Subscribe to DriveSpark

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

Written By:

ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಪದೇ ಪದೇ ಜಾಸ್ತಿಯಾಗುತ್ತಿದೆ ಎಂಬ ಕೊರಗಬೇಡಿ. ಯಾಕೆಂದರೆ ಭಾರತದ ಜೆಮ್‌ಶೆಡ್‌ಪುರದಲ್ಲಿರುವ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನಿಂದ ಓಡುವ ಬೈಕ್‌‌ ಕಂಡು ಹಿಡಿದಿದ್ದಾನೆ.

To Follow DriveSpark On Facebook, Click The Like Button
ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಹೌದು, ಬ್ರೆಜಿಲ್‌ನ ವ್ಯಕ್ತಿಯೊರ್ವರು ನೀರಿನ ಬಲದಿಂದ ಚಲಿಸುವ ಬೈಕ್ ಅನ್ನು ಕಂಡು ಹಿಡಿದು ಎಲ್ಲರನ್ನು ಅಚ್ಚರಿಗೊಳೋಳಿಸಿದ್ದು, ನಿಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಅದೇ ರೀತಿಯ ಪ್ರಯೋಗಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮುಂದಾಗಿ, ಯಶಸ್ವಿಯೂ ಆಗಿರುವಂತಹ ಖುಷಿ ವಿಚಾರದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.. ಮುಂದೆ ಓದಿ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಜೆಮ್‌ಶೆಡ್‌ಪುರದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಆದಿತ್ಯ ಗೊಟ್ಟೆ ಈ ಮೋಟಾರ್‌ ಬೈಕ್‌ ಕಂಡು ಹಿಡಿದು ಎಲ್ಲರ ಉಬ್ಬೇರಿಸುವಂತೆ ಮಾಡಿದ್ದಾನೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ವಾಹನವು ಆರು ಲೀಟರ್‌ ನೀರಿಗೆ ಸರಿ ಸುಮಾರು 25ರಿಂದ 30 ಕಿ.ಮೀ. ದೂರು ಕ್ರಮಿಸಬಲ್ಲದು ಹಾಗು ಆರಂಭದಲ್ಲಿ ಎಂಜಿನ್‌ ಆರಂಭಿಸಲು ಸ್ವಲ್ಪ ಪ್ರಮಾಣದ ಇಂಧನ ಪಡೆಯುತ್ತದೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಹೇಗೆ ಕಾರ್ಯ ನಿರ್ವಹಿಸುತ್ತೆ ಈ ಬೈಕ್ ?

ಈ ವಿಚಾರವಾಗಿ ವಿಡಿಯೋವನ್ನು ಬಿಡುಗಡೆ ಮಾಡಿರುವ ಆದಿತ್ಯ ಗೊಟ್ಟೆ, ಕಡಿಮೆ ವೆಚ್ಚದಲ್ಲಿ ತನ್ನ ಗಾಡಿ ಸಂಚರಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿ ಕಂಡು ಹಿಡಿದಿರುವ ಸಂಶೋಧನೆ ಪ್ರಕಾರ ಆರಂಭದಲ್ಲಿ ಎಂಜಿನ್‌‌ ಪ್ರಾರಂಭಿಸಲು ಇಂಧನ ಬಳಸಲಾಗುತ್ತದೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಎಂಜಿನ್ ಚಲನೆಗೊಂಡ ಮೇಲೆ ಮೋಟಾರ್‌‌ನಿಂದ ಉತ್ಪನ್ನವಾಗುವ ವಿದ್ಯುತ್‌‌ ಹೈಡ್ರೋಜನ್ ಮತ್ತು ಆಮ್ಲಜನಕದ ಮೂಲಕ ದಹನ ಕ್ರಿಯೆ ಉಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುತ್ತೆ.

ಈಗಾಗಲೇ ಇಂಡಿಯನ್‌ ಇನ್‌ಸ್ಟಿಟ್ಯೂಟ್‌‌ ಆಫ್‌‌ ಖರಗ್ಪುರ್‌ ವಿದ್ಯಾರ್ಥಿಯ ಸಂಶೋಧನೆಯನ್ನ ಶ್ಲಾಘಸಿದ್ದು, ಮೋಟರ್‌‌ ಬೈಕ್‌ ಪೇಟೆಂಟ್‌ ಪಡೆದುಕೊಳ್ಳಲು ಕಳುಹಿಸುವಂತೆ ಹೇಳಿದೆ ಎನ್ನಲಾಗಿದೆ.

Trending on DriveSpark Kannada :

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕಾರಿನ ಹಿಂದೆ ಓಡಿದರು!!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಮತ್ತೊಂದು ಸ್ವಾರಸ್ಯಕರ ಬೈಕ್ ಸ್ಟೋರಿ :

ಬ್ರೆಜಿಲ್‍ನ ಸಾವ್ ಪಾಯೊ ನಗರದ ನಿವಾಸಿ ರಿಕಾರ್ಡೋ ಅಜ್ವೆಡಾಯಿಸ್ ಎಂಬುವವರು ಇಂತಹ ವಿಶೇಷತೆಯಿರುವ ಬೈಕ್ ನಿರ್ಮಾಣ ಮಾಡಿದ್ದು, ಈ ಬೈಕ್ ಕೇವಲ ಒಂದು ಲೀಟರ್ ನೀರಿನ ಸಹಾಯದಿಂದ ಬರೋಬ್ಬರಿ 500 ಕಿಮೀ ಕ್ರಮಿಸುತ್ತದೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ರಿಕಾರ್ಡೋ ಅವರು ತಮ್ಮ ಈ ವಿಭಿನ್ನ ಬೈಕ್‍ಗೆ ರಿಕಾರ್ಡೋ ಹೆಚ್2ಓ ಎಂದು ಹೆಸರಿಟ್ಟಿದ್ದಾರೆ. ಈ ಬೈಕ್‍ನಲ್ಲಿ ಒಂದು ಬಾಟರಿಯನ್ನು ಅಳವಡಿಸಲಾಗಿದ್ದು, ಇದು ನೀರಿನಿಂದ ಹೈಡ್ರೋಜನ್ ಉತ್ಪತ್ತಿ ಮಾಡುತ್ತದೆ.

ಬೈಕ್‍ನ ಇಂಜಿನ್ ಈ ಹೈಡ್ರೋಜನ್‍ನನ್ನು ಇಂಧನದ ರೂಪದಲ್ಲಿ ಬಳಸಿಕೊಳ್ಳುವುದರಿಂದ ಬೈಕ್ ಚಲಿಸುತ್ತದೆ. ಈ ವಿನೂತನ ಬೈಕ್‌ಗೆ ವಿದ್ಯುತ್ ಉತ್ಪಾದಿಬಲ್ಲ ಬಾಹ್ಯ ಕಾರು ಬ್ಯಾಟರಿ ಸಂಯೋಜಿಸಲಾಗಿದೆ. ಅಲ್ಲದೆ ನೀರಿನ ಕಣಗಳಿಂದ ಜಲಜನಕವನ್ನು ಬೇರ್ಪಡಿಸಲಾಗುತ್ತದೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಇದರ ಪರಿಣಾಮ ಉಂಟಾಗುವ ದಹನ ಕ್ರಿಯೆಯಲ್ಲಿ ಬೈಕ್ ಗೆ ಬೇಕಾದ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಅಂತಿಮವಾಗಿ ನೀರಾವಿ ಎಕ್ಸಾಸ್ಟ್ ಕೊಳವೆ ಮೂಲಕ ಹೊರಹೋಗುತ್ತದೆ. ಹಾಗಿದ್ದರೂ ವಿಮರ್ಶಕರ ಪ್ರಕಾರ ಬರಿ ನೀರಿನಿಂದ ಇಷ್ಟೊಂದು ದೊಡ್ಡ ಪ್ರಮಾಣದ ಶಕ್ತಿ ಉತ್ಪಾದಿಸಲು ಸಾಧ್ಯವಿಲ್ಲ. ಇನ್ನು ಸುರಕ್ಷತೆಯ ನಿಖರತೆ ಬಗ್ಗೆಯೂ ಸಂದೇಹವೆದ್ದಿದೆ.

English summary
10th class student from Jamshedpur invents motorbike which can run on water.
Please Wait while comments are loading...

Latest Photos