ಮಾರುತಿ ಸ್ವಿಫ್ಟ್ ಎಸ್‌ಪಿ ಸೀಮಿತ ಆವೃತ್ತಿ ಬಿಡುಗಡೆ
ಹಬ್ಬದ ಆವೃತ್ತಿ ಇನ್ನೇನು ಆರಂಭವಾಗಲಿರುವಂತೆಯೇ ದೇಶದ ಮುಂಚೂಣಿಯ ಸಂಸ್ಥೆಗಳು ಒಂದರ ಬಳಿಕ ಒಂದರಂತೆ ಸೀಮಿತ ಹಾಗೂ ಸಂಭ್ರಮದ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ದೇಶದ ನಂ.1 ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇದಕ್ಕೊಂದು ಹೊಸ ಸೇರ್ಪಡೆ.
ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ಎಸ್‌ಪಿ ಸೀಮಿತ ಆವೃತ್ತಿಗಳ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ 5.15 ಹಾಗೂ 6.20 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗಿದ್ದರೂ ಸ್ವಿಫ್ಟ್ ಎಸ್‌ಪಿಗಳ ಎಷ್ಟು ಮಾದರಿಗಳು ಮಾರಾಟವಾಗಲಿದೆ ಎಂಬುದು ಇನ್ನು ಅಸ್ಪಷ್ಟ.

ಕಪ್ಪು ವರ್ಣದ ಬಿ ಪಿಲ್ಲರ್, ಸ್ವಿಫ್ಟ್ ಎಸ್‌ಪಿ ಲಾಂಛನ, ಸ್ಟೀರಿಯೊ ಜೊತೆಗೆ ಬ್ಲೂಟೂತ್ ಯುಎಸ್ ಬಿ, ನಾಲ್ಕು ಪವರ್ ವಿಂಡೋ, 60:40 ವಿಭಜಿತ ಸೀಟುಗಳು, ಮ್ಯೂಸಿಕ್ ಸಿಸ್ಟಂ, ಸೀಟು ಕವರ್, ಸ್ಟೀರಿಂಗ್ ಕವರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಕೀಲೆಸ್ ಎಂಟ್ರಿ ಹಾಗೂ ಫಾಗ್ ಲ್ಯಾಂಪ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.
ನೂತನ ಸ್ವಿಫ್ಟ್ ಎಸ್‌ಪಿ ಮಾದರಿಯು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಹಾಗೂ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್ ಗೆ 25.3 ಹಾಗೂ 20.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ವಿಶಿಷ್ಟತೆಗಳು
- ಇಂಟೇಗ್ರೇಟಡ್ ಮ್ಯೂಸಿಕ್ ಸಿಸ್ಟಂ,
- ನಾಲ್ಕು ಸ್ಪೀಕರ್,
- ಬ್ಲೂಟೂತ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿ,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
- ಎಲ್ಲ ನಾಲ್ಕು ಪವರ್ ವಿಂಡೋಗಳು,
- ಸೆಂಟ್ರಲ್ ಲಾಕಿಂಗ್-ಕೀಲೆಸ್ ಎಂಟ್ರಿ,
- ಸ್ಫೋರ್ಟಿ ಸೀಟು ಕವರ್ ಮತ್ತು ಸ್ಟೀರಿಂಗ್ ಕವರ್,
- ಫಾಗ್ ಲ್ಯಾಂಪ್,
- ಸ್ಪೋರ್ಟಿ ವೀಲ್ ಕವರ್,
- ಲಿಮಿಟೆಡ್ ಎಡಿಷನ್ ಮೆಮರಿ ಫೋಮ್ ಕುಷನ್,
- ಬಾಡಿ ಸೈಡ್ ಮೌಲ್ಡಿಂಗ್,
- ದೇಹ ಬಣ್ಣದ ಔಟ್ ಸೈಡ್ ರಿಯರ್ ವ್ಯೂ ಮಿರರ್,
- ಕಪ್ಪು ವರ್ಣದ ಪಿಲ್ಲರ್,
- 60:40 ವಿಭಜಿತ ಸೀಟು


Click it and Unblock the Notifications