ಬೆಂಝ್ ಎಎಂಜಿ ಎಸ್63 ಎಂಟ್ರಿ; 2015ರಲ್ಲಿ 10ನೇ ಬಿಡುಗಡೆಯಿದು!
ಪ್ರಸಕ್ತ ಸಾಲಿನಲ್ಲಿ ಅನೇಕ ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಕೊಟ್ಟ ಮಾತಿಗೆ ತಕ್ಕಂತೆ ಅತ್ಯಂತ ಆಕರ್ಷಕ ಎಎಂಜಿ ಎಸ್63 ಸೆಡಾನ್ ಕಾರನ್ನು ಬಿಡುಗಡೆ ಮಾಡಿದೆ.
ಇದು ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಬೆಂಝ್ ನಿಂದ ಬಿಡುಗಡೆಯಾಗಿರುವ 10ನೇ ಮಾದರಿಯಾಗಿದೆ. ಇನ್ನು ನಾಲ್ಕು ತಿಂಗಳುಗಳು ಬಾಕಿ ಉಳಿದಿರುವಂತೆಯೇ ಮತ್ತಷ್ಟು ಹೊಸ ಮಾದರಿಗಳನ್ನು ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ.

ನೂತನ ಬೆಂಝ್ ಕಾರು ಭಾರತ ಮಾರುಕಟ್ಟೆಯಲ್ಲಿ ತನ್ನ ದೇಶದ್ದೇ ಪ್ರತಿಸ್ಪರ್ಧಿಯಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಮತ್ತು ಮಸೆರಟಿ ಕ್ವಾಟ್ರೊಪೋರ್ಟ್ ಮಾದರಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ.
ಮರ್ಸಿಡಿಸ್ ಬೆಂಝ್ ಎಎಂಜಿ ಎಸ್63 ಸೆಡಾನ್ ಕಾರು ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 2.53 ಕೋಟಿ ರು.ಗಳಾಗಿರಲಿದೆ.
ಎಂಜಿನ್ ತಾಂತ್ರಿಕತೆ
ನೂತನ ಬೆಂಝ್ ಕಾರು 5.5 ಲೀಟರ್ ಎಎಂಜಿ ಬೈ ಟರ್ಬೊ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 577 ಅಶ್ವಶಕ್ತಿ (90 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.
ಅಂತೆಯೇ ಏಳು ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ಟ್ ಎಂಸಿಟಿ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ.
ನಿರ್ವಹಣೆ
ನೂತನ ಬೆಂಝ್ ಕಾರು ಕೇವಲ 4.4 ಸೆಕಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷಅಠ 250 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರಲಿದೆ.
ವೈಶಿಷ್ಟ್ಯಗಳು
- ಆ್ಯಂಬಿಯಂಟ್ ಲೈಟಿಂಗ್,
- ಕಮಾಂಡ್ ಆನ್ ಲೈನ್,
- ಬರ್ಮ್ ಸ್ಟೆರ್ ಹೈ ಎಂಡ್ ತ್ರಿಡಿ ಆಡಿಯೋ ಸಿಸ್ಟಂ,
- ಮೆಟ್ಯಾಲಿಕ್ ಪೈಂಟ್ ವರ್ಕ್,
- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
- ಎಲ್‌ಇಡಿ ಗರಿಷ್ಠ ನಿರ್ವಹಣೆಯ ಹೆಡ್ ಲೈಟ್
ಸುರಕ್ಷತೆ
- ಎಚ್ಚರಿಕೆ ನೆರವು,
- ಢಿಕ್ಕಿ ತಡೆಯುವಿಕೆ ನೆರವು


Click it and Unblock the Notifications