ಬೆಂಝ್-ಲುಫ್ತಾಂಸಾದಿಂದ ವಿಮಾನ ವಿಐಪಿ ಕ್ಯಾಬಿನ್ ಪರಿಕಲ್ಪನೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್ ಸ್ಟೈಲ್ ಹಾಗೂ ಜರ್ಮನಿಯದ್ದೇ ಆಗಿರುವ ಐಕಾನಿಕ್ ವಿಮಾನಯಾನ ಸಂಸ್ಥೆಯಾಗಿರುವ ಲುಫ್ತಾಂಸಾ ಟೆಕ್ನಿಕ್ ಜತೆಗಾರಿಕೆಯಲ್ಲಿ ವಿಐಪಿ ವಿಮಾನ ಕ್ಯಾಬಿನ್ ಪರಿಕಲ್ಪನೆ ರಚನೆಯಾಗಲಿದೆ.

ಮೊದಲ ದರ್ಜೆಯ ಜೀವನ ಶೈಲಿಯ ಭಾಗವಾಗಿರುವ ವಿಐಪಿ ಪ್ರವಾಸವನ್ನು ಇನ್ನಷ್ಟು ಆಡಂಬರಗೊಳಿಸುವುದು ಎರಡು ಸಂಸ್ಥೆಗಳ ಉದ್ದೇಶವಾಗಿದೆ. ಇದರಂತೆ ಎರಡು ಸಂಸ್ಥೆಗಳು ತಮ್ಮ ವಿನ್ಯಾಸ ಹಾಗೂ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲಿದೆ.

ಬೆಂಝ್-ಲುಫ್ತಾಂಸಾದಿಂದ ವಿಐಪಿ ಕ್ಯಾಬಿನ್ ಪರಿಕಲ್ಪನೆ

ಸಾಂಪ್ರಾದಾಯಿಕ ವಿನ್ಯಾಸ ಕೊಠಡಿಯ ಬದಲಾಗಿ ಡೈನಾಮಿಕ್ ವಿನ್ಯಾಸಕ್ಕೆ ಮೊರೆ ಹೋಗಲಾಗುತ್ತಿದೆ. ಇದರಂತೆ ವಿಮಾನದ ಒಳಮೈ ರಚನೆಯು ಸಂಪೂರ್ಣವಾಗಿ ಪರಿಷ್ಕೃತಗೊಳ್ಳಲಿದೆ.

ಬೆಂಝ್-ಲುಫ್ತಾಂಸಾದಿಂದ ವಿಐಪಿ ಕ್ಯಾಬಿನ್ ಪರಿಕಲ್ಪನೆ

ಇಲ್ಲಿ ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಸ್ಟೈಲ್ ಹಾಗೂ ಲುಫ್ತಾಂಸಾ ನಾವೀನ್ಯತೆಯನ್ನು ಗುರಿ ಮಾಡಲಾಗುತ್ತಿದ್ದು, ಜಾಗತಿಕ ಖಾಸಗಿ ವಿಮಾನಯಾದನಲ್ಲಿ ವಿಶಿಷ್ಟ, ವಿನೂತನ ಸೌಲಭ್ಯಗಳನ್ನು ಒದಗಿಸಲಿದೆ.

ಬೆಂಝ್-ಲುಫ್ತಾಂಸಾದಿಂದ ವಿಐಪಿ ಕ್ಯಾಬಿನ್ ಪರಿಕಲ್ಪನೆ

ವಿಮಾನ ವಿನ್ಯಾಸ ಮಾರ್ಪಾಡುಗೊಳಿಸುವುದರಲ್ಲಿ ದಶಕಗಳ ಅನುಭವ ಹೊಂದಿರುವ ಲುಫ್ತಾಂಸಾ, ವಿಮಾನ ಕ್ಯಾಬಿನ್ ನಲ್ಲಿರಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸಲಿದೆ. ಇದಕ್ಕೆ ಬೆಂಝ್ ತನ್ನ ತಂತ್ರಗಾರಿಕೆಯ ಬಣ್ಣ ಬಳಿಯಲಿದೆ.

ಬೆಂಝ್-ಲುಫ್ತಾಂಸಾದಿಂದ ವಿಐಪಿ ಕ್ಯಾಬಿನ್ ಪರಿಕಲ್ಪನೆ

ಹೈ ಟೆಕ್ ತಂತ್ರಜ್ಞಾನ, ಆಧುನಿಕತೆ, ಹೊಸತನದತ್ತ ಎರಡು ಸಂಸ್ಥೆಗಳು ಗಮನ ಹರಿಸಲಿದೆ. ಅಂತೆಯೇ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು.

ಬೆಂಝ್-ಲುಫ್ತಾಂಸಾದಿಂದ ವಿಐಪಿ ಕ್ಯಾಬಿನ್ ಪರಿಕಲ್ಪನೆ

ಜಿನೆವಾದಲ್ಲಿ ನಡೆದ EBACE 2015 ಶೋದಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದೆ. ಇದರಂತೆ ಮಾಧ್ಯಮ ಗಾತ್ರದ ವಿಮನದಲ್ಲಿ ಆತಿಥಿಗಳಿಗಾಗಿ ಸಂಪೂರ್ಣವಾಗಿ ನವೀನ, ಐಷಾರಾಮಿ ಮತ್ತು ಸಮಗ್ರ ಕ್ಯಾಬಿನ್ ಪರಿಕಲ್ಪನೆ ರಚನೆಯಾಗಲಿದೆ.

English summary
In time for EBACE 2015, Mercedes-Benz Style and Lufthansa Technik have announced their cooperation on the design and completion of VIP aircraft cabins. The two companies will jointly develop an entirely innovative, luxurious and integrated cabin concept for short- and medium-haul aircraft.
Story first published: Thursday, May 28, 2015, 14:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark