ದೇಶದ ಜನಪ್ರಿಯ ಮಾರುತಿ ಕಾರುಗಳಿಗೆ ಬೆಲೆ ಏರಿಕೆ ಬಿಸಿ
ದೇಶದ ಜನಪ್ರಿಯ ಮಾರುತಿ ಕಾರುಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ಭಾರತದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ 3,000 ರು.ಗಳಿಂದ ಗರಿಷ್ಠ 9,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.
ಆದರೆ ಈ ಬೆಲೆ ಏರಿಕೆ ನೀತಿಯಿಂದ ಈಗಷ್ಟೇ ಬಿಡುಗಡೆಗೊಂಡಿರುವ ಎಸ್ ಕ್ರಾಸ್ ಮಾದರಿಯನ್ನು ಹೊರತುಪಡಿಸಲಾಗಿದೆ. ಈ ಮೂಲಕ ಮಾರುತಿ ಸಂಸ್ಥೆಯು 22 ತಿಂಗಳ ಬಳಿಕ ಮೊದಲ ಬಾರಿಗೆ ಬೆಲೆ ಏರಿಕೆ ಘೋಷಿಸಿದೆ.

ಜುಲೈ ತಿಂಗಳಾಂತ್ಯಕ್ಕೆ ಹುಂಡೈ ಸಂಸ್ಥೆಯು ದರ ಏರಿಕೆ ಘೋಷಿಸಿತ್ತಲ್ಲದೆ ಗರಿಷ್ಠ 30,000 ರು.ಗಳ ವರೆಗೆ ಬೆಲೆ ವರ್ಧಿಸಿತ್ತು. ಈಗ ಮಾರುತಿ ಸಂಸ್ಥೆಯು ಇದೇ ನೀತಿಯನ್ನು ಅನುಸರಿಸಿದೆ.
ಹೊಸ ಬೆಲೆ ನೀತಿಯು ಆಗಸ್ಟ್ 11ರಿಂದಲೇ ಜಾರಿಗೆ ಬಂದಿರುವುದಾಗಿ ಸಂಸ್ಥೆಯು ತಿಳಿಸಿದೆ. ಪ್ರಸ್ತಕ್ತ ಆರ್ಥಿಕ ಮಾರುತಿ 4.16 ಲಕ್ಷ ಯನಿಟ್ ಗಳ ಮಾರಾಟದೊಂದಿಗೆ ಶೇಕಡಾ 15ರಷ್ಟು ವೃದ್ಧಿಯನ್ನು ಸಾಧಿಸಿದೆ.


Click it and Unblock the Notifications