ಯುರೋಪ್ ಬಳಿಕ ಭಾರತ; ಬೆಂಝ್ ಸಿಎಲ್‌ಇ ನಿರ್ಮಾಣ ಪ್ರಾರಂಭ

Written By:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ತನ್ನ ಜನಪ್ರಿಯ ಸಿಎಲ್‌ಇ ಕ್ಲಾಸ್ ನಿರ್ಮಾಣವನ್ನು ಭಾರತದಲ್ಲಿ ಸ್ಥಳೀಯವಾಗಿ ಪ್ರಾರಂಭಿಸಿದೆ.

ಮುಖ್ಯಾಂಶಗಳು:

 • ಕ್ರೀಡಾತ್ಮಕ ಐಷಾರಾಮಿ ಸೆಡಾನ್ ಸಿಎಲ್‌ಇ ನಿರ್ಮಾಣ ಭಾರತದಲ್ಲಿ ಆರಂಭ,
 • ಭಾರತ ಯುರೋಪ್ ಆಚೆಗಿನ ಮೊಟ್ಟಮೊದಲ ಮಾರುಕಟ್ಟೆ,
 • ವೆಚ್ಚ ಕಡಿಮೆ, ಕಾಯುವಿಕೆ ಅವಧಿಯಲ್ಲಿ ಗಣನೀಯ ಇಳಿಕೆ,
 • ಹಬ್ಬದ ಆವೃತ್ತಿಯ ಮಾರಾಟಕ್ಕೆ ಉತ್ತೇಜನ
ಮರ್ಸಿಡಿಸ್ ಬೆಂಝ್

ವಿಶೇಷತೆಗಳು

 • ವಿಶಿಷ್ಟ ಕ್ರೀಡಾತ್ಮಕ ವಿನ್ಯಾಸ,
 • 1432 ಎಂಎಂ ಎತ್ತರ,
 • 7ಜಿ-ಡಿಸಿಟಿ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆ ಸ್ಟೀರಿಂಗ್ ವೀಲ್‌ನಲ್ಲಿ ಶಿಫ್ಟ್ ಪೆಡಲ್,
 • ಪ್ಯಾನರೋಮಿಕ್ ಸನ್ ರೂಫ್,
 • ಮೆಮೆರಿ ಜೊತೆ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಮತ್ತು ಮುಂಭಾಗ ಪ್ರಯಾಣಿಕರ ಸೀಟು ಬೆಲ್ಟ್,
 • ಸೊಂಟಕ್ಕೆ ಬೆಂಬಲ,
 • 470 ಲೀಟರ್ ಢಿಕ್ಕಿ ಜಾಗ,
 • ರಿವರ್ಸಿಂಗ್ ಕ್ಯಾಮೆರಾ,
 • ಟೆಲಿಮ್ಯಾಟಿಕ್ಸ್ ಜನರೇಷನ್ 5 ಇನ್ಪೋಟೈನ್ಮೆಂಟ್ ಸಿಸ್ಟಂ,
 • ನ್ಯೂ ಜನರೇಷನ್ ಮಲ್ಟಿ ಮೀಡಿಯಾ ಸಿಸ್ಟಂ,
 • ಗಾರ್ಮಿನ್ ಮ್ಯಾಪ್ ಪೈಲಟ್

ಇವೆಲ್ಲರ ಜೊತೆಗೆ ಜಿಎಲ್‌ಇ 200 ಸ್ಪೋರ್ಟ್ ಮಾದರಿಯ ಸ್ಥಳೀಯ ನಿರ್ಮಾಣ ಕಾರ್ಯವನ್ನು ಬೆಂಝ್ ಆರಂಭಿಸಿರುತ್ತದೆ.

ಮರ್ಸಿಡಿಸ್ ಬೆಂಝ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

 • ಸಿಎಲ್‌ಇ 200 ಸಿಡಿಐ ಸ್ಟ್ರೈಲ್: 30.70 ಲಕ್ಷ ರು.
 • ಪೆಟ್ರೋಲ್ ಸಿಎಲ್‌ಎ 200 ಸ್ಪೋರ್ಟ್: 32.90 ಲಕ್ಷ ರು.
 • ಸಿಎಲ್‌ಎ 200 ಸಿಡಿಐ ಸ್ಪೋರ್ಟ್: 33.90 ಲಕ್ಷ ರು.
 • ಪೆಟ್ರೋಲ್ ಜಿಎಲ್‌ಎ 200 ಸ್ಪೋರ್ಟ್: 33.90 ಲಕ್ಷ ರು.

ಎಂಜಿನ್

4 ಸಿಲಿಂಡರ್ ಟರ್ಬೊ ಚಾರ್ಜ್ಡ್ ಡೀಸೆಲ್

136 ಅಶ್ವಶಕ್ತಿ, 300 ಎನ್‌ಎಂ ತಿರುಗುಬಲ,

ಮೈಲೇಜ್ 17.9 ಕೀ.ಮೀ.

2 ಲೀಟರ್ ಪೆಟ್ರೋಲ್ ಎಂಜಿನ್

183 ಅಶ್ವಶಕ್ತಿ,

300 ಎನ್‌ಎಂ ತಿರುಗುಬಲ

ಮರ್ಸಿಡಿಸ್ ಬೆಂಝ್

ವೇಗವರ್ಧನೆ: 7.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ: ಗಂಟೆಗೆ 235 ಕೀ.ಮೀ.

ಭಾರತಕ್ಕೆ ತಕ್ಕುದಾದ ಸಸ್ಪೆನ್ಷನ್: ನೂತನ ಸಿಎಲ್‌ಎ ಕಾರಿನಲ್ಲಿ ಭಾರತೀಯ ರಸ್ತೆಗೆ ತಕ್ಕುದಾದ ಸಸ್ಫೆನ್ಷನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಹಾಗೂ ಆರಾಮದಾಯಕ ಆಸನ ವ್ಯವಸ್ಥೆಯನ್ನು ಹೊಂದಿರುತ್ತದೆ.

ಚಕ್ರಾಂತರ (2699 ಎಂಎಂ)

ಸುರಕ್ಷತೆ

 • ಎಬಿಎಸ್,
 • ಬಿಎಎಸ್,
 • ಇಎಸ್‌ಪಿ,
 • ಎಎಸ್‌ಆರ್,
 • ಹಿಲ್ ಸ್ಟ್ಯಾರ್ಟ್ ಅಸಿಸ್ಟ್
 • ಆರ್ ಏರ್ ಬ್ಯಾಗ್,
 • ಸುರಕ್ಷಿತ ದೇಹ ರಚನೆ,
 • ನಾವೀನ್ಯ ಸೆನ್ಸಾರ್ ತಂತ್ರಜ್ಞಾನ
 • ಯುರೋ ಎನ್‌ಸಿಎಪಿ ಡಿಕ್ಕಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್
English summary
Mercedes-Benz CLA Compact Sedan Now Manufactured In India
Story first published: Wednesday, September 9, 2015, 15:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark