ಮಾರುತಿ ಎರ್ಟಿಗಾ ಪ್ಯಾಸಿಯೊ ಎಕ್ಸ್‌ಪ್ಲೋರ್ ಎಡಿಷನ್ ಬಿಡುಗಡೆ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಎರ್ಟಿಗಾ ಬಹು ಬಳಕೆಯ ವಾಹನದ ನೂತನ ಪ್ಯಾಸಿಯೊ ಎಕ್ಸ್‌ಪ್ಲೋರ್ ಆವೃತ್ತಿಯನ್ನು (Ertiga Paseo Explore Edition) ಪರಿಚಯಿಸಿದೆ.
ಮಾರುತಿ ಎರ್ಟಿಗಾ ಉಪಯುಕ್ತ ಕಾರಿನ ಎರಡು ಲಕ್ಷ ಯುನಿಟ್ ಗಳ ಮಾರಾಟದ ಸಂಭ್ರವನ್ನಾಚರಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಆವೃತ್ತಿಯನ್ನು ದೇಶಕ್ಕೆ ಪರಿಚಯಿಸಲಾಗುತ್ತಿದೆ.

ಕಾರಿನ ಹೊರಮೈಯಲ್ಲಿ ಹೊಸ ದೇಹ ರೇಖೆ, ಡಿ ಪಿಲ್ಲರ್, ದೇಹ ಬಣ್ಣದ ಸ್ಪಾಯ್ಲರ್ ಹಾಗೂ ಒಳಗಡೆ ಕೂಲ್/ವಾರ್ಮ್ ಬಾಕ್ಸ್, ಬ್ಲೂಟೂತ್ ಹ್ಯಾಂಡ್ಸ್ ಫ್ರೀ ಕರೆ ಆಯ್ಕೆ, ಡಿವೈಸ್ ಚಾರ್ಜರ್, ಹೊಸ ಸೀಟು ಹೋದಿಕೆ, ಸ್ಟೀರಿಂಗ್ ವೀಲ್ ಕವರ್, ಪಿಲ್ಲೋ, ಡೋರ್ ಸಿಲ್ ಗಾರ್ಡ್ ಹಾಗೂ ಡಿಸೈನರ್ ಮ್ಯಾಟ್ ಇತ್ಯಾದಿ ಸವಲತ್ತುಗಳು ಲಭ್ಯವಾಗಲಿದೆ.
ಇವೆಲ್ಲದರ ಜೊತೆಗೆ ಡಿಜಿಟಲ್ ಟೈರ್ ವಾಯುಪೂರಕ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮುಂತಾದ ಸೌಲಭ್ಯಗಳನ್ನು ಆನಂದಿಸಬಹುದಾಗಿದೆ. ಅಂದ ಹಾಗೆ ನೂತನ ಪ್ಯಾಸಿಯೊ ಎಕ್ಸ್ ಪ್ಲೋರ್ ಮಾದರಿಯು ವಿಎಕ್ಸ್ಐ ಹಾಗೂ ವಿಡಿಐ ವೆರಿಯಂಟ್ ಗಳಲ್ಲಿ ಮಾತ್ರ ಲಭ್ಯವಾಗಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.4 ಲೀಟರ್ 4 ಸಿಲಿಂಡರ್ ಪೆಟ್ರೋಲ್ (95 ಅಶ್ವಶಕ್ತಿ) ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ (90 ಅಶ್ವಶಕ್ತಿ) ನಿಯಂತ್ರಿಸಲ್ಪಡಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.


Click it and Unblock the Notifications








