ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

Written By:

ಭವಿಷ್ಯತ್ತಿನ ಕಾರು ಕಲ್ಪನೆ ರೂಪಿಸುವುದರಲ್ಲಿ ಸದಾ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬಂದಿರುವ ಜರ್ಮನಿಯ ಮೂಲಕ ಐಕಾನಿಕ್ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಜಪಾನ್‌ನಲ್ಲಿ ಆರಂಭವಾಗಿರುವ 44ನೇ ಟೋಕಿಯೋ ಮೋಟಾರು ಶೋದಲ್ಲಿ ಅತಿ ನೂತನ ವಿಷನ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

Also Read: ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಬಹುಮಹಡಿ ಕಟ್ಟಡ ಮುಂದಕ್ಕೆ ಓದಿ

ಈಗಾಗಲೇ ತಿಳಿಸಿರುವಂತೆಯೇ ಈ ಐದು ಸೀಟುಗಳ ವಿಷನ್ ಕಾನ್ಸೆಪ್ಟ್ ಕಾರು ಭವಿಷ್ಯತ್ತಿನ ಕಾರು ಕಲ್ಪನೆಗೆ ಹೆಚ್ಚಿನ ಉತ್ತೇಜನವನ್ನು ನೀಡಲಿದೆ. ಇದು ಸ್ವಯಂಚಾಲಿತ ಚಾಲನೆ ವ್ಯವಸ್ಥೆಯನ್ನು ಸಹಪಡೆದುಕೊಳ್ಳಲಿದೆ.

ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

ಶೂನ್ಯ ಮಾಲಿನ್ಯ, ಹೊಲೊಗ್ರಾಫಿಕ್ ಮಲ್ಟಿಮೀಡಿಯಾ ತಂತ್ರಜ್ಞಾನ, ಸೆಲ್ಪ್ ಡ್ರೈವಿಂಗ್ ಮತ್ತು ಭವಿಷ್ಯತ್ತಿನ ಡಿಸೈನ್ ಮುಂತಾದವುಗಳು ಇದರ ಪ್ರಮುಖ ಆಕರ್ಷಣೆಯಾಗಿರಲಿದೆ.

ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

ಪ್ರಸ್ತುತ ಬಹು ಬಳಕೆಯ ವಾಹನವನ್ನು ಬೆಂಝ್‌ನ ಗ್ಲೋಬಲ್ ನೆಟ್ ವರ್ಕ್ ಆಫ್ ಅಡ್ವಾನ್ಸಡ್ ಡಿಸೈನ್ ಸ್ಟುಡಿಯೋ ತಯಾರಿಸಿದೆ.

ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

4803 ಎಂಎಂ ಉದ್ದ, 2100 ಎಂಎಂ ಅಗಲ ಮತ್ತು 1600 ಎಂಎಂ ಎತ್ತರವನ್ನು ಇದು ಹೊಂದಿರಲಿದೆ. ಅಲ್ಲದೆ ಡೀಪ್ ಮೆಷಿನ್ ಲರ್ನಿಂಗ್, ಆಪ್ಸ್, ಮ್ಯಾಪ್ಸ್, ಇಂಟೆಲಿಜೆಂಟ್ ಪ್ರೆಡಿಕ್ಟಿವ್ ಎಂಜಿನ್ ಮುಂತಾದ ಸೌಲಭ್ಯಗಳು ಇದರಲ್ಲಿರಲಿದೆ.

ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

ಇನ್ನುಳಿದಂತೆ 26 ಇಂಚುಗಳ ಅಲಾಯ್ ವೀಲ್, ಸೈಡ್ ಸ್ಕರ್ಟ್, ವಿಶಿಷ್ಟ ಬಣ್ಣ, 360 ಡಿಗ್ರಿ ಕ್ಯಾಮೆರಾ ಮುಂತಾದಗಳು ಈ ಬೆಂಝ್ ಕಾರನ್ನು ವಿಶೇಷವಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ.

ಟೋಕಿಯೋದಲ್ಲಿ ಅರಳಿದ ಬೆಂಝ್ ಭವಿಷ್ಯತ್ತಿನ ಕಾರು

ಹಾಗಿದ್ದರೂ ಬೆಂಝ್‌ನ ಈ ಮಹತ್ತರ ಯೋಜನೆಯು ಯಾವಾಗ ನನಸಾಗಲಿದೆ ಎಂಬುದಕ್ಕೆ ಯಾವುದೇ ಸುಳಿವುಗಳು ಲಭ್ಯವಾಗಲಿದೆ. ಆದಷ್ಟು ಬೇಗನೇ ಬೆಂಝ್ ಭವಿಷ್ಯತ್ತಿನ ವಿಷನ್ ಕಾರು ನನಸಾಗಲಿಗೆ ಎಂಬುದು ನಮ್ಮ ನಿಮ್ಮೆಲ್ಲರ ಹಾರೈಕೆಯಾಗಿದೆ.

ಇವನ್ನೂ ಓದಿ

ಬೆಂಝ್-ಲುಫ್ತಾಂಸಾದಿಂದ ಬಹುಕೋಟಿಯ ವಿಐಪಿ ವಿಮಾನ ಕ್ಯಾಬಿನ್ ಪರಿಕಲ್ಪನೆ ಮುಂದಕ್ಕೆ ಓದಿ

English summary
Mercedes Reveals The Vision Tokyo Concept At Tokyo Motor Show
Story first published: Wednesday, October 28, 2015, 17:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark