿವರವನ್ನು ರವಾನಿಸುವುದು ಅತ್ಯಂತ ಸುಲಭ ಪ್ರಕ್ರಿಯೆಯಾಗಿರಲಿದೆ. ಇವೆಲ್ಲವೂ ತಪ್ಪಿತ್ತಸ್ಥರು ಬಹುಬೇಗನೇ ಸರೆ ಹಿಡಿಯಲು ನೆರವಾಗಲಿದೆ.

ಚಿತ್ರ ಕೃಪೆ: ಎನ್ ನರಸಿಂಹ ಮೂರ್ತಿ

English summary
Bengaluru's Hoysala police gets high-tech Ertiga cars
Story first published: Thursday, June 9, 2016, 17:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark