ತನ್ನೆಲ್ಲ ಮಾದರಿಗಳ ಬೆಲೆ ಪರಿಷ್ಕೃತಗೊಳಿಸಿದ ಮಿನಿ
ಬಿಎಂಡಬ್ಲ್ಯು ಸಂಸ್ಥೆಯ ಒಡೆತನದಲ್ಲಿರುವ ಬ್ರಿಟನ್‌ನ ಐಕಾನಿಕ್ ಮಿನಿ, ಭಾರತದಲ್ಲಿ ಮಾರಾಟದಲ್ಲಿರುವ ತನ್ನೆಲ್ಲ ಶ್ರೇಣಿಗಳ ಕಾರುಗಳ ಬೆಲೆ ಪರಿಷ್ಕೃತಗೊಳಿಸಿದೆ. ಹೊಸ ಬೆಲೆ ನೀತಿಯು 2015 ಆಗಸ್ಟ್ 05ರಂದೇ ಜಾರಿಗೆ ಬಂದಿದೆ.
ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಮಿನಿ ಕಾರುಗಳು ದೇಶದಲ್ಲಿ ಮಾರಾಟವಾಗಲಿದೆ. ನಿಮ್ಮ ಮಾಹಿತಿಗಾಗಿ, ಈಗಷ್ಟೇ ಮಿನಿ ಸಂಸ್ಥೆಯು ಭಾರತಕ್ಕೆ ಅತಿ ನೂತನ ಕಂಟ್ರಿಮ್ಯಾನ್ ಕಾರನ್ನು ಬಿಡುಗಡೆಗೊಳಿಸಿತ್ತು.

ಭಾರತದಲ್ಲಿ ಮಿನಿ ಮಾದರಿಗಳು 28.5 ಲಕ್ಷ ರು.ಗಳಿಂದ 36.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.
ಮಿನಿ ಸಂಪೂರ್ಣ ಬೆಲಿ ಮಾಹಿತಿ ಪಟ್ಟಿ ಇಲ್ಲಿದೆ: (ಎಕ್ಸ್ ಶೋ ರೂಂ ದೆಹಲಿ ಮತ್ತು ಮಹಾರಾಷ್ಟ್ರ)
- ಮಿನಿ ಕೂಪರ್ ಡಿ 3 ಡೋರ್: 28.50 ಲಕ್ಷ ರು.
- ಮಿನಿ ಕೂಪರ್ ಡಿ 5 ಡೋರ್: 31.90 ಲಕ್ಷ ರು.
- ಮಿನಿ ಕೂಪರ್ ಎಸ್ 3 ಡೋರ್: 31.50 ಲಕ್ಷ ರು.
- ಮಿನಿ ಕೂಪರ್ ಕನ್ವರ್ಟಿಬಲ್: 33.90 ಲಕ್ಷ ರು.
- ಮಿನಿ ಕೂಪರ್ ಡಿ ಕಂಟ್ರಿಮ್ಯಾನ್: 36.50 ಲಕ್ಷ ರು.


Click it and Unblock the Notifications








