ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಸೂಪರ್‌ಕಾರ್‌ ಹಾಗೂ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಮೆಕ್‌ಲಾರೆನ್ ಕಂಪನಿಯು ತನ್ನ ಮೆಕ್ಲಾರೆನ್ 720ಎಸ್, 720ಎಸ್ ಸ್ಪೈಡರ್ ಮತ್ತು ಆರ್ಟುರಾ ಮಾದರಿಗಳನ್ನು ಭಾರತೀಯ ಮಾರುಕಟ್ಟೆ ಬಿಡುಗಡೆಗೊಳಿಸಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಹೊಸ ಮೂರು ಮೆಕ್‌ಲಾರೆನ್ ಸೂಪರ್‌ಕಾರ್‌ಗಳ ಬೆಲೆಗಳು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿವೆ ಎಂದು ವರದಿಗಗಳಾಗಿದೆ. ವಿಶ್ವದ ಕೆಲವೇ ಕೆಲವು ಅತಿ ಜನಪ್ರಿಯ ಸೂಪರ್‌ಕಾರ್‌ ತಯಾರಕರಲ್ಲಿ ಮೆಕ್‌ಲಾರೆನ್ ಕೂಡ ಒಂದಾಗಿದೆ. ಈ ಈ ಬ್ರ್ಯಾಂಡ್ ಈ ಹಿಂದೆ ಕೆಲವು ಅದ್ಭುತ ಸೂಪರ್‌ಕಾರ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಕ್ಲಾರೆನ್ ಸದ್ಯ ಮೆಕ್‌ಲಾರೆನ್ 720ಎಸ್, 720ಎಸ್ ಸ್ಪೈಡರ್, 765 ಎಲ್ಟಿ ಮತ್ತು ಜಿಟಿಯನ್ನು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಬಹಳ ದೀರ್ಘಕಾಲದಿಂದ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಯಿಂದ ದೂರ ಉಳಿದಿದೆ. ಇದರ ಪ್ರಮುಖ ಪ್ರತಿಸ್ಪರ್ಧಿಗಳಾದ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಕಂಪನಿಗಳ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಆದರೆ ಮೆಕ್‌ಲಾರೆನ್ ತನ್ನ ಕಾರುಗಳನ್ನು ಭಾರತೀಯ ಮಾರುಕಟ್ಟೆಯ ಬಿಡುಗಡೆಗೊಳಿಸಿದೆ. ಇದೀಗ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಮೆಕ್‌ಲಾರೆನ್ ಕಂಪನಿ ಭಾರತಕ್ಕೆ ತನ್ನ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಾರೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಭಾರತದಲ್ಲಿ ಮೆಕ್‌ಲಾರೆನ್ ಕಾರುಗಳು ಬಿಡುಗಡೆಗೊಂಡ ಬಳಿಕ ಸೂಪರ್‌ಕಾರ್‌ಗಳ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸುತ್ತದೆ .ಪ್ರತಿಸ್ಪರ್ಧಿ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಬ್ರ್ಯಾಂಡ್ ಗಳ ಸೂಪರ್‌ಕಾರ್‌ಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್‌ಕಾರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಸೆಲಬ್ರಿಟಿಗಳು ಮತ್ತು ಕ್ರಿಡಾಪಟುಗಳು ಹೆಚ್ಚಾಗಿ ಸೂಪರ್‌ಕಾರ್‌ಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಮುಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಮೆಕ್‌ಲಾರೆನ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಖಚಿತಪಡಿಸಲಾಗಿದೆ. ಮೆಕ್‌ಲಾರೆನ್ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ, ಬ್ರ್ಯಾಂಡ್‌ನ ವೆಬ್‌ಸೈಟ್‌ನ ಕಾನ್ಫಿಗರರೇಟರ್ ವಿಭಾಗವು ಈಗ ಭಾರತವನ್ನು ಕಾನ್ಫಿಗರೇಶನ್ ಅನ್ವಯಿಸುವ ದೇಶಗಳಲ್ಲಿ ಒಂದು ಎಂದು ಪಟ್ಟಿ ಮಾಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಮೆಕ್‌ಲಾರೆನ್ 720ಎಸ್, 720ಎಸ್ ಸ್ಪೈಡರ್ ಮತ್ತು ಆರ್ಟುರಾ ಸೂಪರ್‌ಕಾರ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. 720ಎಸ್ ಮತ್ತು 720ಎಸ್ ಸ್ಪೈಡರ್ ತುಂಬಾ ಹೋಲುತ್ತವೆ, ದೊಡ್ಡ ವ್ಯತ್ಯಾಸವೆಂದರೆ 720 ಎಸ್ ಹಾರ್ಡ್-ಟಾಪ್ ಪಡೆಯುತ್ತದೆ ಮತ್ತು ಸ್ಪೈಡರ್ ಕನ್ವರ್ಟಿಬಲ್ ಆಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಮೆಕ್‌ಲಾರೆನ್ 720ಎಸ್ ಮತ್ತು 720ಎಸ್ ಸ್ಪೈಡರ್ ಕಾರುಗಳಲ್ಲಿ 3,994 ಸಿಸಿ, ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 710 ಬಿಹೆಚ್‌ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಹೊಸ ಮೆಕ್‌ಲಾರೆನ್ ಸೂಪರ್‌ಕಾರ್‌ಗಳು

ಮೆಕ್‌ಲಾರೆನ್ ಆರ್ಟುರಾವನ್ನು ಮುಂದಿನ ತಲೆಮಾರಿನ ಸೂಪರ್ ಕಾರ್ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇದು 671 ಬಿಹೆಚ್‍ಪಿ ಪವರ್ ಮತ್ತು 720 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಪೂರ್ಣ ಹೈಬ್ರಿಡ್ ಡ್ರೈವ್‌ಟ್ರೇನ್ ಅನ್ನು ಪಡೆಯುತ್ತದೆ. ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.

Most Read Articles

Kannada
English summary
McLaren 720S, 720S Spider & Artura Confirmed For India Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X