ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

By Nagaraja

ಜರ್ಮನಿ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್ ಮಗದೊಂದು ಸೂಪರ್ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಎಲ್ಲ ಹೊಸದಿಂದ ಕೂಡಿರುವ ಮರ್ಸಿಡಿಸ್ ಬೆಂಝ್ ಜಿಟಿ ಎಸ್ ಮಾದರಿಯು ಇದೇ ಮುಂಬರುವ ನವೆಂಬರ್ 24ರಂದು ಬಿಡುಗಡೆಯಾಗಲಿದೆ.

ಇದಕ್ಕೂ ಮೊದಲು ಎರಡು ವರ್ಷಗಳ ಹಿಂದೆ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಮರ್ಸಿಡಿಸ್ ಬೆಂಝ್ ಜಿಟಿಎಸ್ ತದಾ ಬಳಿಕ ಅನೇಕ ಜಾಗತಿಕ ಮಾರುಕಟ್ಟೆಯನ್ನು ತಲುಪಿದೆ. ಈಗ ಈ ಕನಸಿನ ಕನ್ಯೆ ಭಾರತಕ್ಕೂ ಪ್ರವೇಶಿಸುತ್ತಿದ್ದಾಳೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

ಪ್ರಸ್ತುತ ಸೂಪರ್ ಕಾರು ಎರಡು ವೆರಿಯಂಟ್ ಗಳನ್ನು ಪಡೆಯಲಿದೆ. ಅವುಗಳೆಂದರೆ ಎಎಂಜಿ ಜಿಟಿ ಮತ್ತು ಜಿಟಿ ಎಸ್. ಈ ಪೈಕಿ ಟ್ರ್ಯಾಕ್ ಮಾಡೆಲ್ ಸ್ಪೆಷಲಿಷ್ಟ್ ಎಎಂಜಿ ಜಿಟಿ3 ಮುಂದಿನ ವರ್ಷದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ನಲ್ಲಿ ಸುರಕ್ಷಿತ ಕಾರೆಂದೆನಿಸಿಕೊಂಡಿರುವ ಜಿಟಿಎಶ್ ಈಗ ಭಾರತದಲ್ಲೂ ಲಭ್ಯವಾಗಲಿದೆ. ಇನ್ನೊಂದೆಡೆ ಸ್ಟ್ಯಾಂಡರ್ಡ್ ಮಾದರಿಯು ಮುಂದಿನ ದಿನಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

ಜರ್ಮನಿಯ ಘಟಕದಲ್ಲೇ ನಿರ್ಮಾಣವಾಗಲಿರುವ ಎಎಂಜಿ ಜಿಟಿ ಎಸ್ ಭಾರತವನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ತಲುಪಲಿದೆ. ಇದರ 4.0 ಲೀಟರ್ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ 650 ಎನ್‌ಎಂ ತಿರುಗುಬಲದಲ್ಲಿ 503 ಅಶ್ವಶಕ್ತಿ ಉತ್ಪಾದಿಸಲಿದೆ. ಇದರಲ್ಲಿ 7 ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ಟ್ ಡಿಸಿಟಿ ಗೇರ್ ಬಾಕ್ಸ್ ಇರಲಿದೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

ಅಷ್ಟಕ್ಕೂ ಗಂಟೆಗೆ ಗರಿಷ್ಠ 310 ಕೀ.ಮೀ. ಸಂಚರಿಸಬಲ್ಲ ಬೆಂಝ್ ಎಎಂಜಿ ಎಸ್ 3.8 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಬೆಂಝ್ ಕನಸಿನ ಕನ್ಯೆ

ಇನ್ನು ಬೆಲೆ ಬಗ್ಗೆ ಮಾತನಾಡುವುದಾದ್ದಲ್ಲಿ ಬೆಂಝ್ ಜಿಟಿ ಎಸ್ ದೇಶದಲ್ಲಿ ಎರಡು ವರೆ ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.


Article Published On: Monday, November 23, 2015, 14:59 [IST]
English summary
Mercedes-Benz AMG GT S Supercar Launching In India On Nov. 24
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+