ಬೆಂಝ್‌ಗೆ ಮಗದೊಂದು ಕೋಡು; ಜಿಎಲ್‌ಇ ಎಸ್‌ಯುವಿ ಬಿಡುಗಡೆಗೆ ರೆಡಿ

By Nagaraja

ಹೊಸ ಹಾಗೂ ಪರಿಷ್ಕೃತ ಸೇರಿದಂತೆ 2015ನೇ ಸಾಲಿನಲ್ಲಿ 15 ಮಾದರಿಗಳನ್ನು ದೇಶಕ್ಕೆ ಪರಿಚಯಿಸುವುದಾಗಿ ಪಣ ತೊಟ್ಟಿರುವ ಜರ್ಮನಿಯ ಮೂಲದ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಕೊಟ್ಟ ಮಾತಿಗೆ ತಕ್ಕಂತೆ ತನ್ನ ಬದ್ಧತೆ ಪ್ರದರ್ಶಿಸುತ್ತಿದ್ದು 13ನೇ ಮಾದರಿ ದೇಶಕ್ಕೆ ಪರಿಚಯಿಸಲು ಸಜ್ಜಾಗುತ್ತಿದೆ.

ಬೆಂಝ್ ಟಾಪ್‌ಲೆಸ್ ಚೆಲುವೆಯ ಫುಲ್ ಬಾಡಿ ಸ್ಕ್ಯಾನಿಂಗ್ - ಮುಂದಕ್ಕೆ ಓದಿ

ವಾಹನ ಮೂಲಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಇದೇ ಮುಂಬರುವ 2015 ಅಕ್ಟೋಬರ್ 14ರಂದು ಬಿಡುಗಡೆ ಮಾಡಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಇ ಎಸ್‌ಯುವಿ

ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಎಸ್‌ಯುವಿ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ,
  • 3.0 ಲೀಟರ್ ವಿ6 - 254 ಅಶ್ವಶಕ್ತಿ, 620 ಎನ್‌ಎಂ ತಿರುಗುಬಲ
  • 2.1 ಲೀಟರ್ ಫೋರ್ ಸಿಲಿಂಡರ್ - 201 ಅಶ್ವಶಕ್ತಿ, 500 ಎನ್‌ಎಂ ತಿರುಗುಬಲ

ನೂತನ ಮಾದರಿಯು ಹಿಂದೆ ಮಾರಾಟದಲ್ಲಿ ಎಲ್-ಕ್ಲಾಸ್ ಮಾದರಿಯ ಸ್ಥಾನವನ್ನು ತುಂಬಲಿದೆ. ಅಲ್ಲದೆ ಬೆಂಝ್ ಜಿಎಲ್‌ಇ ಎಸ್‌ಯುವಿ ಎಎಂಜಿ ಶಕ್ತಿಯನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಇ ಎಸ್‌ಯುವಿ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಕ್ರಾಸ್ ವಿಂಡ್ ಅಸಿಸ್ಟ್, ಢಿಕ್ಕಿ ತಡೆಗಟ್ಟುವಿಕೆ ಸಹಾಯಿ, ಡೈನಾಮಿಕ್ ಸೆಲೆಕ್ಟ್, ಇಕೊ ಸ್ಟ್ಯಾರ್ಟ್/ಸ್ಟಾಪ್ ಕ್ರಿಯಾತ್ಮಕತೆ ಮತ್ತು ಇನ್ನಿತರ ಅನೇಕ ಭದ್ರತಾ ವ್ಯವಸ್ಥೆಗಳು ಲಭ್ಯವಾಗಲಿದೆ.

ಕಳಪೆ ಸೇವೆಯಿಂದ ಕುಪಿತಗೊಂಡ ಮಾಲಿಕನಿಂದ ಬೆಂಝ್ ಕಾರು ಧ್ವಂಸ - ಏನಿದು ಘಟನೆ ಮುಂದೆ ಓದಿ

ಇತ್ತೀಚೆಗಷ್ಟೇ ಮೇಬ್ಯಾಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಬೆಂಝ್ ಸಂಸ್ಥೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕಿತ್ತಲ್ಲದೆ ಎಲ್ಲ ಯುನಿಟ್ ಗಳನ್ನು ಮಾರಾಟ ಮಾಡುವಲ್ಲಿ ಯಶಸ್ಸು ಕಂಡಿತ್ತು [ಮರ್ಸಿಡಿಸ್ ಮೇಬ್ಯಾಕ್ ಎಸ್600 ಲಾಂಚ್ - ಸಂಪೂರ್ಣ ಲೇಖನ ಓದಲು ಕ್ಲಿಕ್ಕಿಸಿ].

Article Published On: Monday, October 5, 2015, 12:33 [IST]
English summary
Mercedes-Benz India To Launch GLE SUV On 14th October
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+