ಹೊಸ ಸ್ವರೂಪ ಪಡೆದ ಬೆಂಝ್ ಅಗ್ಗದ ಕಾರು
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎ ಕ್ಲಾಸ್ ಕಾರನ್ನು ಹೊಸ ಸ್ವರೂಪದಲ್ಲಿ ಬಿಡುಗಡೆ ಮಾಡಿದೆ. ನೂತನ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಫೇಸ್ ಲಿಫ್ಟ್ ಮಾದರಿಯು ಎಂಟ್ರಿ ಲೆವೆಲ್ ಐಷಾರಾಮಿ ಕಾರು ಖರೀದಿಗಾರರಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.
ಪ್ರಾರಂಭಿಕ ಬೆಲೆ: 24.95 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)
ಇದು ಪ್ರಸಕ್ತ ಸಾಲಿನಲ್ಲಿ ಬೆಂಝ್ ಬಿಡುಗಡೆ ಮಾಡುತ್ತಿರುವ 15ನೇ ಮಾದರಿಯಾಗಿದೆ. ಈ ಮೂಲಕ 2015ನೇ ಸಾಲಿನಲ್ಲಿ 15 ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆಗೊಳಿಸುವುದಾಗಿ ವರ್ಷಾರಂಭದಲ್ಲೇ ಘೋಷಿಸಿದ್ದ ಬೆಂಝ್, ತನ್ನ ಬದ್ದತೆಯನ್ನು ಪ್ರದರ್ಶಿಸಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
- ಮರ್ಸಿಡಿಸ್ ಬೆಂಝ್ ಎ ಕ್ಲಾಸ್ 180 ಸ್ಪೋರ್ಟ್ (ಪೆಟ್ರೋಲ್): 24.95 ಲಕ್ಷ ರು.
- ಮರ್ಸಿಡಿಸ್ ಬೆಂಝ್ ಎ ಕ್ಲಾಸ್ 200 ಡಿ (ಡೀಸೆಲ್): 25.95 ಲಕ್ಷ ರು.
- ಪೆಟ್ರೋಲ್: 1.6 ಲೀಟರ್, 121 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ
- ಡೀಸೆಲ್: 2.2 ಲೀಟರ್, 140 ಅಶ್ವಶಕ್ತಿ, 300 ಎನ್‌ಎಂ ತಿರುಗುಬಲ
- ಗೇರ್ ಬಾಕ್ಸ್: ಸೆವೆನ್ ಸ್ಪೀಡ್ ಆಟೋಮ್ಯಾಟಿಕ್
- ಪರಿಷ್ಕತ ಬಂಪರ್,
- ಪರಿಷ್ಕೃತ ಹೆಡ್ ಲೈಟ್,
- ಪರಿಷ್ಕೃತ ಟೈಲ್ ಲ್ಯಾಂಪ್,
- 8 ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ,
- ಸ್ಮಾರ್ಟ್ ಫೋನ್ ಸಂಪರ್ಕ,
- ಆಪರ್ ಕಾರ್ ಪ್ಲೇ, ಮಿರರ್ ಲಿಂಕ್
- ಹೆಚ್ಚು ಸ್ಥಳಾವಕಾಶ,
- ಐಷಾರಾಮಿ ಚಾಲನಾ ಅನುಭವ
- 6 ಏರ್ ಬ್ಯಾಗ್,
- ಆಂಟೆಕ್ಷನ್ ಅಸಿಸ್ಟ್,
- ಬ್ರೇಕ್ ಅಸಿಸ್ಟ್,
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,
- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
- ಹಿಲ್ ಸ್ಟ್ಯಾರ್ಟ್,
- ಅಡಾಪ್ಟಿವ್ ಬ್ರೇಕಿಂಗ್.

ಎಂಜಿನ್ ತಾಂತ್ರಿಕತೆ
ಹಳೆಯ ಎ ಕ್ಲಾಸ್ ಮಾದರಿಗೆ ಹೋಲಿಸಿದಾ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಹಾಗಿದ್ದರೂ ಡೀಸೆಲ್ ಎಂಜಿನ್ ಮತ್ತಷ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಲಿದೆ.

ವೈಶಿಷ್ಟ್ಯಗಳು - ಹೊರಮೈ

ವೈಶಿಷ್ಟ್ಯಗಳು - ಒಳಮೈ

ಸುರಕ್ಷತೆ

ಪ್ರತಿಸ್ಪರ್ಧಿಗಳು
ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ವೋಲ್ವೋ ಎಕ್ಸ್40 ಹಾಗೂ ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ನೂತನ ಬೆಂಝ್ ಎ ಕ್ಲಾಸ್ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications