ಬೆಂಝ್‌ನಿಂದಲೂ ಬರಲಿದೆ ಎಸ್ಟೇಟ್ ಕಾರು
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯಾಗಿರುವ ಆಡಿ ಇತ್ತೀಚೆಗಷ್ಟೇ ತನ್ನ ಆರ್ ಎಸ್6 ಅವಂತ್ ಎಸ್ಟೇಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಪ್ರಸ್ತುತ ಜರ್ಮನಿಯದ್ದೇ ಆಗಿರುವ ಮಗದೊಂದು ಲಗ್ಷುರಿ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಸಹ ಭಾರತಕ್ಕೆ ಎಸ್ಟೇಟ್ ಮಾದರಿಯನ್ನು ಪರಿಚಯಿಸುವ ಸಿದ್ಧತೆ ನಡೆಸುತ್ತಿದೆ.
ಇದು ಪ್ರೀಮಿಯಂ ಎಸ್ಟೇಟ್ ಕಾರುಗಳಿಗೆ ಹೊಸ ಆಯಾಮವನ್ನು ನೀಡಲಿದೆ. ಭಾರತೀಯ ಮಾರುಕಟ್ಟೆಗೆ ಮತ್ತಷ್ಟು ಸ್ಟೇಷನ್ ವ್ಯಾಗನ್ ಮಾದರಿಗಳನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ.

ಬೆಳೆದು ಬರುತ್ತಿರುವ ಮಾರುಕಟ್ಟೆಯಲ್ಲಿ ಒಂದಕ್ಕೊಂದು ಮಿಗಿಲಾದ ವಾಹನಗಳನ್ನು ಪರಿಚಯಿಸುವುದರಲ್ಲಿ ತಲ್ಲೀನವಾಗಿರುವ ಬೆಂಝ್, ಆಡಿ ಜೊತೆಗೆ ಬಿಎಂಡಬ್ಲ್ಯು ಸಂಸ್ಥೆಗಳು ನಂ.1 ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಹಾಗಿರುವ ಎಸ್ಟೇಟ್ ಮಾದರಿಗಳು ಶ್ರೀಮಂತ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಹಾಗೂ ಅನುಕೂಲವನ್ನು ಪ್ರದಾನ ಮಾಡಲಿದೆ.
ನೂತನ ಬೆಂಝ್ ಎಸ್ಟೇಟ್ ವ್ಯಾಗನ್ ಮಾದರಿಯಲ್ಲಿ ಈಗ ಮಾರುಕಟ್ಟೆಯಲ್ಲಿರುವ ಇ ಹಾಗೂ ಸಿ ಕ್ಲಾಸ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ತಾಜಾ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications