ಮಿಟ್ಸುಬಿಸಿ-ನಿಸ್ಸಾನ್ ಜತೆಗಾರಿಕೆಯಲ್ಲಿ ಹೊಸ ಸಣ್ಣ ಹಾಗೂ ಸೆಡಾನ್ ಕಾರು?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ವಿವಿಧ ಜಾಗತಿಕ ಮಾರುಕಟ್ಟೆಯನ್ನು ಗುರಿ ಮಾಡುವ ನಿಟ್ಟಿನಲ್ಲಿ ನಿಸ್ಸಾನ್ ಹಾಗೂ ರೆನೊ ಸಂಸ್ಥೆಗಳು ತನ್ನ ಫ್ಲ್ಯಾಟ್ ಫಾರ್ಮ್‌ಗಳನ್ನು ಪರಸ್ಪರ ಹಂಚಿಕೊಂಡಿದ್ದವು. ಇದಕ್ಕೊಂದು ನಿದರ್ಶನವೆಂಬಂತೆ ರೆನೊ ಸಂಸ್ಥೆಯು ಭಾರತದಲ್ಲಿ ಪಲ್ಸ್, ಸ್ಕಾಲಾ ಹಾಗೂ ಡಸ್ಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇನ್ನೊಂದೆಡೆ ನಿಸ್ಸಾನ್ ಸಂಸ್ಥೆಯು ಸಹ ಇದೇ ಮಾದರಿಗಳನ್ನು ಲಾಂಛನ ಬದಲಾಯಿಸಿ ಮೈಕ್ರಾ, ಸನ್ನಿ ಹಾಗೂ ಟೆರನೊ ರೂಪದಲ್ಲಿ ಪರಿಚಿಯಿಸಿತ್ತು.

ಈಗ ಜಪಾನ್‌ನದ್ದೇ ಆಗಿರುವ ಮಗದೊಂದು ಪ್ರಖ್ಯಾತ ಸಂಸ್ಥೆಯು ನಿಸ್ಸಾನ್ ಜೊತೆಗೆ ಪಾಲುದಾರಿಕೆ ಮಾಡುವ ಉತ್ಸುಕತೆಯಲ್ಲಿದೆ. ವರದಿಗಳ ಪ್ರಕಾರ ನಿಸ್ಸಾನ್ ಜೊತೆ ಕೈಜೋಡಿಸಲಿರುವ ಮಿಟ್ಸುಬಿಸಿ ಹೊಸತಾದ ಸೆಡಾನ್ ಕಾರನ್ನು ಹೊರ ತರಲಿದೆ. ಕೇವಲ ಮಿಡ್ ಸೈಜ್ ಮಾತ್ರವಲ್ಲದೆ ಸಣ್ಣ ಕಾರುಗಳನ್ನು ನಿರ್ಮಾಣ ಮಾಡುವುದು ಮಿಟ್ಸುಬಿಸಿ ಇರಾದೆಯಾಗಿದೆ. ಈ ಮುಖಾಂತರ ಭಾರತದಂತಹ ಮಾರುಕಟ್ಟೆಯನ್ನು ಮಿಟ್ಸುಬಿಸಿ ಗುರಿಯಾಗಿರಿಸಿಕೊಳ್ಳುತ್ತಿದೆ.

mitsubishi colt

ಪ್ರಸ್ತುತ ದೇಶದಲ್ಲಿ ಮಿಟ್ಸುಬಿಸಿ ದುಬಾರಿ ಪಜೆರೊ ಸ್ಪೋರ್ಟ್ಸ್ ಎಸ್‌ಯುವಿ ಮಾದರಿಯನ್ನು ಒದಗಿಸುತ್ತಿದೆ. ಈ ಹಿಂದೆ ಲ್ಯಾನ್ಸರ್ ಹಾಗೂ ಸಿಡಿಯಾ ಮಾದರಿಗಳು ಇದ್ದರೂ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಬಳಿಕ ಹಿಂತೆಯಲಾಗಿತ್ತು.

ಇಲ್ಲಿ ನಿಸ್ಸಾನ್ ನೆರವು ಪಡೆಯುವುದರ ಹಿಂದಿರುವ ಪ್ರಮುಖ ಉದ್ದೇಶ ಏನೆಂದರೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವುದು. ಮಿಟ್ಸುಬಿಸಿ ಹೊಸ ಕಾರುಗಳ ನಿರ್ಮಾಣಕ್ಕೆ ನಿಸ್ಸಾನ್ ವೇದಿಕೆ ಒದಗಿಸಲಿದೆ. ಇದು ಸ್ಪರ್ಧಾತ್ಮಕ ಬೆಲೆಗಳಲ್ಲಿ ವಾಹನಗಳನ್ನು ಮಾರಾಟ ಮಾಡಲು ಸಹಕಾರಿಯಾಗಲಿದೆ.

mitsubishi lancer

ಆದರೆ ಸದ್ಯಕ್ಕಂತೂ ಇತ್ತಂಡಗಳಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಇಲ್ಲಿ ಉಲ್ಲೇಖನೀಯ ಸಂಗತಿ ಏನೆಂದರೆ ಈ ಹಿಂದೆ ಇಂತಹದೊಂದು ಯೋಜನೆಯೊಂದಿಗೆ ಫ್ರಾನ್ಸ್‌ನ ರೆನೊ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಮಿಟ್ಸುಬಿಸಿ ಮುಂದಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಯೋಜನೆ ವೈಫಲ್ಯ ಕಂಡಿತ್ತು.

More from DriveSpark

Article Published On: Monday, February 9, 2015, 9:57 [IST]
English summary
Now Mitsubishi is in talks with fellow Japanese manufacturer for an alliance. They plan on working with Nissan to develop small as well as midsize sedans together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+