ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಹೊಸ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.

By Girish

ಅಧಿಸೂಚನೆಯ ಪ್ರಕಾರ, "2017ರ ಡಿಸೆಂಬರ್ 1ರ ನಂತರ ಮಾರಾಟವಾಗುವ ಎಲ್ಲಾ ಮೋಟಾರ್ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಲಾಗುವುದು. ಇದು ಕಾಲಕಾಲಕ್ಕೆ ವಾಹನ ತಯಾರಕರಿಂದ ಅಥವಾ ಅಧಿಕೃತ ವ್ಯಾಪಾರಿಯಿಂದ ಕೇಂದ್ರೀಕೃತ ಸರ್ಕಾರಕ್ಕೆ ಸೂಚಿಸಲ್ಪಡುತ್ತದೆ" ಎಂಬ ಮಾಹಿತಿ ಇದೆ.

Recommended Video

[Kannada] Bajaj Pulsar NS200 ABS Launched In India - DriveSpark
ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಈ ಫಾಸ್ಟ್‌ಟ್ಯಾಗ್ ಅಂದ್ರೆ ಏನು ? ಇದನ್ನು ನಿಮ್ಮ ಕಾರಿನಲ್ಲಿ ಅಳವಡಿಸಿದರೆ ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ ಕಾರಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯ ಪ್ರಾಮುಖ್ಯತೆಯನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ ಬನ್ನಿ...

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಫಾಸ್ಟ್ ಟ್ಯಾಗ್ ಎಂದರೇನು?

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್(ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಬಳಸಿಕೊಂಡು ಈ ಫಾಸ್ಟ್ ಟ್ಯಾಗ್ ಸಾಧನವು ಕಾರ್ಯ ನಿರ್ವಹಿಸಲಿದ್ದು, ಈ ಮೊದಲೇ ಪಾವತಿಸಿದ ಹಣ ಅಥವಾ ಉಳಿತಾಯ ಖಾತೆಯನ್ನು ಬಳಸಿಕೊಂಡು ಟೋಲ್ ಫೀ ಪಾವತಿ ಮಾಡಲು ಬಳಸುತ್ತದೆ.

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಈ ಫಾಸ್ಟ್‌ಟ್ಯಾಗ್ ಸಾಧನಕ್ಕೆ ಸಂಪರ್ಕಿಸಬಹುದಾದ ಟ್ಯಾಗನ್ನು ನಾಲ್ಕು-ಚಕ್ರಗಳ ವಾಹನದ ವಿಂಡ್‌ಸ್ಕ್ರೀನ್ ಮೇಲೆ ಜೋಡಿಸಲಾಗುತ್ತದೆ. ಈ ಟ್ಯಾಗ್, ಸಾಧನದ ಜೊತೆ ಸಂಪರ್ಕ ಸಾಧಿಸುವ ಮೂಲಕ ಹಣವನ್ನು ಪಾವತಿಯನ್ನು ಮಾಡುತ್ತದೆ. ಇದರಿಂದಾಗಿ ವಾಹನವನ್ನು ಟೋಲ್‌ನಲ್ಲಿ ನಿಲ್ಲಿಸದೆ, ಪ್ರಯಾಣಿಸಬಹುದಾದ ಅನುಕೂಲತೆಯನ್ನು ಪಡೆದುಕೊಳ್ಳಲಿದೆ.

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ವಾಹನ ಮಾರಾಟಗಾರ ಫಾಸ್ಟ್‌ಟ್ಯಾಗ್ ಅಳವಡಿಸದೇ ಇದ್ದಾರೆ ಏನ್ ಮಾಡಬೇಕು ?

ವಾಹನ ತಯಾರಕ ಸಂಸ್ಥೆಯು ವಾಹನಗಳುನ್ನು ವಿಂಡ್‌ಸ್ಕ್ರೀನ್ ಇಲ್ಲದೆ, ಕೇವಲ ಚಾರ್ಸಿ ಇರುವ ವಾಹನವನ್ನು ಮಾರಾಟ ಮಾಡಿದರೆ ಸಾಧನವನ್ನು ನೋಂದಣಿಯಾಗುವ ಮುನ್ನ ಸ್ವತಃ ವಾಹನದ ಮಾಲೀಕ ವಿಂಡ್‌ಸ್ಕ್ರೀನ್ ಮೇಲೆ ಅಳವಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಟ್ಯಾಗ್ ವಿತರಕರಿಂದ ಫಾಸ್ಟ್‌ಟ್ಯಾಗ್ ಅನ್ನು ಖರೀದಿಸಬಹುದಾಗಿದ್ದು, ಇದನ್ನು ಪ್ರಿಪೇಯ್ಡ್ ಖಾತೆಗೆ ಲಿಂಕ್ ಮಾಡುವ ಮೂಲಕ ಉಪಯೋಗಿಸಬಹುದಾಗಿದೆ. ವಾಹನ ಮಾಲೀಕರು ತಮಗೆ ಬೇಕಾದಾಗ ಪುನರ್ಭರ್ತಿ ಅಥವಾ ರಿಚಾರ್ಜ್ ಮಾಡಿಸಬೇಕಾಗುತ್ತದೆ.

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಇರುವಂತಹ ಸುಮಾರು 370 ಟೋಲ್ ಪ್ಲಾಜಾಗಳಲ್ಲಿ ಮಾತ್ರ ಫಾಸ್ಟ್‌ಟ್ಯಾಗ್ ಕಾರ್ಯ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸೌಲಭ್ಯವನ್ನು ಎಲ್ಲಾ ಟೋಲ್‌ಗಳಿಗೆ ವಿಸ್ಟರಿಸಲಾಗುತ್ತದೆ.

ತಪ್ಪದೇ ಓದಿ-100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಈ ಫಾಸ್ಟ್‌ಟ್ಯಾಗ್ ಅನ್ನು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್ಇಟಿಸಿ) ಕಾರ್ಯಕ್ರಮದಡಿಯಲ್ಲಿ ಹೊರ ತಂದಿದ್ದು, ಇದನ್ನು ಭಾರತದಲ್ಲಿರುವ ಎಲ್ಲಾ ರೀತಿಯ ಟೋಲ್ ಪ್ಲಾಜಾಗಳಲ್ಲಿ ಬಳಸಬಹುದು.

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಡಿಸೆಂಬರ್ 1ರಿಂದ ಫಾಸ್ಟ್‌ಟ್ಯಾಗ್ ಜಾರಿಗೆ ತರುವ ನಿರ್ಧಾರ ಮೆಚ್ಚುವಂತದ್ದು, ಎಷ್ಟೋ ಭಾರಿ ಕೇವಲ ಟೋಲ್ ಶುಲ್ಕ ಕಟ್ಟಲು ವಾಹನ ಸವಾರರು 15 ರಿಂದ 20 ನಿಮಿಷದಷ್ಟು ಸಮಯ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಫಾಸ್ಟ್‌ಟ್ಯಾಗ್ ನಿರ್ಧಾರ ಟೋಲ್‌ಗಳಲ್ಲಿ ಆಗುವಂತಹ ಟ್ರಾಫಿಕ್ ಕಡಿಮೆಗೊಳಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ.

Trending On DriveSpark Kannada:

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

Most Read Articles

Kannada
English summary
The Ministry of Road Transport has notified that all new four-wheelers to have FASTag devices fixed on the front windscreen by December 1, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X