ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಸೂಪರ್‌ಕಾರ್‌ ಹಾಗೂ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮೆಕ್‌ಲಾರೆನ್ ಸೂಪರ್‌ಕಾರುಗಳ ಬೆಲೆ ಮಾಹಿತಿಗಳು ಬಹಿರಂಗವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಮೆಕ್‌ಲಾರೆನ್ ಕಂಪನಿಯು ತನ್ನ ಮೆಕ್ಲಾರೆನ್ 720ಎಸ್, 720ಎಸ್ ಸ್ಪೈಡರ್ ಮತ್ತು ಆರ್ಟುರಾ ಮಾದರಿಗಳನ್ನು ಭಾರತೀಯ ಮಾರುಕಟ್ಟೆ ಬಿಡುಗಡೆಗೊಳಿಸಲಿವೆ. ವಿಶ್ವದ ಕೆಲವೇ ಕೆಲವು ಅತಿ ಜನಪ್ರಿಯ ಸೂಪರ್‌ಕಾರ್‌ ತಯಾರಕರಲ್ಲಿ ಮೆಕ್‌ಲಾರೆನ್ ಕೂಡ ಒಂದಾಗಿದೆ. ಈ ಈ ಬ್ರ್ಯಾಂಡ್ ಈ ಹಿಂದೆ ಕೆಲವು ಅದ್ಭುತ ಸೂಪರ್‌ಕಾರ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಕ್ಲಾರೆನ್ ಸದ್ಯ ಮೆಕ್‌ಲಾರೆನ್ 720ಎಸ್, 720ಎಸ್ ಸ್ಪೈಡರ್, 765 ಎಲ್ಟಿ ಮತ್ತು ಜಿಟಿಯನ್ನು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಮೆಕ್ಲಾರೆನ್ ಜಿಟಿ

ಮೆಕ್ಲಾರೆನ್ ಜಿಟಿ 603 ಬಿಹೆಚ್‌ಪಿ 4.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಫೀಡ್ ಎಸ್‌ಎಸ್‌ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು ಸುಮಾರು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡುಕೊಳ್ಳುವ ಸಾಮರ್ಥ್ಯ ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಮೆಕ್ಲಾರೆನ್ ಜಿಟಿ ಕಾರಿನ ಬೆಲೆಯು ರೂ.3.72 ಕೋಟಿಯಾಗಿದೆ. ಈ ಕಾರ್ ನೊಂದಿಗೆ ಪ್ರಿ-ಕಾನ್ಫಿಗರ್ ಮಾಡಲಾದ ಆಡ್-ಆನ್ ಪ್ಯಾಕ್ ಅನ್ನು ಮೆಕ್ಲಾರೆನ್ ನೀಡಲಿದ್ದು, ಇದರಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, , ರಿಯರ್ ಕ್ಯಾಮೆರಾ, ವೆಹಿಕಲ್ ಲಿಫ್ಟ್ ಮತ್ತು ಹೆಚ್ಚಿನದನ್ನು ಹೊಂದಿರಲಿದೆ, ಇವುಗಳಿಗೆ ರೂ,29.77 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಮೆಕ್ಲಾರೆನ್ 720ಎಸ್

ಈ ಮೆಕ್ಲಾರೆನ್ 720ಎಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೂಪರ್‌ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 4.0-ಲೀಟರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 700 ಬಿಹೆಚ್‌ಪಿ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಇದು ಕೇವಲ ಮೂರು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾರ್ಡ್-ಟಾಪ್ ರೂಪಾಂತರ ಎಸ್ ಸ್ಪೈಡರ್ ಕೂಪ್ ರೂಪಾಂತರದಂತೆಯೇ ಎಂಜಿನ್ ಆಯ್ಕೆಯಿಂದ ಕೂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

720ಎಸ್ ಸ್ಪೈಡರ್ ಕಾರು 2.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಕಾರು 325 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಮೆಕ್ಲಾರೆನ್ 720ಎಸ್ ಕಾರಿನ ಬೆಲೆಯು ರೂ.4.65 ಕೋಟಿಯಾಗಿದೆ. ಇನ್ನು ಮೆಕ್ಲಾರೆನ್ 720ಎಸ್ ಕಾರಿನ ಬೆಲೆಯು ರೂ.5.04 ಕೋಟಿಯಾಗಿದೆ. ಇನ್ನು ಆರ್ಟುರಾ ಕಾರಿನ ಬೆಲೆಯ ಮಾಹಿತಿ ಬಹಿರಂಗವಾಗಿಲ್ಲ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಬಹಳ ದೀರ್ಘಕಾಲದಿಂದ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಯಿಂದ ದೂರ ಉಳಿದಿದೆ. ಮೆಕ್‌ಲಾರೆನ್ ಪ್ರಮುಖ ಪ್ರತಿಸ್ಪರ್ಧಿಗಳಾದ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಕಂಪನಿಗಳ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಆದರೆ ಮೆಕ್‌ಲಾರೆನ್ ತನ್ನ ಕಾರುಗಳನ್ನು ಭಾರತೀಯ ಮಾರುಕಟ್ಟೆಯ ಲಗ್ಗೆ ಇಟ್ಟಿರಿಲಿಲ್ಲ. ಇದೀಗ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಮೆಕ್‌ಲಾರೆನ್ ಕಂಪನಿ ಭಾರತಕ್ಕೆ ತನ್ನ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆ ಮಾಹಿತಿ ಬಹಿರಂಗ

ಭಾರತದಲ್ಲಿ ಮೆಕ್‌ಲಾರೆನ್ ಕಾರುಗಳು ಬಿಡುಗಡೆಗೊಂಡ ಬಳಿಕ ಸೂಪರ್‌ಕಾರ್‌ಗಳ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸುತ್ತದೆ .ಪ್ರತಿಸ್ಪರ್ಧಿ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಬ್ರ್ಯಾಂಡ್ ಗಳ ಸೂಪರ್‌ಕಾರ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, June 9, 2021, 20:32 [IST]
English summary
McLaren India Prices Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+