Subscribe to DriveSpark

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

Written By:

ಹಸಿವು ಮುಕ್ತ ಕರ್ನಾಟಕ ಯೋಜನೆ ಅಡಿ ಬೃಹತ್ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿರುವ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಮುಂದಾಗಿದ್ದು, ಇಂದಿರಾ ಸಾರಿಗೆ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ.

To Follow DriveSpark On Facebook, Click The Like Button
ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಸುದ್ಧಿ ಮೂಲಗಳ ಪ್ರಕಾರ ಇಂದಿರಾ ಸಾರಿಗೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶವಿದ್ದು, ವರ್ಷಾಂತ್ಯಕ್ಕೆ ಈ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಹೊಸ ಯೋಜನೆಯಲ್ಲಿ ಏನಿದೆ?

ಇಂದಿರಾ ಸಾರಿಗೆ ಯೋಜನೆ ಅನ್ವಯ ಈ ಇಂದಿರಾ ಸಾರಿಗೆ ಯೋಜನೆಯ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೇ.50 ಟಿಕೆಟ್ ದರ ರಿಯಾಯಿತಿ ನೀಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಎಲ್ಲೆಲ್ಲಿ ಹೊಸ ಯೋಜನೆ?

ಕೆಲವು ವರದಿಗಳ ಪ್ರಕಾರ ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಆರಂಭಿಸಲು ಗುರಿ ಹೊಂದಿದ್ದು, ತದ ನಂತರ ಯೋಜನೆಗೆ ಜನರ ಪ್ರತಿಕ್ರಿಯೆ ನೋಡಿಕೊಂಡು ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಯೋಜನೆ ಆರಂಭಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿರುವ ಸಚಿವ ಹೆಚ್ ಎಂ ರೇವಣ್ಣ ಅವರು ಪ್ರಸ್ತುತ ಯೋಜನೆ ಕುರಿತು ಅಧಿಕಾರಗಳೊಂದಿಗೆ ಸಾಧಕ-ಭಾದಕಗಳನ್ನು ಚರ್ಚಿಸಲಾಗುತ್ತಿದ್ದು, ಯೋಜನೆಯ ವ್ಯಾಪ್ತಿ ಮತ್ತು ಇತರೆ ಅಂಶಗಳನ್ನು ಚರ್ಚಿಸಲಾಗುತ್ತಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಹೀಗಾಗಿ ಮುಂದಿನ 15 ದಿನಗಳದೊಳಗಾಗಿ ಅಂತಿಮ ಹಂತದ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿದ್ದು, ಹೊಸ ಯೋಜನೆಯಿಂದ ನಗರಭಾಗದಲ್ಲಿನ ಮಹಿಳಾ ಕಾರ್ಮಿಕರಿಗೆ ಸಹಾಯಕವಾಗುವುದರಲ್ಲಿ ಯಾವುದೇ ಅನುಮಾವಿಲ್ಲ ಎನ್ನಬಹುದು.

ತಪ್ಪದೇ ಓದಿ- ನಂಬಿದರೆ ನಂಬಿ ಬಿಟ್ಟರೆ ಬಿಡಿ.. 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಇನ್ನು ಈ ಹಿಂದೆ ಕೂಡಾ ಆರ್ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಅಟಲ್ ಸಾರಿಗೆ ಯೋಜನೆ ಪರಿಚಯಿಸುವ ಮೂಲಕ ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

ಆದ್ರೆ ಅದೇನೇ ಇರಲಿ ರಾಜ್ಯ ಸರ್ಕಾರವು ಜಾರಿಗೆ ತರಲು ಹೊರಟಿರುವ ಇಂದಿರಾ ಸಾರಿಗೆ ಯೋಜನೆ ಮಹತ್ವದಾಗಿದ್ದು, ನಿಗದಿತ ಅವಧಿಯೊಳಗೆ ಜಾರಿ ಮಾಡುವ ಮೂಲಕ ಮಹಿಳಾ ಪ್ರಯಾಣಿಕರಿಗೆ ಸೌಲಭ್ಯ ಒದಗಿಸಲಿ ಎನ್ನುವುದೇ ನಮ್ಮ ಆಶಯ.

Trending on DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

English summary
Read in Kannada Siddaramaiah Govt to Launch Indira Saarige in Bengaluru.
Story first published: Saturday, November 11, 2017, 13:55 [IST]
Please Wait while comments are loading...

Latest Photos