ಮರ್ಸಿಡಿಸ್ ಬೆಂಝ್ ಸಿಎಲ್ ಎಸ್ ಭಾರತಲ್ಲಿ ಲಾಂಚ್
ಕಳೆದ ದಿನ ಎರಡೆರಡು ಮಾದರಿಗಳು ಭಾರತ ರಸ್ತೆ ಪ್ರವೇಶಿಸಿದೆ. ಈ ಪೈಕಿ ಮರ್ಸಿಡಿಸ್ ಬೆಂಝ್ ಇ 400 ಕ್ಯಾಬ್ರಿಯೊಲೆಟ್ ಬಗ್ಗೆ ನಾವೀಗಲೇ ವರದಿ ಮಾಡಿರುತ್ತೇವೆ. ಇದೇ ಸಂದರ್ಭದಲ್ಲಿ ಮಗದೊಂದು ಐಷಾರಾಮಿ ಕಾರು ಭಾರತಕ್ಕೆ ಲಗ್ಗೆಯಿಟ್ಟಿದೆ.
ಅದು ಯಾವುದು ಗೊತ್ತೇ? ಹೆಚ್ಚಿನ ಕುತೂಹಲ ಬೇಡ ಅದುವೇ 'ಮರ್ಸಿಡಿಸ್ ಬೆಂಝ್ ಸಿಎಲ್ ಎಸ್'. ಇದು ದೇಶದಲ್ಲಿ ಬೆಂಝ್ ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಿರುವ 15 ಮಾದರಿಗಳ ಭಾಗವಾಗಿರಲಿದೆ. ಈ ನ್ಯೂ ಜನರೇಷನ್ ಬೆಂಝ್ ಸಿಎಲ್ ಮಾದರಿಯು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿದೆ.
ಬೆಲೆ ಮಾಹಿತಿ: 76.5 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ತಾಂತ್ರಿಕತೆ
- 2.1 ಲೀಟರ್, ಫೋರ್ ಸಿಲಿಂಡರ್, ಡೀಸೆಲ್ ಎಂಜಿನ್,
- 500 ತಿರುಗುಬಲ,
- 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.
ವಿಶೇಷತೆ
- ಮಲ್ಟಿ ಬೀಮ್ ಎಲ್ ಇಡಿ ಹೆಡ್ ಲ್ಯಾಂಪ್,
- 8 ಇಂಚಿನ್ ಇನ್ಪೋಟೈನ್ಮೆಟ್ ಸ್ಕ್ರೀನ್,
- 14 ಸ್ಪೀಕರ್ ಹರ್ಮಾನ್ ಕರ್ಡಾನ್ ಸರೌಂಡ್ ಸೌಂಡ್ ಸಿಸ್ಟಂ,
- ಸ್ಯಾಟಲೈಟ್ ನೇವಿಗೇಷನ್,
- ಇಂಟರ್ ನೆಟ್.

ಸುರಕ್ಷತೆ
- 8 ಏರ್ ಬ್ಯಾಗ್,
- ಎಬಿಎಸ್,
- ಬ್ರೇಕ್ ಅಸಿಸ್ಟ್,
- ಇಎಸ್ ಪಿ,
- ಎಎಸ್ ಆರ್,
- ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
- ಅಟೆಕ್ಷನ್ ಅಸಿಸ್ಟ್


Click it and Unblock the Notifications








