ಕಳೆದ ವರ್ಷದ ದಾಖಲೆ ಮುರಿದ ಬೆಂಝ್ ಐಷಾರಾಮಿ ಕಾರು

ಕಳೆದ ವರ್ಷದ ದಾಖಲೆಯನ್ನು ಮುರಿದಿರುವ ಜರ್ಮನಿಯ ಮೂಲದ ಐಷಾರಾಮಿ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ 2015ನೇ ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ 10,000ಕ್ಕೂ ಹೆಚ್ಚು ಮಾರಾಟವನ್ನು ಸಾಧಿಸಿದೆ.

2014 ಸಾಲಿನಲ್ಲಿ ಬೆಂಝ್ ಸಂಸ್ಥೆಯು 10,201 ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ಹೊಸ ಎತ್ತರಕ್ಕೆ ಬೆಳೆದಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಮೊದಲ ಒಂಬತ್ತು ತಿಂಗಳಲ್ಲೇ ಬೆಂಝ್ ತನ್ನ ಹಳೆಯ ದಾಖಲೆಯನ್ನು ತಿರುಚಿ ಬರೆದಿದೆ.

ಮರ್ಸಿಡಿಸ್ ಬೆಂಝ್

2015ನೇ ಸಾಲಿನ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಮೊದಲ ಒಂಬತ್ತು ತಿಂಗಳಲ್ಲೇ ಬೆಂಝ್ ಸಂಸ್ಥೆಯು 10,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಅಲ್ಲದೆ ಮುಂದಿನ ಮೂರು ತಿಂಗಳಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

2015ನೇ ಸಾಲಿನಲ್ಲಿ 15 ಹೊಸ ಹಾಗೂ ಪರಿಷ್ಕೃತ ಉತ್ಪನ್ನಗಳನ್ನು ಪರಿಚಯಿಸುವುದಾಗಿ ಪ್ರಕಟಿಸಿದ್ದ ಬೆಂಝ್ ಸಂಸ್ಥೆಯು ತನ್ನ ಬದ್ಧತೆಗೆ ತಕ್ಕಂತೆ ಮೊದಲ ಒಂಬತ್ತು ತಿಂಗಳಲ್ಲಿ ಇದುವರೆಗೆ 12 ಹೊಸ ಮಾದರಿಗಳನ್ನು ಪರಿಚಯಿಸಿದೆ.

ಪ್ರಸ್ತುತ ಸಂಸ್ಥೆಯು ದೇಶದ್ಯಾಂತ 80 ಶೋ ರೂಂಗಳನ್ನು ಹೊಂದಿದೆ. ಈ ಪೈಕಿ 13 ಹೊಸ ಶೋ ರೂಂಗಳನ್ನು ಇದೇ ಸಾಲಿನಲ್ಲಿ ತೆರೆದುಕೊಂಡಿತ್ತು.

Article Published On: Thursday, October 8, 2015, 17:31 [IST]
English summary
Mercedes-Benz Sells 10,000 Units From Jan-Sept 2015 In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+