ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

Written By:

ಆಡಿ ಎಕ್ಸ್ ಡ್ರೈವ್ ಭಾರಿ ಯಶಸ್ಸು ಕಂಡಿರುವುದು ನಿಮಗೆ ಗೊತ್ತಿರಬಹುದು. ಈಗ ಜರ್ಮನಿಯ ಮಗದೊಂದು ಐಷಾರಾಮಿ ಕಾರು ಸಂಸ್ಥೆ ಇದಕ್ಕೆ ಸಮಾನವಾದ ರೀತಿಯಲ್ಲಿ ಐಷಾರಾಮಿ ಚಾಲನೆ ಆಯೋಜಿಸುವ ಮೂಲಕ ಗಮನ ಸೆಳೆದಿದೆ.

ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ತನ್ನ ಈಗಿರುವ ಹಾಗೂ ಭವಿಷ್ಯದ ಗ್ರಾಹಕರಿಗಾಗಿ ವಿಶೇಷ ಲಕ್ಸ್ ಡ್ರೈವ್ ( LuxeDrive)ಐಷಾರಾಮಿ ಚಾಲನಾ ಅನುಭವವನ್ನು ಏರ್ಪಡಿಸಿತ್ತು.

ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

2015 ಎಪ್ರಿಲ್ 25 ಶನಿವಾರದಂದು ಬೆಂಗಳೂರಿನಲ್ಲಿ ಬೆಂಝ್ ಲಕ್ಸ್ ಡ್ರೈವ್ ಆಯೋಜನೆಯಾಗಿತ್ತು. ಇದರಂತೆ ಬೆಂಝ್ ವಾಹನ ಪ್ರೇಮಿಗಳಿಗೆ ಅತ್ಯಾದ್ಭುತ ಬೆಂಝ್ ದುಬಾರಿ ಕಾರುಗಳ ಚಾಲನಾ ಅನುಭವ ದೊರಕಿತ್ತು.

ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

ಭಾರತದಲ್ಲಿ ಮಾರಾಟದಲ್ಲಿರುವ ಎಲ್ಲ ಬೆಂಝ್ ಶ್ರೇಣಿಯ ವಾಹನಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

ಐಷಾರಾಮಿ ಕಾರು ಖರೀದಿ ಮಾಡುವವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿತ್ತು. ನೈಸ್ ರಿಂಗ್ ರೋಡ್ ಬಳಿಕ ವರಹಾಸಾಂದ್ರಾ ಎಕ್ಸ್ ಪ್ರೆಸ್ ವೇದಲ್ಲಿ ಬಳಿಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

ಲಕ್ಸ್ ಡ್ರೈವ್ ಚಾಲನಾ ಅನುಭವದ ಹೊರತಾಗಿಯೂ ಭಾಗಿದಾರಿಗಳಿಗೆ ಫ್ಯಾಶನಿಸ್ಟ್ ಗಳು ತಮ್ಮ ದೇಹಕ್ಕೆ ಯಾವ ರೀತಿಯ ಡ್ರೈಸ್ ಹೊಂದಿಕೆಯಾಗಲಿದೆ ಎಂಬುದನ್ನು ಹೇಳಿಕೊಡುತ್ತಿದ್ದರು.

ಬೆಂಗಳೂರಿನಲ್ಲಿ ಲಗ್ಷುರಿ ಚಾಲನೆಯ ಉಣಬಡಿಸಿದ ಬೆಂಝ್

ಇದಕ್ಕೂ ಮೊದಲು ಬೆಂಝ್ ಲಕ್ಸ್ ಡ್ರೈವ್ ಚಂಡೀಗಡ, ಗುರ್ಗಾಂವ್, ಸೂರತ್ ಹಾಗೂ ಮುಂಬೈನಲ್ಲೂ ಆಯೋಜಿಸಲಾಗಿತ್ತು. ಈಗ ಬೆಂಗಳೂರು ಮೂಲಕ ದಕ್ಷಿಣ ಭಾರತವನ್ನು ಪ್ರವೇಶಿಸಿದೆ.

English summary
Mercedes-Benz organises premium and luxury treatment to their existing as well as future customers. They call this one of a kind initiative as the LuxeDrive and is exclusive to India.
Story first published: Monday, April 27, 2015, 12:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark