ಮಾರುತಿ ಎಸ್ ಕ್ರಾಸ್; ನೀವು ತಿಳಿದುಕೊಳ್ಳಬೇಕಾದ 7 ಅಂಶಗಳು
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ನೂತನ ಎಸ್ ಕ್ರಾಸ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಮೂಲಕ ಸಣ್ಣ ಕಾರುಗಳತ್ತ ಗಮನ ಕೇಂದ್ರಿತವಾಗಿದ್ದ ಮಾರುತಿ, ಈಗ ಕ್ರೀಡಾ ವಿಭಾಗದತ್ತವೂ ತನ್ನ ಗಮನ ಹರಿಸಲಿದೆ.
ನಿಮ್ಮ ಮಾಹಿತಿಗಾಗಿ, ಎಸ್-ಕ್ರಾಸ್ ಕ್ರಾಸೋವರ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಈಗ ನೂತನ ಎಸ್ ಕ್ರಾಸ್ ಬಗ್ಗೆ ತಿಳಿದುಕೊಳ್ಳಬೇಕಾದ 7 ಅಂಶಗಳ ಬಗ್ಗೆ ಹೇಳಿಕೊಡಲಿದ್ದೇವೆ.

ಎಸ್ಎಕ್ಸ್4 ತಳಹದಿಯಲ್ಲಿ ಮಾರುತಿ ಎಸ್-ಕ್ರಾಸ್ ಕ್ರಾಸೋವರ್ ಮಾದರಿಯನ್ನು ನಿರ್ಮಿಸಲಾಗಿದೆ. ನೂತನ ಎಸ್ಎಕ್ಸ್4 ಎಸ್ ಕ್ರಾಸ್, ದೇಶದಲ್ಲಿ ಎಸ್-ಕ್ರಾಸ್ ಎಂದೇ ಹೆಸರಿಸಿಕೊಳ್ಳಲಿದೆ.

ಇದು ದೇಶದಲ್ಲಿ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಇನ್ನು ಕಾರಿನಡಿಯಲ್ಲಿ 1.3 ಲೀಟರ್ ಹಾಗೂ 1.6 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದರ 1.6 ಲೀಟರ್ ಡೀಸೆಲ್ ಎಂಜಿನ್ 118 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಆರ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

ನೂತನ ಎಸ್ ಕ್ರಾಸ್ ಅಂದಾಜು ಎಂಟು ಲಕ್ಷ ರು.ಗಳ ಬೆಲೆಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಅಂತೆಯೇ ಪ್ರೀಮಿಯಂ ನೆಕ್ಸಾ ವಿತರಕರ ಬಳಿ ಮಾರಾಟವಾಗಲಿದೆ.

ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಮಾರುತಿ ಎಸ್ ಕ್ರಾಸ್ 4300 ಎಂಎಂ ಉದ್ದ, 1765 ಎಂಎಂ ಅಗಲ ಹಾಗೂ 1580 ಎಂಎಂ ಎತ್ತರವನ್ನು ಹೊಂದಿದೆ. ಹಾಗೆಯೇ 170 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇದರಲ್ಲಿದೆ.

ಅಂತೆಯೇ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಬ್ಲ್ಯಾಕ್ ಇಂಟಿರಿಯರ್ ಜೊತೆ ಸಿಲ್ವರ್ ಆಸೆಂಟ್, ರಿಯರ್ ಏರ್-ಕಾನ್ ವೆಂಟ್ಸ್ ಮತ್ತು ಸ್ಮಾರ್ಟ್ ಪ್ಲೇ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ ಇರಲಿದೆ.

ಇನ್ನುಳಿದಂತೆ ಕ್ರೋಮ್ ಅಂದತೆ, 16 ಇಂಚುಗಳು ಅಲಾಯ್ ವೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಡ್ ಮತ್ತು ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಸೇವೆ ಇರಲಿದೆ.


Click it and Unblock the Notifications