100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

ಕಳೆದ ವಾರ ರಾಜ್ಯದಲ್ಲಿ 100 ಸಿಸಿ ಸಾಮರ್ಥ್ಕಕ್ಕಿಂತ ಕಡಿಮೆ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಿ ಆದೇಶ ಹೊರಡಿದ್ದ ರಾಜ್ಯ ಸರ್ಕಾರವು ಇದೀಗ ಸಾರ್ವಜನಿಕರ ವಿರೋಧಕ್ಕೆ ಸ್ಪಂದಿಸಿದ್ದು, ಆದೇಶ ತಿದ್ದುಪಡಿ ಮಾಡಲು ಒಪ್ಪಿಗೆ ಸೂಚಿಸಿದೆ.

By Praveen

ಕಳೆದ ವಾರ ರಾಜ್ಯದಲ್ಲಿ 100 ಸಿಸಿ ಸಾಮರ್ಥ್ಕಕ್ಕಿಂತ ಕಡಿಮೆ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಿ ಆದೇಶ ಹೊರಡಿದ್ದ ರಾಜ್ಯ ಸರ್ಕಾರವು ಇದೀಗ ಸಾರ್ವಜನಿಕರ ವಿರೋಧಕ್ಕೆ ಸ್ಪಂದಿಸಿದ್ದು, ಆದೇಶ ತಿದ್ದುಪಡಿ ಮಾಡಲು ಒಪ್ಪಿಗೆ ಸೂಚಿಸಿದೆ.

100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಈ ಬಗ್ಗೆ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು 100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನಗಳ ನೋಂದಣಿಗೆ ಈ ಹಿಂದಿನಂತೆಯೇ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಇದಲ್ಲದೇ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಲ್ಲಿ ಹಿಂಬದಿ ಸವಾರಿ ನಿಷೇಧಿಸಿ ಹೈಕೋರ್ಟ್‌ ಆದೇಶ ಹೊರಡಿಸಿದ್ದು, ಈ ತೀರ್ಪು ಮರು ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾಹಿತಿ ನೀಡಿದ್ದಾರೆ.

100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಜೊತೆಗೆ 100 ಸಿ.ಸಿ. ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಯಮಕ್ಕೆ ತಿದ್ದುಪಡಿ (ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ಸೆಕ್ಷನ್ 143/3) ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿಷೇಧದ ಭೀತಿಯಲ್ಲಿದ್ದ ಬೈಕ್ ಸವಾರರಿಗೆ ಸಿಹಿ ಸುದ್ಧಿ ನೀಡಿದೆ.

Recommended Video

[Kannada] Mahindra KUV 100 NXT Launched In India - DriveSpark
100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ನಿಷೇಧಕ್ಕೆ ಕಾರಣವೇನು?

ಈ ಹಿಂದೆ ಅಪಘಾತ ಪ್ರಕರಣ ಒಂದರಲ್ಲಿ ಬೈಕ್‌ ಸವಾರನಿಗೆ ವಿಮೆ ಹಣ ಪಾವತಿಸುವ ಬದಲು ವಿಮಾ ಸಂಸ್ಥೆಯು ನ್ಯಾಯಾಲಯದ ಎದುರು 100 ಸಿಸಿ ಬೈಕ್‌ನಲ್ಲಿ ಇಬ್ಬರು ಓಡಾಡುವಂತಿಲ್ಲ ಎಂಬ ಕಾಯ್ದೆ ಉಲ್ಲೇಖೀಸಿ ವಾದಿಸಿತ್ತು. ಇದರಿಂದಾಗಿ ನ್ಯಾಯಾಲಯವು ಇತದೊಂದು ಖಡಕ್ ಆದೇಶವನ್ನು ಹೊರಡಿಸಿತ್ತು.

ತಪ್ಪದೇ ಓದಿರಿ-

100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಆದ್ರೆ ಕರ್ನಾಟಕವನ್ನು ಹೊರತಾಗಿಸಿ ದೇಶದ ಬೇರೆ ಯಾವ ರಾಜ್ಯದಲ್ಲೂ ಇಂಥ ಕಾನೂನು ಇಲ್ಲ. ಅದಕ್ಕಾಗಿ ನಾವು ಕೂಡಾ ಯಾವುದೇ ಕಾರಣಕ್ಕೂ ಹೊಸ ನಿಯಮವನ್ನು ಜಾರಿಯಾಗಲು ಬಿಡುವುದಿಲ್ಲ ಎಂಬುವುದಾಗಿ ಸಚಿವ ರೇವಣ್ಣ ಅವರು ಸಾರ್ವಜನಿಕರಿಗೆ ಆಶ್ವಾನೆ ನೀಡಿದ್ದಾರೆ.

100 ಸಿಸಿ ಬೈಕ್ ವಿಚಾರದಲ್ಲಿ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಇನ್ನು ಸರಕಾರವು 100 ಸಿಸಿ ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯ‌ದ ಬೈಕ್‌ಗಳ ನೋಂದಣಿಯನ್ನು ನಿಷೇಧಿಸಿದ ಬಳಿಕ 100 ಸಿಸಿ ಕೆಳಗಿನ ಬೈಕ್‌ಗಳ ಮಾರಾಟ ಪ್ರಕ್ರಿಯೆ ಸ್ಥಗಿತವಾಗಿದೆ. ಜೊತೆಗೆ ಶೋ ರೂಂಗಳು ಒಬ್ಬರೇ ಸವಾರರು ಕುಳಿತು ಸಂಚರಿಸುವಂತೆ ಸೀಟಿನ ವಿನ್ಯಾಸ ಬದಲಿಸಿ, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೂಡಾ ಗ್ರಾಹಕರು ಕೂಡಾ ಅಂತಹ ಬೈಕ್‌ಗಳ ಖರೀದಿಗೂ ಮುಂದಾಗುತ್ತಿಲ್ಲ.

Trending On DriveSpark Kannada:

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ನೀವು ನಂಬಲೇಬೇಕು! ಈ ಟಾಪ್ 10 ಬೈಕ್‌ಗಳು ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ..!!

Most Read Articles

Kannada
English summary
Transport Minister H M Revanna promised necessary action allowing registration of below 100cc bikes and pillion riding.
Story first published: Friday, November 3, 2017, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X