ವರಮಹಾಲಕ್ಷ್ಮಿ ಹಬ್ಬ; ರಾಜ್ಯದಲ್ಲಿ ಒಂದೇ ದಿನದಲ್ಲಿ 1,600 ಕಾರು ಮಾರಾಟ

By Nagaraja

ವರಮಹಾಲಕ್ಷ್ಮಿ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ವಿಜ್ರಂಭಣೆಯಿಂದಲೇ ಆಚರಿಚಸಲಾಗಿತ್ತು. ಇದರಂತೆ ದೇಶದ ಅತಿ ದೊಡ್ಡ ಮಾರುತಿ ಸುಜುಕಿ ಸಂಸ್ಥೆಯು ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಒಂದೇ ದಿನದಲ್ಲಿ 1,600ರಷ್ಟು ಕಾರುಗಳನ್ನು ಮಾರಾಟ ಮಾಡಿರುವುದಾಗಿ ಪ್ರಕಟಿಸಿದೆ.

2015 ಆಗಸ್ಟ್ 28 ಶುಕ್ರವಾರದಂದು ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು. ಇದರ ಪರಿಣಾಮ ಮುಂಬೈ ಬಿಎಸ್‌ಇ ಶೇರು ಮಾರುಕಟ್ಟೆಯಲ್ಲಿ ಮಾರುತಿ ಶೇರುಗಳು ಶೇಕಡಾ 0.12ರಷ್ಟು ಏರಿಕೆ ಕಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಎಸ್ ಕ್ರಾಸ್

ರಾಜ್ಯದಲ್ಲಿ ಒಂದು ತಿಂಗಳಲ್ಲಿ ಸರಾಸರಿ 7,300 ಮಾರುತಿ ಕಾರುಗಳು ಮಾರಾಟವಾಗುತ್ತಿದೆ. ಅಲ್ಲದೆ ಶೇಕಡಾ 42.75 ರಷ್ಟು ಮಾರಾಟವನ್ನು ವಶಪಡಿಸಿಕೊಂಡಿದೆ ಎಂದು ಸಂಸ್ಥೆ ವಿವರಿಸಿದೆ.

2015 ಎಪ್ರಿಲ್ ನಿಂದ ಜುಲೈ ತಿಂಗಳ ವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ಸ್ವಿಫ್ಟ್, ಡಿಜೈರ್, ಸೆಲೆರಿಯೊ ಹಾಗೂ ಎರ್ಟಿಗಾ ಮಾದರಿಗಳನ್ನು ಅತಿ ಹೆಚ್ಚು ಮಾರಾಟ ಮಾಡಿವೆ.

Article Published On: Saturday, August 29, 2015, 11:08 [IST]
English summary
Maruti Suzuki Sells 1,600 Cars In Karnataka In A Single Day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+