ನಿಮಗೂ ಮಾರುತಿಯಿಂದ ಕರೆ ಬಂದಿದೆಯೇ?
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೆಲವು ನಿರ್ದಿಷ್ಟ ಮಾರುತಿ ಸುಜುಕಿ ಹೊಸ ಮಾದರಿಗಳು ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅಧಿಕೃತ ಡೀಲರುಗಳು ಗ್ರಾಹಕರ ಸಂಪರ್ಕದಲ್ಲಿದ್ದು, ಸಮಸ್ಯೆಯನ್ನು ನಿವಾರಿಸುವುದರಲ್ಲಿ ಕಾರ್ಯಮಗ್ನವಾಗಿದೆ.
ನಮಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ನೂತನವಾಗಿ ಬಿಡುಗೆಯಾಗಿರುವ ಮಾರುತಿ ಸೆಲೆರಿಯೊ, ಸಿಯಾಝ್ ಹಾಗೂ ಡಿಜೈರ್ ಆವೃತ್ತಿಗಳಲ್ಲಿ ಒಯಿಲ್ ಫಿಲ್ಟರ್ ಲೀಕೆಜ್ ಸಮಸ್ಯೆ ತಟ್ಟಿದೆ. ಇದರಂತೆ ಡೀಲರುಗಳು ಫೋನ್ ಮುಖಾಂತರ ಗ್ರಾಹಕರ ಸಂಪರ್ಕದಲ್ಲಿದೆ.

ಏನಿದು ಆಯಿಲ್ ಫಿಲ್ಟರ್?
ನಮ್ಮ ದೇಹದಲ್ಲಿ ರಕ್ತ ಹೇಗೆ ಹರಿದಾಡುತ್ತದೆಯೇ ಅದೇ ರೀತಿ ಕಾರಿಗೆ ಎಂಜಿನ್ ಆಯಿಲ್ ಅತಿ ಮುಖ್ಯ ಘಟಕವಾಗಿರುತ್ತದೆ. ಹಾಗೆಯೇ ದೋಷಪೂರಿತ ಎಂಜಿನ್ ಆಯಿಲ್ ಗಳನ್ನು ಶುದ್ಧಿಕರಿಸುವುದು ಆಯಿಲ್ ಫಿಲ್ಟರ್ ಗಳ ಪ್ರಮುಖ ಕೆಲಸವಾಗಿರುತ್ತದೆ.

ಕಾರಿನ ಎಂಜಿನ್ ಸೇರಿದಂತೆ ಪ್ರತಿಯೊಂದು ಘಟಕವು ಸರಿಯಾಗಿ ಕೆಲಸ ಮಾಡುವಂತೆ ನೋಡುವುದು ಆಯಿಲ್ ಫಿಲ್ಟರ್ ಗಳ ಕೆಲಸವಾಗಿರುತ್ತದೆ. ಹಾಗಾಗಿ ನಿರಂತರ ಅಂತರಾಳದಲ್ಲಿ ಆಯಿಲ್ ಫಿಲ್ಟರ್ ಬದಲಾಯಿಸುತ್ತಿದ್ದಲ್ಲಿ ಎಂಜಿನ್ ಜಾಸ್ತಿ ಬಾಳ್ವಿಕೆ ಬರಲಿದೆ.

ನಿಮಗೆ ನೀಡಲಾಗುವ ಕಾರು ಮ್ಯಾನುವಲ್ ಪುಸ್ತಕದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿದ್ದು, ಯಾವಾಗ ಒಯಿಲ್ ಫಿಲ್ಟರ್ ಬದಲಾಯಿಸಬೇಕು ಎಂಬುದರ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಇದರ ಬದಲಾಗಿ ಹಳೆಯ ಆಯಿಲ್ ಫಿಲ್ಟರ್ ಇಟ್ಟುಕೊಂಡೇ ಎಂಜಿನ್ ಆಯಿಲ್ ಬದಲಾಯಿಸಿದ್ದಲ್ಲಿ ಯಾವುದೇ ಫಲವುಂಟಾಗುವುದಿಲ್ಲ.

ಇದರ ಬದಲಾಗಿ ಹಳೆಯ ಆಯಿಲ್ ಫಿಲ್ಟರ್ ಇಟ್ಟುಕೊಂಡೇ ಎಂಜಿನ್ ಆಯಿಲ್ ಬದಲಾಯಿಸಿದ್ದಲ್ಲಿ ಯಾವುದೇ ಫಲವುಂಟಾಗುವುದಿಲ್ಲ. ಆದರೆ ಹೊಚ್ಚ ಹೊಸ ಕಾರಿನಲ್ಲೇ ಇಂತಹ ತೊಂದರೆ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಸ್ತುತ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಸೆಲೆರಿಯೊ ಹಾಗೂ ಸಿಯಾಝ್ ನಿರ್ದಿಷ್ಟ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಇದುವರೆಗೆ ಸಂಸ್ಥೆಯಿಂದ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಬಂದಿಲ್ಲ.

ಮಾರುತಿ ಎರ್ಟಿಗಾದಲ್ಲೂ ಇದಕ್ಕೆ ಸಮಾನವಾದ ಸಮಸ್ಯೆ ಕಂಡಬರುವ ಭೀತಿಯಿದೆ. ಹಾಗಿದ್ದರೂ ಡೀಲರುಗಳು ಗ್ರಾಹಕರ ಸಂಪರ್ಕದಲ್ಲಿರುವುದು ತೃಪ್ತಿದಾಯಕವೆನಿಸಿದೆ.


Click it and Unblock the Notifications