ಭಾರತದ ಜನಪ್ರಿಯ ಕಾರು ಸ್ವಿಫ್ಟ್ ಕುರಿತಾಗಿನ 9 ಸತ್ಯಗಳು!
ಭಾರತದ ಅತ್ಯಂತ ಜನಪ್ರಿಯ ಕಾರು ಯಾವುದೆಂದು ಯಾವನೇ ಚಿಕ್ಕ ಬಾಲಕನನ್ನು ಕರೆದು ಕೇಳಿದರೂ ಮೊದಲು ಸಿಗುವ ಉತ್ತರ ಆಲ್ಟೊ ಹಾಗೂ ಸ್ವಿಫ್ಟ್ ಆಗಿರುತ್ತದೆ. ವಿಶೇಷವೆಂದರೆ ಈ ಎರಡು ಮಾದರಿಗಳನ್ನು ದೇಶದ ಅಗ್ರಗಣ್ಯ ಪ್ರಯಾಣಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಮಿಸುತ್ತಿದೆ.
ದೇಶದ್ಯಾಂತ ಮಾರುತಿ ಒದಗಿಸುತ್ತಿರುವ ಡೀಲರ್ ಹಾಗೂ ಸರ್ವೀಸ್ ಜಾಲವೇ ಸಂಸ್ಥೆಯ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣವಾಗಿದೆ. ಹಾಗಿದ್ದರೂ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ತನ್ನದೇ ಕೆಲವು ಅಂಶಗಳಿಂದ ವಿಶೇಷವಾಗಿ ಗುರುತಿಸ್ಪಟ್ಟಿದ್ದು, ಗ್ರಾಹಕರ ನೆಚ್ಚಿನ ಕಾರೆನಿಸಿಕೊಂಡಿದೆ. ಇಂದಿನ ಈ ಲೇಖನದಲ್ಲಿ ಮಾರುತಿ ಸ್ವಿಫ್ಟ್ ಕಾರಿಗೆ ಸಂಬಂಧಪಟ್ಟಂತೆ ಒಂಬತ್ತು ರೋಚಕ ಸತ್ಯಗಳನ್ನು ಬಹಿರಂಗ ಮಾಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯರಿ.

01. ಪಾದಾರ್ಪಣೆ
ಮಾರುತಿ ಸುಜುಕಿ ಸ್ವಿಫ್ಟ್ 2005 ಮೇ ತಿಂಗಳಲ್ಲಿ ಭಾರತ ಮಾರುಕಟ್ಟೆಯನ್ನು ಪ್ರವೇಶ ಪಡೆದಿತ್ತು. ತದಾ ಸಮಯ ಸ್ವಿಫ್ಟ್ ಕಾರು 1.3 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿತ್ತು. ಬಳಿಕ 2007ರಲ್ಲಿ ಫಿಯೆಟ್ ನಿಂದ ಆಮದು ಮಾಡಲಾದ 1.3 ಲೀಟರ್ ಡಿಡಿಐಎಸ್ ಎಂಜಿನ್ ಬಳಕೆ ಮಾಡಲಾಗಿತ್ತು.

02. ಎಂಜಿನ್
2010ರಲ್ಲಿ ಬಿಎಸ್ IV ಎಮಿಷನ್ ಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1.3 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬದಲಾಯಿಸಲಾಗಿತ್ತು. ಇದರ ಸ್ಥಾನಕ್ಕೆ 1.2 ಲೀಟರ್ ಕೆ ಸಿರೀಸ್ ಎಂಜಿನ್ ಲಗ್ಗೆಯಿಟ್ಟಿತ್ತು. 2011ರಲ್ಲಿ ಮಾರುತಿಯು ಎಲ್ಲ ಹೊಸತನದ ಮೂರನೇ ತಲೆಮಾರಿನ 1.2 ಲೀಟ್ರ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಎಂಜಿನ್ ಅನ್ನು ಪರಿಚಯಿಸಿತ್ತು.

03. ಮೂಲ ವಿನ್ಯಾಸ
ಮಾರುತಿ ಸ್ವಿಫ್ಟ್ ಮೂಲ ವಿನ್ಯಾಸವು ಸುಜುಕಿ ಸ್ವಿಫ್ಟ್ ಕಾರಿನದ್ದಾಗಿದೆ. ಪ್ರಸ್ತುತ ಕಾರು ಆಗಲೇ ವಿದೇಶ ಮಾರುಕಟ್ಟೆಯಲ್ಲಿ ಮಾರಾಟದಲ್ಲಿತ್ತು.

04. ತಲೆಮಾರಿಂದ ತಲೆಮಾರಿಗೆ
ತವರೂರಾದ ಜಪಾನ್ ನಲ್ಲಿ ಸುಜುಕಿ ಸ್ವಿಫ್ಟ್ ನಿರ್ಮಾಣವು 1983ನೇ ಇಸವಿಯಿಂದಲೇ ಆರಂಭವಾಗತ್ತಲ್ಲದೆ ಈಗಾಗಲೇ ಹಲವು ತಲೆಮಾರಿನ ಮಾದರಿಗಳನ್ನು ಕಂಡಿದೆ. ಚೀನಾ ಹಾಗೂ ಜಪಾನ್ ನಲ್ಲಿ ಫೈವ್ ಡೋರ್ ವರ್ಷನ್ ಲಭ್ಯವಿದ್ದು, 1.3 ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಗಳಲ್ಲಿ ಫೋರ್ ವೀಲ್ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತದೆ.

05. ಮೊದಲನೇ ತಲೆಮಾರಿನ ಮಾದರಿ
2000ನೇ ಇಸವಿಯಲ್ಲಿ ಮೊದಲನೇ ತಲೆಮಾರಿನ ಸ್ವಿಫ್ಟ್ ಮಾದರಿಯನ್ನು ಪರಿಚಯಿಸಲಾಗಿತ್ತು. ಇದು ಸುಜುಕಿ ಕಲ್ಟಸ್ (Suzuki Cultus) ಮಾದರಿಗೆ ಬಲಾಯಿತ್ತು. ಇದೇ ಕಾರು ಜಪಾನ್ ಹೊರಗಡೆ ಸುಜುಕಿ ಇಗ್ನಿಸ್ (Suzuki Ignis) ಎಂದು ಗುರುತಿಸ್ಪಟ್ಟಿತ್ತು. ಬಿಡುಗಡೆ ವೇಳೆ ಮೂರು ಹಾಗೂ ಐದು ಬಾಗಿಲುಗಳ ಆಯ್ಕೆಯನ್ನು ನೀಡಲಾಗಿತ್ತು.

06. ಷೆವರ್ಲೆ ಕ್ರೂಜ್ ಕ್ರಾಸೋವರ್
2001ರಲ್ಲಿ ಅಮೆರಿಕದ ಜನರಲ್ ಮೋಟಾರ್ಸ್ ಸಂಸ್ಥೆಯು ಸ್ವಿಫ್ಟ್ ತಳಹದಿಯಲ್ಲಿ ಷೆವರ್ಲೆ ಕ್ರೂಜ್ ಕ್ರಾಸೋವರ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಸ್ವಿಫ್ಟ್ ನ ಮೂಲ ಆಯಾಮ ಹಾಗೂ ಎಂಜಿನ್ ಕಾಯ್ದುಕೊಳ್ಳಲಾಗಿತ್ತು. ಪ್ರಸ್ತುತ ಕಾರು ಆಸ್ಟ್ರೇಲಿಯಾದಲ್ಲಿ ಹೋಲ್ಡನ್ ಕ್ರೂಜ್ ಎಂಬ ಹೆಸರಿನಲ್ಲಿ 2002ರಿಂದ 2006ರ ವರೆಗೆ ಮಾರಾಟದಲ್ಲಿತ್ತು.

07. ಸ್ವಿಫ್ಟ್ ಆರ್ ಎಸ್
2005 ಅಕ್ಟೋಬರ್ ನಲ್ಲಿ ಸ್ವಿಫ್ಟ್ ಕ್ರೀಡಾ ಆವೃತ್ತಿಯಾಗಿರುವ ಸ್ವಿಫ್ಟ್ ಆರ್ ಎಸ್ ಪ್ರವೇಶವಾಗಿತ್ತು. ಬಳಿಕ 2006 ಸೆಪ್ಟೆಂಬರ್ ನಲ್ಲಿ ಸ್ವಿಫ್ಟ್ ಸ್ಪೋರ್ಟ್ ಎಂಬ ಹೆಸರಿನಲ್ಲಿ ಅನೇಕ ಯುರೋಪ್ ಮಾರುಕಟ್ಟೆಗೆ ಪರಿಚಯವಾಗಿತ್ತು.

08. ಸ್ವಿಫ್ಟ್ ವಿಂಡ್ ಸಾಂಗ್
ಭಾರತಕ್ಕೆ ಸ್ವಿಫ್ಟ್ ವಿಂಡ್ ಸಾಂಗ್ ಎಂಬ ವಿಶೇಷ ಆವೃತ್ತಿಯು ಪರಿಚಯವಾಗಿತ್ತು. ಇದು ಪ್ರಮುಖವಾಗಿಯೂ ಸಂಗೀತ ಪ್ರೇಮಿಗಳನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು. ಕಾರಿನ ದೇಹ ವಿನ್ಯಾಸದಿಂದಲೇ ನೀವಿದನ್ನು ಗಮನಿಸಬಹುದಾಗಿದೆ.

09. ಸ್ವಿಫ್ಟ್‌ಗೆ ಸರಿಸಾಟಿ ಸ್ವಿಫ್ಟ್ ಮಾತ್ರ
ಈ ವರೆಗೆ ಸುಜುಕಿ ಸ್ವಿಫ್ಟ್ 60ಕ್ಕೂಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ವಿಶ್ವಾಸಾರ್ಹತೆ, ಬಾಳ್ವಿಕೆ, ಅನುಕೂಲ ಹಾಗೂ ಆರಾಮದಾಯಕತೆಯ ವಿಚಾರದಲ್ಲಿ ಈಗಲೂ ಜನಮನ್ನಣೆ ಪಡೆದುಕೊಂಡಿದೆ. ಒಟ್ಟಿನಲ್ಲಿ ಸ್ವಿಫ್ಟ್‌ಗೆ ಸರಿಸಾಟಿ ಸ್ವಿಫ್ಟ್ ಮಾತ್ರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.


Click it and Unblock the Notifications








