ಎಎಂಜಿ ಪ್ಯಾಕೇಜ್ ಪಡೆದ ಮೊದಲ ಬೆಂಝ್ ಎಂಪಿವಿ
ಜರ್ಮನಿಯ ಮೂಲದ ಐಷಾರಾಮಿ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂಬರುವ ಫ್ರಾಂಕ್ ಫರ್ಟ್ ಮೋಟಾರು ಶೋಗಿಂತಲೂ ಮುಂಚಿತವಾಗಿ ನೂತನ ವಿ ಕ್ಲಾಸ್ ಬಹು ಬಳಕೆಯ ವಾಹನವನ್ನು ಅನಾವರಣಗೊಳಿಸಿದೆ. ಇದು ಶಕ್ತಿಶಾಲಿ ಎಎಂಜಿ ಪ್ಯಾಕೇಜ್ ಪಡೆಯಲಿರುವ ಮೊದಲ ಬೆಂಝ್ ಎಂಪಿವಿ ಎನಿಸಿಕೊಂಡಿದೆ.
ಹೆಚ್ಚು ಸ್ಟೈಲಿಷ್ ನೋಟ, ಅನುಕೂಲತೆ ಹಾಗೂ ಗರಿಷ್ಠ ನಿರ್ವಹಣೆಯನ್ನು ನೂತನ ವಿ ಕ್ಲಾಸ್ ಎಎಂಜಿ ಮಾದರಿಯಲ್ಲಿ ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ. ಆಕ್ರಮಣಕಾರಿ ವಿನ್ಯಾಸ ಹಾಗೂ 19 ಇಂಚುಗಳ ಅಲಾಯ್ ವೀಲ್ ಆಯ್ಕೆಯೂ ಮತ್ತಷ್ಟು ಪರಿಣಾಮಕಾರಿಯೆನಿಸಲಿದೆ.

ಭವಿಷ್ಯದಲ್ಲಿ ಶಕ್ತಿಶಾಲಿ ವಿ ಕ್ಲಾಸ್ ಎಎಂಜಿ ಮಾದರಿಯು ಭಾರತಕ್ಕೆ ಪ್ರವೇಶ ಪಡೆದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಯಾಕೆಂದರೆ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಬೆಂಝ್ ಯಾವತ್ತೂ ಹಿಂಜರಿದಿಲ್ಲ.

ಆಡಂಬರದ ಸಂಕೇತವಾಗಿ ಐಷಾರಾಮಿ ಸೌಲಭ್ಯಗಳು, ಪ್ಯಾನರೋಮಿಕ್ ಸನ್ ರೂಫ್, ಎಲ್‌ಇಡಿ ಜೊತೆಗೆ ಆಧುನಿಕ ತಂತ್ರಜ್ಞಾನಗಳು ಇದರಲ್ಲಿ ಒಳಗೊಂಡಿರಲಿದೆ.

ಸದಾ ಹೊಸತನದ ತಂತ್ರಜ್ಞಾನ ಅವಿಷ್ಕರಿಸುವುದರಲ್ಲಿ ಮುಂದಿರುವ ಬೆಂಝ್ ವಿ ಕ್ಲಾಸ್ ಮೂಲಕ ಮಾರಾಟವನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಲ್ಲಿದೆ.

ಪ್ರಸ್ತುತ ಬೆಂಝ್ ವಿ ಕ್ಲಾಸ್ ಎಎಂಜಿ ಮಾದರಿಯು ವರ್ಷಾಂತ್ಯದಲ್ಲಿ ಮಾರುಕಟ್ಟೆ ತಲುಪಲಿದೆ. ಇದಕ್ಕೂ ಮೊದಲು ಫ್ರಾಂಕ್ ಫರ್ಟ್ ನಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

ತಾಜಾ ವಾಹನ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.


Click it and Unblock the Notifications