ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕಾರಿನ ಹಿಂದೆ ಓಡಿದರು!!

Written By:

ಕೆಲವು ದಿನಗಳ ಹಿಂದೆಯಷ್ಟೇ ಭಾರತದಲ್ಲಿಯೇ ಮೊದಲ ಬಾರಿಗೆ ಮೆಕ್‌ಲರೇನ್ 720ಎಸ್ ಐಷಾರಾಮಿ ದುಬಾರಿ ಕಾರು ಬೆಂಗಳೂರು ಮೂಲದ ಗ್ರಾಹಕರೊಬ್ಬರು ಖರೀದಿ ಮಾಡಿದ್ದರು ಎಂದು ಸುದ್ದಿಯಾಗಿತ್ತು.

To Follow DriveSpark On Facebook, Click The Like Button

ಈ ಕಾರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಕಾರು ಹೋದಲೆಲ್ಲಾ ಸಿಹಿ ಪದಾರ್ಥಕ್ಕೆ ಇರುವೆ ಮುತ್ತಿಕೊಳ್ಳುವ ರೀತಿಯಲ್ಲಿ ಜನರು ಕಾರಿನತ್ತ ಧಾವಿಸುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ ಎನ್ನಬಹುದು. ನಾವೇನಾದರೂ ಸುಳ್ಳು ಹೇಳುತ್ತಿದ್ದೇವೆ ಎಂದು ನಿಮಗನ್ನಿಸಿದರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ.

Recommended Video
2017 Skoda Octavia RS Launched In India | In Kannada - DriveSpark ಕನ್ನಡ
ಬೆಂಗಳೂರಿನ ರಸ್ತೆಗೆ ಬಂದ ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ; ವಿಡಿಯೋ

ಬೆಂಗಳೂರು ಮೂಲದ ರಂಜಿತ್ ಸುಂದರಮೂರ್ತಿ ಎಂಬ ಹೆಸರಿನ ವ್ಯಾಪಾರಿಯೊಬ್ಬರು, ಕೆಂಪು ಬಣ್ಣದ ಮೆಕ್‌ಲರೇನ್ 720ಎಸ್ ಬ್ರಿಟಿಷ್ ಸೂಪರ್ ಕಾರನ್ನು ತನ್ನದಾಗಿಸಿಕೊಂಡು ಟ್ವಿಟ್ಟರ್ ಖಾತೆಯಲ್ಲಿ ಚಿತ್ರವನ್ನು ಪ್ರಕಟಿಸಿದ್ದರು.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಟ್ರಾಫಿಕ್ ಸಿಗ್ನಲ್‌ನಲ್ಲಿ ಎಲ್ಲರೂ ತಮ್ಮ ಕಣ್ಣುಗಳನ್ನು ಈ ಕಾರಿನ ಮೇಲೆ ನೆಟ್ಟಿದ್ದರು, ಇನ್ನೂ ಕೆಲವು ಜನರು ತಾವು ಹೋಗುತ್ತಿದ್ದ ಕೆಲಸಕಾರ್ಯಗಳನ್ನು ಬಿಟ್ಟು, ಕಾರನ್ನು ಹಿಂಬಾಲಿಸಿದರು.

ಬೆಂಗಳೂರಿನ ರಸ್ತೆಗೆ ಬಂದ ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ; ವಿಡಿಯೋ

ಉದ್ಯಾನ ನಗರಿ ತುಂಬೆಲ್ಲಾ ಮೆಕ್‌ಲರೇನ್ 720ಎಸ್ ಮೇನಿಯಾ ಕಂಡು ಸ್ವತಃ ಕಾರಿನ ಒಡೆಯ ರಂಜಿತ್ ಸುಂದರಮೂರ್ತಿ ಒಂದು ಕ್ಷಣ ನಿಬ್ಬೆರಗಾಗಿದ್ದರೆ ಖಂಡಿತ ಅಚ್ಚರಿಯ ವಿಚಾರ ಅಲ್ಲವೇ ಅಲ್ಲವೆನ್ನುವಸ್ಟು ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಯುವಕರು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಕಾರಿನ ಚಿತ್ರ ಕ್ಲಿಕ್ಕಿಸಿ ಸಂಭ್ರಮ ಪಟ್ಟರು.

ಇನ್ನು ಬೆಂಗಳೂರು ಮೂಲದ ಗ್ರಾಹಕ ಕೊಂಡಿರುವ ಈ ಕಾರಿನ ಬಗ್ಗೆ ಹೇಳುವುದಾದರೆ, ಬಲಿಷ್ಠ 4.0-ಲೀಟರ್ ಅವಳಿ ಟರ್ಬೊ ವಿ8 ಎಂಜಿನ್ ಹೊಂದಿದ್ದು, 770 ಎನ್ಎಂ ತಿರುಗುಬಲದಲ್ಲಿ 710 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ ಹಾಗು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಹೊಂದಿರಲಿದೆ.

ಬೆಂಗಳೂರಿನಲ್ಲಿ ತನ್ನ ಕಮಲ್ ತೋರಿಸಿರುವ ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗದಲ್ಲಿ 100 ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು ಮೆಕ್‌ಲರೇನ್ 720ಎಸ್ ಕಾರು 341 ಕಿ.ಮೀ ಗರಿಷ್ಠ ವೇಗ ಮಿತಿ ಪಡೆದುಕೊಂಡಿದೆ.

English summary
A few days back, the first-ever McLaren owned by an Indian finally laid its tyres on Indian tarmac. The McLaren in question is a Memphis Red McLaren 720S owned by Bangalore businessman Ranjit Sundaramurthy.
Please Wait while comments are loading...

Latest Photos