ಬೆಂಝ್ ಸಿಎಲ್ಎ ಕ್ಲಾಸ್ ಬಿಡುಗಡೆಗೆ ಕ್ಷಣಗಣನೆ

By Nagaraja

ಈಗಾಗಲೇ 2015ನೇ ವರ್ಷವನ್ನು 'ಲೈವ್ ದಿ ಬೆಸ್ಟ್' ಎಂದು ಘೋಷಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಪ್ರಸಕ್ತ ಸಾಲಿನಲ್ಲಿ 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮಹತ್ತರ ಯೋಜನೆ ಹೊಂದಿದೆ.

ಇದರಂತೆ ಬೆಂಝ್ ಮೊದಲ ಉತ್ಪನ್ನ ಮಾರುಕಟ್ಟೆಗೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಬೆಂಝ್ ಸಿಎಲ್‌ಇ ಕ್ಲಾಸ್ ನಾಳೆ ಅಂದರೆ ಜನವರಿ 22ರಂದು ಬಿಡುಗಡೆಯಾಗಲಿದೆ.

Mercedes Benz cla class

ಮರ್ಸಿಡಿಸ್ ಬೆಂಝ್ ಸಿಎಲ್‌ಇ ಕ್ಲಾಸ್ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಪಡೆಯಲಿದೆ. ಇದರಲ್ಲಿ 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರಲಿದ್ದು, 135 ಅಶ್ವಶಕ್ತಿ (300 ಎನ್‌‍ಎಂ) ಉತ್ಪಾದಿಸಲಿದೆ. ಅದೇ ರೀತಿ 2.2 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ 100 ಅಶ್ವಶಕ್ತಿ (300 ಎನ್‌ಎಂ) ಉತ್ಪಾದಿಸುವಷ್ಟ ಸಾಮರ್ಥ್ಯ ಹೊಂದಿರಲಿದೆ. ಎರಡೂ ಎಂಜಿನ್‌ಗಳು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಪಡೆಯಲಿದೆ.

ಹೆಚ್ಚು ದುಬಾರಿ ಬೆಂಝ್ ಸಿಎಲ್‌ಎ45 ಎಎಂಜಿ ವರ್ಷನ್‌ಗೆ ಸಮಾನವಾದ ವಿನ್ಯಾಸ ತಂತ್ರಗಾರಿಕೆಯನ್ನು ಪಡೆದಿರುವುದು ಹೊಸ ಸಿಎಲ್‌ಎ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಬೆಂಝ್ ಎಂಜಿನಿಯರ್‌ಗಳು ಸಿಎಲ್‌ಇ ಮಾದರಿಗೆ ಹೆಚ್ಚು ಕ್ರೀಡಾತ್ಮಕ, ಶಕ್ತಿಶಾಲಿ ಹಾಗೂ ಏರೋಡೈನಾಮಿಕ್ ವಿನ್ಯಾಸ ಕಲ್ಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Mercedes Benz cla class

ಇನ್ನು ಕಾರಿನೊಳಗೆ ಪ್ರೀಮಿಯಂ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಮಾಹಿತಿ ಮನರಂಜಾನ ವ್ಯವಸ್ಥೆಯಿರಲಿದೆ. ಹಾಗೆಯೇ ಇದು ಪುಣೆಯ ಚಕನ್ ಘಟಕದಲ್ಲಿ ಜೋಡಣೆಯಾಗಲಿದೆ. ಪ್ರಸ್ತುತ ಕಾರು 28ರಿಂದ 32 ಲಕ್ಷ ರು.ಗಳ ಅಂದಾಜು ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, January 21, 2015, 14:46 [IST]
English summary
Mercedes-Benz has promised that they would be launching 15 new products and refreshes in India for 2015. The German automobile giant has also declared 2015 as the year of ‘Live The Best'. They will be launching their first new product of 2015 tomorrow on 22nd of January, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+