ಭಾರತದ ಮೊದಲ ಮೆಕ್‌ಲಾರೆನ್ 750ಎಸ್ ಮಾಲೀಕನ ಮಡಿಲಿಗೆ: ಬ್ಯೂಟಿ ಆ್ಯಂಡ್ ದಿ ಬೀಸ್ಟ್ ಅಂದರೆ ಇದೇ!
ಕೆಲವು ವಾರಗಳ ಹಿಂದೆ ಮೆಕ್‌ಲಾರೆನ್ 750ಎಸ್ ಎಂಬ ಸೂಪರ್ ಕಾರಿನ ಕುರಿತಾಗಿ ಸುದ್ದಿಯೊಂSದನ್ನು ಮಾಡಿದ್ದೆವು. ನಿಮಗೆಲ್ಲಾ ತಿಳಿದುರುವ ಹಾಗೆ ಮೆಕ್‌ಲಾರೆನ್ ಎಂಬ ಹೆಸರು ಭಾರತೀಯರಿಗೆ ಹೊಸತೇನಲ್ಲ. ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಮೆಕ್‌ಲಾರೆನ್ ನ ಹಲವಾರು ಮಾದರಿಯ ಕಾರುಗಳನ್ನು ಕಾಣಬಹುದಾಗಿದೆ.
ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಬಿಡುಗಡೆಯಾಗಿದ್ದ ಮೆಕ್‌ಲಾರೆನ್ 750ಎಸ್ ಭಾರತದಲ್ಲಿ ಡೆಲಿವರಿಯಾಗಿದ್ದು, ಇದು ಭಾರತದ ಮೊದಲ ಮೆಕ್‌ಲಾರೆನ್ 750ಎಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ಯೂಟ್ಯೂಬ್ ಚಾನಲ್ ಒಂದರಲ್ಲಿ ಈ ಕಾರಿನ ಡೆಲಿವರಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ವಿಡಿಯೋದಲ್ಲಿ ಕಂಡು ಬರುವಂತೆ ಈ ಕಾರು ಲೆಫ್ಟ್ ಹ್ಯಾಂಡ್ ಡ್ರೈವ್ ಮಾದರಿಯಾಗಿದ್ದು ಇದನ್ನು ಖಾಸಗಿಯಾಗಿ ಭಾರತಕ್ಕೆ ತಂದ ಹಾಗೆ ಕಾಣಿಸುತ್ತಿಲ್ಲ. ಕಾರ್ನೆಟ್ ಮುಖಾಂತರ ಈ ಕಾರನ್ನು ಭಾರತಕ್ಕೆ ತಂದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಾರ್ನೆಟ್ ಎಂಬುದು ಕಾರುಗಳಿಗೆ ಒಂದು ರೀತಿಯ ಪಾಸ್‌ಪೋರ್ಟ್ ಇದ್ದಂತೆ. ಕಾರ್ನೆಟ್ ಮೂಲಕ ವಿದೇಶದ ಐಷಾರಾಮಿ ಕಾರುಗಳನ್ನು ಭಾರತಕ್ಕೆ ತಂದು 6 ತಿಂಗಳು ಅಥವಾ ವರ್ಷಗಳ ಕಾಲ ಭಾರತದಲ್ಲಿ ಓಡಿಸಬಹುದಾಗಿದೆ.
ಭಾರತದಲ್ಲಿ ಲಾಂಚ್ ಆಗಿರುವ ಹೊಸ ಮೆಕ್ಲಾರೆನ್ 750ಎಸ್ (McLaren 750S) ಕಾರಿನ ಆರಂಭಿಕ ಬೆಲೆ ಸುಮಾರು 5.91 ಕೋಟಿ ರೂಪಾಯಿಗಳು. ಹೌದು, ಎಕ್ಸ್ ಶೋ ರೂಮ್ ದರ ಇದಾಗಿದ್ದು ಆಯಾ ಪ್ರದೇಶದ ಟ್ಯಾಕ್ಸ್‌ನ ಅನುಗುಣವಾಗಿ ಈ ಕಾರಿನ ಬೆಲೆ ಬದಲಾಗುತ್ತದೆ. ಆಕರ್ಷಕ ಅಗ್ರೆಸಿವ್ ಲುಕ್ ಹೊಂದಿರುವ ಈ ಕಾರು ನೋಡುಗರನ್ನು ಒಂದೇ ನೋಟದಲ್ಲಿ ಸೆಳೆತಯತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಕಾರು ಭಾರತಕ್ಕೆ ಲಿಮಿಟೆಡ್ ಆಗಿದ್ದು ಕೆಲವೇ ಕೆಲವು ಸಂಖ್ಯೆಯಲ್ಲಿ ಮಾತ್ರ ಈ ಕಾರನ್ನು ನಿರ್ಮಾಣ ಮಾಡಲಾಗುತ್ತಿದೆ. ಹೌದು, ಕೇವಲ ಇಪ್ಪತ್ತೇ ಇಪ್ಪತ್ತು ಸಂಖ್ಯೆಯಲ್ಲಿ ಈ ಹೊಸ ಮೆಕ್‌ಲಾರೆನ್ ೭೫೦ ಎಸ್ ಕಾರನ್ನು ಕಂಪನಿ ಹೊರಬಿಡುತ್ತಿದ್ದು, ಈ ಕಾರು ಬೇಕಾದವರು ಆದಷ್ಟು ಬೇಗ ಶೋ ರೂಮ್ ಕಡೆ ಧಾವಿಸಬೇಕಾಗಿದೆ. ಮಾಹಿತಿಗಳ ಪ್ರಕಾರ ಈಗಾಗಲೇ ಈ ಕಾರನ್ನು ಭಾರತದಲ್ಲಿ ಕೊಳ್ಳಲು ಕಂಪನಿಗಳೊಂದಿಗೆ ಮಾತುಕತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ ಮೆಕ್‌ಲಾರೆನ್ 750ಎಸ್, M840T ಎಂಜಿನ್ ಹೊಂದಿದ್ದು ಈ ಎಂಜಿನ್ ಸಹಾಯದಿಂದ ಈ ಕಾರು ಬರೋಬ್ಬರಿ 750 hp ಪವರ್ ಮತ್ತು 800 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿದು ಬಂದಿದೆ. ಇನ್ನು ಇಷ್ಟೊಂದು ಪವರ್ ಅನ್ನು ಯಾವುದೇ ಎಲೆಕ್ಟ್ರಿಕ್ ಅಸಿಸ್ಟ್ ಸಹಾಯವಿಲ್ಲದೆ ಈ ಕಾರು ಉತ್ಪಾದಿಸುತ್ತದೆ ಎಂದರೆ ನೀವು ನಂಬಲೇ ಬೇಕು.

ಇನ್ನು ಹಳೆಯ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 2.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗಂಟೆಗೆ 341 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು ಲೆದರ್ ಮತ್ತು ಅಲ್ಕಾಂಟರಾ ವಸ್ತುಗಳ ಸಂಯೋಜನೆಯನ್ನು ನೀಡುತ್ತದೆ. ಈ ಕಾರಿನಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








