21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

By Nagaraja

ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್ ಮಾಲಿನ್ಯ ಮೋಸ ಪ್ರಕರಣದ ಬೆನ್ನಲ್ಲೇ ಹೇಳಿಕೆ ಕೊಟ್ಟಿರುವ ಮಗದೊಂದು ಐಕಾನಿಕ್ ಬ್ರಾಂಡ್ ಆಗಿರುವ ಆಡಿ, ಜಾಗತಿಕವಾಗಿ 21 ದಶಲಕ್ಷ ಡೀಸೆಲ್ ಕಾರುಗಳಲ್ಲಿ ಆಪಾದಿತ ಫೋಕ್ಸ್‌ವ್ಯಾಗನ್ ಸಾಫ್ಟ್‌ವೇರ್ ತಂತ್ರಾಂಶ ಬಳಕೆಯಾಗಿರುವುದನ್ನು ಖಚಿತಪಡಿಸಿದೆ.

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಹಮ್ಮಿಕೊಂಡಿದ್ದ ತನಿಖೆಯಲ್ಲಿ ಮಾಲಿನ್ಯ ತಪಾಸಣೆಯ ಮಾನದಂಡ ಮರೆಮಾಚಲು ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ವಿಶಿಷ್ಟ ಸಾಫ್ಟ್‌ವೇರ್ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿತ್ತು. ವರದಿಗಳ ಪ್ರಕಾರ 1.1 ಕೋಟಿ ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ತೊಂದರೆ ಕಂಡುಬಂದಿತ್ತು.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ಬಲ್ಲ ಮೂಲಗಳ ಪ್ರಕಾರ ಆಡಿ ಜನಪ್ರಿಯ ಮಾದರಿಗಳಾಗಿರುವ ಎ1, ಎ3, ಎ4, ಎ5, ಎ6, ಟಿಟಿ, ಕ್ಯೂ3 ಮತ್ತು ಕ್ಯೂ5 ಮಾದಿಗಳಲ್ಲೂ ಇದಕ್ಕೆ ಸಮಾನವಾದ ಮಾಲಿನ್ಯ ಮೋಸ ನಡೆದಿದೆ.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ಈ ಪೈಕಿ ಪಶ್ಚಿಮ ಯುರೋಪ್ ನ ಇಯು5 ಎಮಿಷನ್ ಮಾನದಂಡಗಳನ್ನು 1.42 ಮಿಲಿಯನ್ ಆಡಿ ಕಾರುಗಳು ಉಲ್ಲಂಘಿಸಿದೆ. ಜರ್ಮನಿಯಲ್ಲಿ ಮಾತ್ರವಾಗಿ 577000 ಲಕ್ಷ ಹಾಗೂ ಅಮೆರಿಕದಲ್ಲಿ 13,000ದಷ್ಟು ಪ್ರಕರಣ ದಾಖಲಾಗಿದೆ ಎಂಬುದನ್ನು ಆಡಿ ವಕ್ತಾರ ಖಚಿತಪಡಿಸಿದ್ದಾರೆ.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿತ್ತು.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ವಾಹನ ಜಗತ್ತಿನ ಅತಿ ದೊಡ್ಡ ಕಳ್ಳಾಟವನ್ನು ಪತ್ತೆ ಹಚ್ಚುವಲ್ಲಿ ಅಮೆರಿಕದ ತ್ರಿವಳಿ ಸಂಶೋಧಕರು ಯಶಸ್ವಿಯಾಗಿದ್ದರು. ಇವರಲ್ಲಿ ಓರ್ವ ಭಾರತೀಯ ಮೂಲದವರಾದ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಸಂಶೋಧಕರಾಗಿರುವ ಅರವಿಂದ ತಿರುವೆಂಗದಮ್ ಸೇರಿದ್ದರು.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ (ಇಪಿಎ) ನೀಡಿರುವ ಮಾಹಿತಿಗಳ ಪ್ರಕಾರ ಜನಪ್ರಿಯ ಪಸ್ಸಾಟ್, ಜೆಟ್ಟಾ, ಬೀಟೆಲ್, ಗಾಲ್ಫ್ ಹಾಗೂ ಆಡಿ ಎ3 ಸೇರಿದಂತೆ ಸರಿ ಸುಮಾರು 1.10 ಕೋಟಿ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿದೆ.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ತರುವಾಯ ನಡೆದ ಬೆಳವಣಿಗೆಯಲ್ಲಿ ಫೋಕ್ಸ್‌ವ್ಯಾಗನ್ ಸಿಇಒ ಮಾರ್ಟಿನ್ ವಿಂಟರ್‌ಕಾರ್ನ್ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಪ್ರಸಂಗವೂ ಎದುರಾಗಿತ್ತು.

21 ದಶಲಕ್ಷ ಆಡಿ ಕಾರುಗಳಲ್ಲೂ ಮಾಲಿನ್ಯ 'ಮೋಸ'

ಸಂಶೋಧಕರ ಪ್ರಕಾರ, ಪ್ರಯೋಗಾಲಯದಲ್ಲಿ ಉಗುಳುತ್ತಿದ್ದ ಪ್ರಮಾಣಕ್ಕಿಂತಲೂ 15ರಿಂದ 35ರಷ್ಟು ಪಟ್ಟು ಹೆಚ್ಚು ಮಾಲಿನ್ಯವನ್ನು ನೈಜ ರಸ್ತೆ ಪರಿಸ್ಥಿತಿಯಲ್ಲಿ ಉಗುಳುತ್ತಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

More from DriveSpark

Article Published On: Monday, September 28, 2015, 17:21 [IST]
English summary
2.1 million Audi cars are affected by Volkswagen emissions scandal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+