ಜಗತ್ತಿನ ಅತ್ಯಂತ ನಿಶಬ್ದತೆಯ ಬೆಂಝ್ ಕಾರು ಭಾರತಕ್ಕೆ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್ ತನ್ನ ಪ್ರೀಮಿಯಂ ಸಬ್ ಬ್ರಾಂಡನ್ನು ಭಾರತಕ್ಕೂ ಪರಿಚಯಿಸುತ್ತಿದ್ದು, ನೂತನ ಮೇಬ್ಯಾಕ್ ಎಸ್600 ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600 ಮುಂಬರುವ ಸೆಪ್ಟೆಂಬರ್ 25ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಪ್ರಸ್ತುತ ಕಾರು ಈಗಾಗಲೇ ಲಾಸ್ ಏಜಂಲೀಸ್ ಹಾಗೂ ಚೀನಾದ ಗುನ್ಜಾಝು ಆಟೋ ಶೋಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಶಕ್ತಿಶಾಲಿ ಬೆಂಝ್ ಮೇಬ್ಯಾಕ್ ಎಸ್600 ಕಾರಿನಡಿಯಲ್ಲಿ 6.0 ಲೀಟರ್ ವಿ12 ಬೈ ಟರ್ಬೊ ಎಂಜಿನ್ ಆಳವಡಿಸಲಾಗಿದ್ದು, 830 ಎನ್‌ಎಂ ತಿರುಗುಬಲದಲ್ಲಿ 523 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಜಗತ್ತಿನಲ್ಲೇ 'ಅತ್ಯಂತ ನಿಶಬ್ದತೆಯ ಕಾರು' (world's quietest car) ಎಂದು ಬೆಂಝ್ ವ್ಯಾಖ್ಯಾನಿಸಿದೆ.

ವೈಶಿಷ್ಟ್ಯಗಳು

  • ಎಚ್ಚರಿಕೆ ಸಹಾಯ,
  • ಪ್ರಿ-ಸೇಫ್,
  • ಢಿಕ್ಕಿ ತಡೆ ನೆರವು,
  • ಬೆಂಝ್ ಎಂಬ್ರೇಸ್,
  • ರಿಯರ್ ಸೀಟು ಬೆಲ್ಟ್ ಏರ್ ಬ್ಯಾಗ್,
  • 9 ಏರ್ ಬ್ಯಾಗ್,
  • ಮಸಾಜ್ ಸೀಟು (ಹಾಟ್ ಸ್ಟೋನ್ ಮಸಾಜ್)
  • ಲೆಥರ್ ಹೋದಿಕೆ,
  • ಬರ್ಮ್ ಸ್ಟರ್ 3ಡಿ ಆಡಿಯೋ,
  • ರಿಯರ್ ಸೆಂಟರ್ ಆರ್ಮ್ ರೆಸ್ಟ್
ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600
5451 ಎಂಎಂ ಉದ್ದವನ್ನು ಹೊಂದಿರುವ ಬೆಂಝ್ ಮೇಬ್ಯಾಕ್ ಎಸ್600, ಸಾಮಾನ್ಯ ಎಸ್ ಕ್ಲಾಸ್ ಮಾದರಿಗಿಂತಲೂ 206 ಎಂಎಂ ಜಾಸ್ತಿ ಉದ್ದವನ್ನು ಹೊಂದಿರಲಿದೆ. ಅ್ಲಲದೆ ಎಕ್ಸ್ ಕ್ಯೂಟಿವ್ ಸೀಟುಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600, ಜಾಗತಿಕವಾಗಿ 1.4 ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ. ಪ್ರಸ್ತುತ ಕಾರು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಭಾರತವನ್ನು ತಲುವುದರೊಂದಿಗೆ ಸುಮಾರು ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600

ಒಟ್ಟಾರೆಯಾಗಿ ಪ್ರಸಕ್ತ ಸಾಲಿನಲ್ಲಿ 15 ಮಾದರಿಗಳನ್ನು ಪರಿಚಯಿಸುವುದಾಗಿ ವರ್ಷಾರಂಭದಲ್ಲೇ ಘೋಷಿಸಿದ್ದ ಬೆಂಝ್, 12ನೇ ಮಾದರಿಯ ಬಿಡುಗಡೆಗೆ ಸಿದ್ಧವಾಗುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

Article Published On: Tuesday, September 8, 2015, 13:58 [IST]
English summary
Mercedes-Maybach S600 India Launch Confirmed For 25th September
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+