ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಎಸ್ ಬಿಡುಗಡೆ; ಬೆಲೆ 2.4 ಕೋಟಿ ರು.

By Nagaraja

ಜರ್ಮನಿಯ ಐಷಾರಾಮಿ ಸಂಸ್ಥೆ ಮರ್ಸಿಡಿಸ್ ಬೆಂಝ್ ಅತಿ ನೂತನ ಎಎಂಜಿ ಜಿಟಿ ಎಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಳೆದ ದಿನವಷ್ಟೇ ಬೆಂಝ್ ಭಾರತ ಬಿಡುಗಡೆ ಬಗ್ಗೆ ಸಮಗ್ರವಾದ ಲೇಖನವನ್ನು ಪ್ರಕಟಿಸಿದ್ದೆವು.

ಬೆಲೆ ಮಾಹಿತಿ: 2.4 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ಇದು ಪ್ರಸಕ್ತ ಸಾಲಿನಲ್ಲಿ ಬೆಂಝ್ ಬಿಡುಗಡೆ ಮಾಡುತ್ತಿರುವ 14ನೇ ಉತ್ಪನ್ನವಾಗಿದೆ. ಈ ಮೂಲಕ 2015ನೇ ಸಾಲಿನಲ್ಲಿ 15 ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಮರ್ಸಿಡಿಸ್ ಬೆಂಝ್ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಸಿಬಿಯು

ಸಿಬಿಯು

ಜರ್ಮನಿಯ ಸಿಂಡಲ್‌ಫಿಂಗನ್ ಘಟಕದಲ್ಲಿ ನಿರ್ಮಾಣವಾಗಲಿರುವ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಎಸ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಪ್ರವೇಶವಾಗಲಿದೆ.

ವೆರಿಯಂಟ್

ವೆರಿಯಂಟ್

ಪ್ರಸ್ತುತ ಸೂಪರ್ ಕಾರು ಎರಡು ವೆರಿಯಂಟ್ ಗಳನ್ನು ಪಡೆಯಲಿದೆ. ಅವುಗಳೆಂದರೆ ಎಎಂಜಿ ಜಿಟಿ ಮತ್ತು ಜಿಟಿ ಎಸ್. ಈ ಪೈಕಿ ಟ್ರ್ಯಾಕ್ ಮಾಡೆಲ್ ಸ್ಪೆಷಲಿಷ್ಟ್ ಎಎಂಜಿ ಜಿಟಿ3 ಮುಂದಿನ ವರ್ಷದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

  • 4.0 ಲೀಟರ್ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್,
  • 7 ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ಟ್ ಡಿಸಿಟಿ ಗೇರ್ ಬಾಕ್ಸ್,
  • 503 ಅಶ್ವಶಕ್ತಿ, 650 ಎನ್‌ಎಂ ತಿರುಗುಬಲ.
  • ವೇಗವರ್ಧನೆ

    ವೇಗವರ್ಧನೆ

    • 3.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
    • ಗರಿಷ್ಠ ವೇಗ: ಗಂಟೆಗೆ 310 ಕೀ.ಮೀ.
    • ವಿಶಿಷ್ಟತೆಗಳು

      ವಿಶಿಷ್ಟತೆಗಳು

      • ಪುಶ್ ಬಟನ್ ಸ್ಟ್ಯಾರ್ಟ್,
      • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟು,
      • ಲಾಕಿಂಗ್ ಡಿಫೆರನ್ಸಿಯನ್,
      • ಸ್ಪೋರ್ಟ್ಸ್ ಸಸ್ಪೆನ್ಷನ್ ಜೊತೆ ಅಲ್ಯೂಮಿನಿಯಂ ಡಬಲ್ ವಿಶ್ ಬೋನ್,
      • ಎಂಟು ಇಂಚುಗಳ ಸ್ಕ್ರೀನ್ ಕಂಟ್ರೋಲ್,
      • ಎಎಂಜಿ ಅಡಾಪ್ಟಿವ್ ಸಸ್ಪೆನ್ಷನ್,
      • ಲೆಥರ್ ಇಂಟಿರಿಯರ್.
      • ಐದು ಚಾಲನಾ ವಿಧಗಳು

        ಐದು ಚಾಲನಾ ವಿಧಗಳು

        • ಕಂಫರ್ಟ್,
        • ಸ್ಪೋರ್ಟ್,
        • ಸ್ಪೋರ್ಟ್ ಪ್ಲಸ್,
        • ರೇಸ್ ಮತ್ತು
        • ವೈಯಕ್ತಿಕ ಮೋಡ್
        • ಸುರಕ್ಷತೆ

          ಸುರಕ್ಷತೆ

          • ಢಿಕ್ಕಿ ತಡೆ ಸಹಾಯಿ ಪ್ಲಸ್,
          • ಆಂಟೆಕ್ಷನ್ ಅಸಿಸ್ಟ್,
          • ಅಡಾಪ್ಟಿವ್ ಸಸ್ಪೆನ್ಷನ್,
          • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
          • ಸ್ಟೆಬಿಲಿಟಿ ಕಂಟ್ರೋಲ್,
          • ಏರ್ ಬ್ಯಾಗ್
          • ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಎಸ್ ಬಿಡುಗಡೆ

            ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ನಲ್ಲಿ ಸುರಕ್ಷಿತ ಕಾರೆಂದೆನಿಸಿಕೊಂಡಿರುವ ಜಿಟಿಎಶ್ ಈಗ ಭಾರತದಲ್ಲೂ ಲಭ್ಯವಾಗಲಿದೆ. ಇನ್ನೊಂದೆಡೆ ಸ್ಟ್ಯಾಂಡರ್ಡ್ ಮಾದರಿಯು ಮುಂದಿನ ದಿನಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

Article Published On: Tuesday, November 24, 2015, 14:59 [IST]
English summary
Mercedes-Benz Launch The AMG GT S In India For Rs. 2.4 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+